Lucky Girls Zodiac: ಈ ರಾಶಿಚಕ್ರದ ಹುಡುಗಿಯರು ಪತಿಗೆ ಅದೃಷ್ಟ ಲಕ್ಷ್ಮಿಯರು

Lucky Girls Zodiac: ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರತಿಯೊಂದು ರಾಶಿಯ ಗುಣ, ಸ್ವಭಾವ ಎಲ್ಲವನ್ನೂ ಉಲ್ಲೇಖಿಸಲಾಗಿರುತ್ತದೆ. ಅಂತೆಯೇ, ಕೆಲವು ರಾಶಿಚಕ್ರದ ಹುಡುಗಿಯರು ಪತಿಗೆ ಅದೃಷ್ಟ ಲಕ್ಷ್ಮಿಯರು ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಅದೃಷ್ಟ ಲಕ್ಷ್ಮಿಯರು ಎಂದು ಹೇಳಲಾಗುತ್ತದೆ. 

2 /6

ಹೌದು, ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ, ಪತಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯ ಹೆಣ್ಣು ಮಕ್ಕಳನ್ನು ವಿವಾಹವಾಗಿ ಅವರು ಗಂಡನ ಮನೆಗೆ ಪದಾರ್ಪಣೆ ಮಾಡುತ್ತಿದ್ದಂತೆ  ಗಂಡನ ಅದೃಷ್ಟವನ್ನು ಬೆಳಗಿಸಬಹುದು ಎಂದು ನಂಬಲಾಗಿದೆ. ಆ ರಾಶಿಗಳು ಯಾವುವು ಎಂದು ನೋಡುವುದಾದರೆ... 

3 /6

ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಷ ರಾಶಿಯ ಹುಡುಗಿಯರನ್ನು ಪತಿಯ ಪಾಲಿಗೆ ಅದೃಷ್ಟ ಲಕ್ಷ್ಮಿ ಎಂದು ಬಣ್ಣಿಸಲಾಗುತ್ತದೆ. ಮಂಗಳನಿಂದ ಪ್ರಭಾವಿತರಾದ ಈ ಹುಡುಗಿಯರು ತುಂಬಾ ಧೈರ್ಯಶಾಲಿಗಳಾಗಿದ್ದು ಪ್ರತಿ ಹೆಜ್ಜೆಯಲ್ಲೂ ಗಂಡನಿಗೆ ಜೊತೆಯಾಗಿ ನಿಲ್ಲುತ್ತಾರೆ. 

4 /6

ವೃಷಭ ರಾಶಿಯ ಹೆಣ್ಣು ಮಕ್ಕಳು ಅವರ ಗಂಡನಿಗೆ ಅದೃಷ್ಟ ದೇವತೆಯಾಗಿರುತ್ತಾರೆ. ತುಂಬಾ ಬುದ್ದಿವಂತರಾದ ಈ ಹೆಣ್ಣುಮಕ್ಕಳು ತಮ್ಮ ಗಂಡನಿಗೆ ಮಾತ್ರವಲ್ಲ,  ಅವರೊಂದಿಗೆ ಸಂಬಂಧ ಹೊಂದಿರುವ ಅವರ ಇಡೀ ಕುಟುಂಬಕ್ಕೆ  ಅದೃಷ್ಟವಂತರು ಎನ್ನಲಾಗುತ್ತದೆ. 

5 /6

ಸೌಮ್ಯ ಸ್ವಭಾವದವರಾದ ಕರ್ಕಾಟಕ ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾದರೆ ಆ ಕ್ಷಣದಿಂದಲೇ ಪತಿಯ ಅದೃಷ್ಟ ಖುಲಾಯಿಸುತ್ತದೆ. ಕುಟುಂಬದಲ್ಲಿ ಮಾತ್ರವಲ್ಲ ಸಮಾಜದಲ್ಲಿಯೂ ಆತನ ಗೌರವ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. 

6 /6

ಸದಾ ಉತ್ಸಾಹದ ಚಿಲುಮೆಯಂತೆ ಕಾಣಿಸಿಕೊಳ್ಳುವ ಮಕರ ರಾಶಿಯ ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲಿ ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಈ ರಾಶಿಯ ಹುಡುಗಿಯರು ತಮ್ಮ ಪತಿಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅವರ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.