Mallika Sherawat: ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಈ ನಟಿಯ ಹೆಸರು ಕೇಳಿದರೆ ಇಂದಿಗೂ ಕೂಡ ಪಡ್ಡೆ ಹುಡುಗರ ಮನಸ್ಸಿನಲ್ಲಿ ಚಿಟ್ಟೆ ಹಾರಾಡುತ್ತದೆ.
Mallika Sherawat: ಚೊಚ್ಚಲ ಸಿನಿಮಾದಲ್ಲೇ ಸಂಚಲನ ಮೂಡಿಸಿದ್ದ ಈ ಸುಂದರಿ, ತಮ್ಮ ನಟನೆಯ ಮೂಲಕ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ವಯಸ್ಸು 47 ಆದ್ರೂ ಇಂದಿಗೂ ಒಂಟಿಯಾಗಿರುವ ಈಕೆ ತಮ್ಮ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
'ಮರ್ಡರ್' ಸಿನಿಮಾ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿ 2004ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಟಿಸಿ ಸೈ ಎನಿಸಿಕೊಂಡ ನಟಿ ಮಲ್ಲಿಕಾ ಶೆರಾವತ್.
ತಮ್ಮ ಚೊಚ್ಚಲ ಸಿನಿಮಾದಲ್ಲೇ ಖ್ಯಾತಿ ಗಳಿಸಿದ ಈಕೆ 47ರ ಹರೆಯದಲ್ಲೂ ಒಂಟಿಯಾಗಿದ್ದು ಈ ಬಗ್ಗೆ ಬಹಳ ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ಮಲ್ಲಿಕಾ ಶೆರಾವತ್, "ನಾನು ಹೆಚ್ಚು ಗಮನ ಸೆಳೆಯುತ್ತೇನೆ, ಅದೆಂದರೆ ನನಗೆ ತುಂಬಾ ಇಷ್ಟ" ಎಂದಿದ್ದಾರೆ.
ಮದುವೆ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಮಲ್ಲಿಕಾ ಶೆರಾವತ್, ಎಲ್ಲಾದರೂ ಹೋಗಬೇಕೆನಿಸಿದರೆ "ಸೂಟ್ಕೇಸ್ ಪ್ಯಾಕ್ ಮಾಡಿ ಹೊರಡುತ್ತೇನೆ". ನಾನು ನನ್ನ ಸಿಂಗಲ್ ಸ್ಟೇಟಸ್ ಅನ್ನು ಆನಂದಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
47ರ ಹರೆಯದಲ್ಲೂ ಒಂಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ಬಹುಶಃ ತುಂಬಾ ನಿರೀಕ್ಷಿಸುತ್ತಿದ್ದೇನೆ. ನಾವು ಯಾರಿಗಾದರೂ ಸಮಯ, ಭಾವನೆಗಳನ್ನೂ ಹೂಡಿಕೆ ಮಾಡುತ್ತೇವೆ ಎಂದರೆ ಆ ವ್ಯಕ್ತಿ (ಸಂಗಾತಿ) ಅದಕ್ಕೆ ಅರ್ಹರಾಗಿರಬೇಕು. ಕಳೆದ ಕೆಲವು ವರ್ಷಗಳಿಂದ ಅಂತಹ ವ್ಯಕ್ತಿಗಾಗಿ ಕಾಯುತ್ತಿದ್ದೇನೆ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.