ಬೆಂಗಳೂರು : ಜ್ಯೋತಿಷ್ಯದಲ್ಲಿ ಮಂಗಳನನ್ನು ಧೈರ್ಯ, ಶೌರ್ಯ, ಭೂಮಿ, ಮದುವೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಮಂಗಳಣು ಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಅಪಾರ ಸಂತೋಷ, ಸಮೃದ್ದಿ ಮನೆ ಮಾಡುತ್ತದೆ. ಮಂಗಳ ಗ್ರಹವು ಮೇ 10 ರಂದು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಜುಲೈ 1 ರವರೆಗೆ ಈ ರಾಶಿಯಲ್ಲಿಯೇ ಇರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಂಗಳ ಗ್ರಹದ ಸಂಚಾರದಿಂದಾಗಿ ಮಂಗಳ ಮತ್ತು ಶನಿಯ ನಡುವೆ ಷಡಷ್ಟಕ ಯೋಗ ಉಂಟಾಗುತ್ತದೆ. ಇದರೊಂದಿಗೆ ಮಂಗಳನಿಂದ ಹತ್ತನೇ ಮನೆಯಲ್ಲಿ ರಾಹು, ಗುರು ಬುಧ ಮತ್ತು ಸೂರ್ಯ ಇರುತ್ತಾರೆ. ಈ ರೀತಿಯಾಗಿರುವ ಗ್ರಹಗಳ ಸ್ಥಿತಿಯು ಕೆಲವು ರಾಶಿಯವರಿಗೆ ಮಂಗಳಕರವಾಗಿರುತ್ತದೆ.
ಮೇಷ ರಾಶಿ : ಮಂಗಳ ಸಂಕ್ರಮವು ಮೇಷ ರಾಶಿಯವರಿಗೆ ಶುಭ ಫಲ ನೀಡಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಎಚ್ಚರಿಕೆಯಿಂದ ಖರ್ಚು ಮಾಡಿದರೆ, ಉಳಿತಾಯ ಸಾಧ್ಯವಾಗುತ್ತದೆ. ಕಾರು ಖರೀದಿಸುವ ಸಾಧ್ಯತೆ ಇದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ.
ಸಿಂಹ ರಾಶಿ : ಮಂಗಳನ ರಾಶಿ ಬದಲಾವಣೆಯು ಸಿಂಹ ರಾಶಿಯವರ ಮನದ ಆಸೆಯನ್ನು ಈಡೇರಿಸುತ್ತದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ನ್ಯಾಯಾಲಯದಲ್ಲಿ ಯಾವುದಾದರೂ ಕೇಸ್ ನಡೆಯುತ್ತಿದ್ದರೆ ತೀರ್ಪು ನಿಮ್ಮ ಬರಬಹುದು.
ಕನ್ಯಾ ರಾಶಿ : ಮಂಗಳ ಗ್ರಹದ ಸಂಚಾರವು ಕನ್ಯಾ ರಾಶಿಯವರ ಸಂಪತ್ತು ವೃದ್ಧಿಸುತ್ತದೆ. ಉದ್ಯೋಗ-ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗುವುದು. ವೆಚ್ಚಗಳು ಕಡಿಮೆಯಾಗುತ್ತವೆ.
ತುಲಾ ರಾಶಿ: ಮಂಗಳನ ಸಂಕ್ರಮವು ತುಲಾ ರಾಶಿಯವರಿಗೆ ಪ್ರಗತಿಯನ್ನು ನೀಡುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ನೀವು ವೇಗವಾಗಿ ಪ್ರಗತಿ ಹೊಂದುತ್ತೀರಿ. ಆದರೆ ದುರಹಂಕಾರದಿಂದ ದೂರವಿರಿ. ಆದಾಯ ಹೆಚ್ಚಲಿದೆ.
ಕುಂಭ ರಾಶಿ : ಈ ರಾಶಿಯವರಿಗೆ ಮಂಗಳ ಸಂಚಾರವು ಶುಭ ಫಲಿತಾಂಶಗಳನ್ನು ನೀಡಲಿದೆ. ಇಲ್ಲಿಯವರೆಗೆ ಜೀವನದಲ್ಲಿಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುವುದು.