ಈ ರಾಶಿಯವರಿಗೆ ಮಾಳವ್ಯ ರಾಜಯೋಗ.! ಆಗುವುದು ಆಕಸ್ಮಿಕ ಧನಲಾಭ

 ಫೆಬ್ರವರಿ 15, 2023 ರಂದು, ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಈ ಸಂಕ್ರಮಣದೊಂದಿಗೆ ಮಾಳವ್ಯ ರಾಜಯೋಗ  ನಿರ್ಮಾಣವಾಗುತ್ತಿದೆ. ಮಾಳವ್ಯ ರಾಜಯೋಗದ ಮೂಲಕ 3 ರಾಶಿಯವರ ಅದೃಷ್ಟ ಬೆಳಗಲಿದೆ. 

 ಬೆಂಗಳೂರು :  ಫೆಬ್ರವರಿ 15, 2023 ರಂದು, ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಈ ಸಂಕ್ರಮಣದೊಂದಿಗೆ ಮಾಳವ್ಯ ರಾಜಯೋಗ  ನಿರ್ಮಾಣವಾಗುತ್ತಿದೆ. ಮಾಳವ್ಯ ರಾಜಯೋಗದ ಮೂಲಕ 3 ರಾಶಿಯವರ ಅದೃಷ್ಟ ಬೆಳಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮೀನ ರಾಶಿ : ಫೆಬ್ರವರಿಯಲ್ಲಿ ರೂಪುಗೊಳ್ಳುವ ಮಾಳವ್ಯ ಯೋಗವು ಈ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಜಯೋಗವು ಮೀನ ರಾಶಿಯಲ್ಲಿ ರೂಪುಗೊಳ್ಳಲಿದೆ. ಮಾಳವ್ಯ ರಾಜ ಯೋಗದ ಕಾರಣ ಕೆಲಸದ ಶೈಲಿಯಲ್ಲಿ ಅಭಿವೃದ್ಧಿಯಾಗಲಿದೆ. ನೀವು ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಶಂಸಿಸಲಾಗುವುದು. ಈ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳಿಗೂ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಗಳಿಕೆಯು ಉತ್ತಮವಾಗಿರುತ್ತದೆ.  

2 /3

ಕುಂಭ ರಾಶಿ : ಶುಕ್ರ ಸಂಕ್ರಮಣದಿಂದ ರೂಪುಗೊಳ್ಳುವ ಮಾಳವ್ಯ ರಾಜಯೋಗವು ಕುಂಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಆಕಸ್ಮಿಕವಾಗಿ ಧನಲಾಭವಾಗುವ ಸಂಭವವಿದೆ. ಇಷ್ಟೇ ಅಲ್ಲ, ಈ ಸಮಯದಲ್ಲಿ ಉದ್ಯಮಿಗಳಿಗೆ ವ್ಯಾಪಾರದಲ್ಲಿ ಭಾರೀ ಲಾಭವಾಗುವುದು.  ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇರುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಹಳೆಯ ಸಾಲದಿಂದ ಮುಕ್ತಿ ಸಿಗುವುದು. 

3 /3

ವೃಷಭ ರಾಶಿ : ಈ ರಾಶಿಯವರಿಗೆ ಈ ಸಮಯವು ಪ್ರಯೋಜನಕಾರಿಯಾಗಿರಲಿದೆ.ಈ ರಾಶಿಯ ಹತ್ತನೇ ಮನೆಯಲ್ಲಿ ಮಾಳವ್ಯ ಯೋಗವು ರೂಪುಗೊಳ್ಳಲಿದೆ.  ಈ ಅವಧಿಯಲ್ಲಿ ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ಅವಕಾಶಗಳು ಸಿಗಲಿದೆ.  ಯಾವ ಕೆಲಸವೇ ಮಾಡಿದರೂ ಯಶಸ್ಸು ಸಿಗಲಿದೆ. ಈ ಸಮಯದಲ್ಲಿ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಯೋಗವಿರಲಿದೆ. ಮತ್ತೊಂದೆಡೆ, ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಯೋಚನೆ ಇದ್ದರೆ, ಈ ಸಮಯ ಸರಿಯಾಗಿದೆ. ( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)