Li-Fi Technology: ಇನ್ಮುಂದೆ Li-Fi ತಂತ್ರಜ್ಞಾನದ ಮೂಲಕ Internet ಬಳಸಿ... ಏನಿದು Li-Fi?

Li-Fi Technology: Li-Fi ಹೊಸ ತಲೆಮಾರಿನ ತಂತ್ರಜ್ಞಾನ ವ್ಯವಸ್ಥೆಯಾಗಿದೆ. ಇದರಲ್ಲಿ, ಫೈಬರ್ ಅಥವಾ ಉಪಗ್ರಹದ ಬದಲು ಬೆಳಕಿನ ಕಿರಣಗಳ ಸಹಾಯದಿಂದ ಇಂಟರ್ನೆಟ್ ಡೇಟಾವನ್ನು ವರ್ಗಾಯಿಸಲಾಗುತ್ತದೆ.

  • Dec 16, 2020, 18:09 PM IST

ನವದೆಹಲಿ: Li-Fi Technology: ಇಂಟರ್‌ನೆಟ್‌ ಸೇವೆಗಾಗಿ ಬಳಕೆಯಾಗುವ ವೈಫೈ (Wi-Fi) ತಂತ್ರಜ್ಞಾನ  ಶೀಘ್ರದಲ್ಲಿಯೇ ಇತಿಹಾಸವಾಗಲಿದೆ. ಮುಂದಿನ ದಿನಗಳಲ್ಲಿ, ನೀವು ಇಂಟರ್ನೆಟ್ ಸಂಪರ್ಕಕ್ಕಾಗಿ ಲೈ -ಫೈ ತಂತ್ರಜ್ಞಾನವನ್ನು ಬಳಸಲಿರುವಿರಿ. ಇದರ ದೊಡ್ಡ ವೈಶಿಷ್ಟ್ಯವೆಂದರೆ ಲೈ-ಫೈ ಪ್ರಸ್ತುತ ಚಾಲ್ತಿಯಲ್ಲಿರುವ  ವೈ-ಫೈ ಇಂಟರ್ನೆಟ್ ವೇಗಕ್ಕಿಂತ 20 ಪಟ್ಟು ವೇಗವಾಗಿರಲಿದೆ.

 

ಇದನ್ನು ಓದಿ- ಈಗ ಇಡೀ ದೇಶಾದ್ಯಂತ 2 ಸಾವಿರ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ

1 /5

ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಗೂಗಲ್ ಭಾರತದಲ್ಲಿ Project X ಅಡಿಯಲ್ಲಿ Li-Fi ತಂತ್ರಜ್ಞಾನವನ್ನು ಆಂಧ್ರಪ್ರದೇಶದಲ್ಲಿ ಯಶಸ್ವಿ ಪರೀಕ್ಷೆ ಕೈಗೊಂಡಿದೆ.

2 /5

ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ Google ತನ್ನ ನೂತನ Li-Fi ತಂತ್ರಜ್ಞಾನವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು Airtel ಹಾಗೂ Reliance Jio ಜೊತೆಗೆ ಮಾತುಕತೆ ನಡೆಸುತ್ತಿದೆ. ET ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಶೀಘ್ರದಲ್ಲಿಯೇ Airtel ಹಾಗೂ Reliance Jio ಇಡೀ ದೇಶಾದ್ಯಂತ ಈ ಸೇವೆಯನ್ನು ಆರಂಭಿಸುವ ಕಾರ್ಯ ಶುರು ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.

3 /5

Li-Fi ಒಂದು ಹೊಸ ತಲೆಮಾರಿನ ತಂತ್ರಜ್ನಾನವಾಗಿದ್ದು, ಇದರಲ್ಲಿ ಇಂಟರ್ನೆಟ್ ಡೇಟಾ ಅನ್ನು ಫೈಬರ್ ಅಥವಾ ಸ್ಯಾಟಲೈಟ್ ಬದಲು ಲೈಟ್ ಬೀಮ್ಸ್ ಮೂಲಕ ವರ್ಗಾಯಿಸಲಾಗುತ್ತದೆ. ಲೈಟ್ ಬೀಮ್ಸ್ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೇಬಲ್ ಅಥವಾ ಕನೆಕ್ಷನ್ ಇಲ್ಲದೆಯೇ ದತ್ತಾಂಶ ವರ್ಗಾವಣೆ ಮಾಡುತ್ತದೆ. ಇದು ಗುಡ್ಡಗಾಡು ಪ್ರದೇಶಗಳಲ್ಲಿಯೂ ಕೂಡ ಇಂಟರ್ನೆಟ್ ಸೇವೆನನ್ನು ತಲುಪಿಸಲು ತುಂಬಾ ಪರಿಣಾಮಕಾರಿಯಾಗಿದೆ.

4 /5

Project X ಅಡಿಯಲ್ಲಿ Li-Fi ಇಂಟರ್ನೆಟ್ ವೇಗ 20GB ಗಳಷ್ಟು ಹೆಚ್ಚಾಗಲಿದೆ. ಪ್ರಸ್ತುತ ದೇಶದಲ್ಲಿ 1 GB ಗೆ ಇಂಟರ್ನೆಟ್ ಸ್ಪೀಡ್ ಸೀಮಿತವಾಗಿದೆ.

5 /5

ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ Li-Fiನ ಒಂದು ಸೆಟ್ ಅಪ್ ಅಳವಡಿಸಿ ಸರಿ ಸುಮಾರು 20 ಕಿ.ಮೀ ಪರದಿಯನ್ನು ಕವರ್ ಮಾಡಬಹುದಾಗಿದೆ. ಈ 20 ಕಿ.ಮೀ ಪರಧಿಯಲ್ಲಿ ಬಳಕೆದಾರರು ಹೈ ಸ್ಪೀಡ್ ಇಂಟರ್ನೆಟ್ ಲಾಭವನ್ನು ಪಡೆಯಬಹುದಾಗಿದೆ.