Mangala Margi: ಇಂದಿನಿಂದ ಈ 5 ರಾಶಿಯವರ ಜೀವನದಲ್ಲಿ ಅಪಾರ ಧನಲಾಭ ತರಲಿದ್ದಾನೆ ಮಾರ್ಗಿ ಮಂಗಳ

Mangala Margi Effect: ವೃಷಭ ರಾಶಿಯಲ್ಲಿ ಮಂಗಳನ ನೇರ ನಡೆ ಆರಂಭವಾಗಲಿದ್ದು, ಇದರ ಪರಿಣಾಮವಾಗಿ ಐದು ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ.

Mangala Margi Effect: ಧೈರ್ಯ, ಭೂಮಿ, ಶಕ್ತಿ, ಸಂಪತ್ತುಕಾರಕನಾದ ಮಂಗಳ ಗ್ರಹವು ಇಂದಿನಿಂದ ವೃಷಭ ರಾಶಿಯಲ್ಲಿ ನೇರವಾಗಿ ಚಲಿಸಲಿದೆ. ಮಂಗಳನ ನೇರ ನಡೆಯ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ ಈ ಸಮಯವನ್ನು ಐದು ರಾಶಿಯವರಿಗೆ ತುಂಬಾ ಶುಭ. ಮಂಗಳ ಗ್ರಹದ ನೇರ ನಡೆಯಿಂದ ಆ ರಾಶಿಯವರಿಗೆ ಬಂಪರ್ ಧನಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸ್ವ ರಾಶಿಯಲ್ಲಿ ಮಂಗಳನ ನೇರ ಸಂಚಾರವು ಈ ರಾಶಿಯವರ ವೈಯಕ್ತಿಕ ಜೀವನದಲ್ಲಿ ಮಹತ್ವದ ಪರಿಣಾಮ ಬೀರಲಿದ್ದಾನೆ. ಈ ಸಮಯದಲ್ಲಿ ನಿಜವಾದ ಪ್ರೀತಿಗಾಗಿ ಹಂಬಲಿಸುತ್ತಿರುವವರಿಗೆ ಸಮಯವು ಅತ್ಯದ್ಭುತವಾಗಿದೆ.   

2 /5

ಇಂದಿನಿಂದ ವೃಷಭ ರಾಶಿಯಲ್ಲಿ ನೇರವಾಗಿ ಸಂಚರಿಸಲಿರುವ ಮಂಗಳನು ಮಿಥುನ ರಾಶಿಯವರ ವೃತ್ತಿ ಬದುಕಿನಲ್ಲಿ ಮಂಗಳಕರ ಫಲಗಳನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಹೊಸ ಆರ್ಥಿಕ ಮೂಲಗಳು ಕೂಡ ಸೃಷ್ಟಿಯಾಗಲಿದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ.

3 /5

ಮಾರ್ಗಿ ಮಂಗಳನು ಸಿಂಹ ರಾಶಿಯವರಿಗೆ ವಿದೇಶಿ ಪ್ರವಾಸ ಯೋಗವನ್ನು ಕರುಣಿಸಬಹುದು. ಈ ಸಮಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಆಸ್ತಿ ಸಂಬಂಧಿತ ವ್ಯಾಜ್ಯಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳಲಿವೆ. ವಾಹನ ಖರೀದಿ ಯೋಗವೂ ಇದೆ.

4 /5

ಮಾರ್ಗಿ ಮಂಗಳನು ಇಂದಿನಿಂದ ವೃಶ್ಚಿಕ ರಾಶಿಯವರ ಜೀವನವನ್ನೇ ಬದಲಾಯಿಸಲಿದ್ದಾನೆ. ವೃತ್ತಿ ರಂಗದಲ್ಲಿ ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ವಿತ್ತೀಯ ಲಾಭವನ್ನು ಗಳಿಸುವಿರಿ. ಒಟ್ಟಾರೆಯಾಗಿ ಮಂಗಳನ ದಯೆಯಿಂದ ಬಹಳಷ್ಟು ಪ್ರಯೋಜನವನ್ನು ಪಡೆಯುವಿರಿ.

5 /5

ಮಂಗಳನ ನೇರ ಸಂಚಾರದೊಂದಿಗೆ ಇಂದಿನಿಂದ ಧನು ರಾಶಿಯವರಿಗೆ ಮಂಗಳಕರ ಸಮಯ ಆರಂಭವಾಗಲಿದೆ. ಆರ್ಥಿಕ ದೃಷ್ಟಿಯಿಂದ ಸಮಯ ಉತ್ತಮವಾಗಿದೆ. ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರುವ ಸಾಧ್ಯತೆಯೂ ಇದೆ. ಇನ್ನೂ ಮದುವೆಯಾಗದವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.