Ranjith on Honour Killing : ಮರ್ಯಾದಾ ಹತ್ಯೆ ಅಪರಾಧವಲ್ಲ, ಒಂದು ಒಂದು ರೀತಿಯ ಪ್ರೇಮ ಅಂತ ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.. ಅಲ್ಲದೆ, ಈ ರೀತಿಯ ಹತ್ಯೆಗಳನ್ನು ಪೋಷಕರು ತಮ್ಮ ಮಕ್ಕಳ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದನ್ನು ತೋರುತ್ತದೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ..
ಮರ್ಯಾದಾ ಹತ್ಯೆಗಳನ್ನು ಕೂಡ ಪೋಷಕರು ತಮ್ಮ ಮಕ್ಕಳ ಮೇಲೆ ತೋರುವ ಪ್ರೀತಿಯಂತೆ ನೋಡಬೇಕು ಎಂದು ತಮಿಳು ಖ್ಯಾತ ನಟ ರಂಜಿತ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಮರ್ಯಾದಾ ಹತ್ಯೆ ಕುರಿತು ತಮಿಳು ನಟ ರಂಜಿತ್ ಹೇಳಿಕೆ ವಿವಾದಾತ್ಮಕವಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ, ರಂಜಿಂತ್, ಮರ್ಯಾದಾ ಹತ್ಯೆಗಳು ಅಪರಾಧವಲ್ಲ. ಅವುಗಳನ್ನು ಕೊಲೆ ಎಂದು ಪರಿಗಣಿಸಬಾರದು. ಈ ರೀತಿಯ ಹತ್ಯೆಗಳನ್ನು ಪೋಷಕರು ತಮ್ಮ ಮಕ್ಕಳ ಮೇಲೆ ತೋರುವ ಪ್ರೀತಿಯಂತೆ ನೋಡಬೇಕು ಎಂದು ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ.
ಈ ಹೇಳಿಕೆಯನ್ನು ನಟ ಆಗಸ್ಟ್ 9 ರಂದು ನೀಡಿದ್ದರು, ಈಗ ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಬೇರೆ ಜಾತಿಯ ಹುಡುಗಿ ಅಥವಾ ಹುಡುಗನಿಗೆ ಮದುವೆ ಮಾಡುವ ನೋವು ಪೋಷಕರಿಗೆ ಮಾತ್ರ ಗೊತ್ತು ಎಂದು ನಟ ರಂಜಿತ್ ಹೇಳಿದ್ದಾರೆ. ಸಧ್ಯ ರಂಜಿತ್ ವಿರುದ್ಧ ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಮಕ್ಕಳು ಅನ್ಯ ಜಾತಿಯವರನ್ನು ಮದುವೆಯಾದಾಗ ಆದ ನೋವು ಪೋಷಕರಿಗೆ ಮಾತ್ರ ಗೊತ್ತು.. ತಂದೆ-ತಾಯಿಗಳಿಗೆ ಮಕ್ಕಳು ಕಾಣದಿದ್ದರೆ ನೋವಾಗುವುದಿಲ್ಲವೇ? ಆ ಸಮಯ ಅವರು ಕೋಪಗೊಳ್ಳುತ್ತಾರೆ, ಕೊಲ್ಲುತ್ತಾರೆ ಎಂದು ನಟ ಹೇಳಿದ್ದಾರೆ..
ರಂಜಿತ್ ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಿರಿದಾದ ಬಟ್ಟೆ ತೊಡುವ ಮಹಿಳೆಯರು ಯಾರ ಮುಂದೆ ಬೇಕಾದರೂ ಕುಣಿಯುತ್ತಾರೆ ಎಂದು ಕಾಮೆಂಟ್ ಮಾಡಿದ್ದರು. ಆ ಸಮಯದಲ್ಲಿ, ಈ ಕಾಮೆಂಟ್ಗಳನ್ನು ತೀವ್ರವಾಗಿ ಟೀಕಿಸಲಾಯಿತು. ಇವರು ನಟಿಸಿ ನಿರ್ದೇಶಿಸಿದ "ಕವುಂಡಂಪಲಯಲಂ" ಚಿತ್ರವೂ ಹಲವು ವಿವಾದಾತ್ಮಕ ವಿಷಯಗಳನ್ನು ಹೊಂದಿತ್ತು.
ಅಲ್ಲದೆ, ಮಹಿಳೆಯರ ಕುರಿತಾದ ಸಂಭಾಷಣೆ ಈಗಾಗಲೇ ವಿವಾದಕ್ಕೀಡಾಗಿದೆ. ನೆಟ್ಟಿಗರು ರಂಜಿತ್ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಮರ್ಯಾದಾ ಹತ್ಯೆಯನ್ನು ಪ್ರೀತಿ ಎಂದು ಭಾವಿಸಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಇಂತಹವರು ಸಮಾಜಕ್ಕೆ ಅಪಾಯಕಾರಿ ಎನ್ನುತ್ತಾರೆ ನೆಟ್ಟಿಗರು.
ಇಂತಹವರನ್ನು ಜೈಲಿಗೆ ಹಾಕಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮರ್ಯಾದಾ ಹತ್ಯೆಗಳು ಸಮರ್ಥನೀಯವೇ..? ಕೆಲವರು ನೇರವಾಗಿ ನಟನಿಗೆ ಪ್ರಶ್ನಿಸುತ್ತಿದ್ದಾರೆ. ರಂಜಿತ್ ನಿಯಂತ್ರಣ ತಪ್ಪಿ ಮಾತನಾಡುತ್ತಿದ್ದು, ಮುಂದೆ ಇಂತಹ ಹೇಳಿಕೆ ನೀಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.