ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಝುಕಿ (Maruti Suzuki) ಇಂಡಿಯಾದ ಕಾರುಗಳು ದುಬಾರಿಯಾಗಿದೆ.
Maruti Price Hike : ನೀವು ಮಾರುತಿ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಆಘಾತವಾಗಬಹುದು. ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಝುಕಿ (Maruti Suzuki) ಇಂಡಿಯಾದ ಕಾರುಗಳು ದುಬಾರಿಯಾಗಿದೆ. ಮಾರುತಿ ತನ್ನ ಆಯ್ದ ಮಾದರಿಗಳ ಕಾರಿನ ಬೆಲೆಯನ್ನು ಹೆಚ್ಚಿಸಿದೆ. ಮಾರುತಿ ಕಾರುಗಳು 7,000 ರೂಗಳಿಂದ 34,000 ರೂ.ವರೆಗೆ ದುಬಾರಿಯಾಗಿದೆ.
ಕಾರುಗಳ ಕಚ್ಚಾವಸ್ತುಗಳ ವೆಚ್ಚ ಹೆಚ್ಚಳವಾಗಿರುವುದೇ ಕಾರುಗಳ ಬೆಲೆಯನ್ನು ಹೆಚ್ಚಿಸಲು ಕಾರಣ ಎಂದು ಮಾರುತಿ ಸುಝುಕಿ (Maruti Suzuki) ಹೇಳಿದೆ. ಅಂದರೆ, ಕಾರುಗಳನ್ನು ತಯಾರಿಸಲು ಹೆಚ್ಚಿನ ವೆಚ್ಚ ತಗಲುತ್ತಿರುವ ಕಾರಣ, ಕಾರುಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಜನವರಿ 2021 ರಿಂದ ವಿವಿಧ ಮಾದರಿಗಳ ಕಾರುಗಳ ಬೆಲೆ ಏರಿಸುವ ಬಗ್ಗೆ ಮಾರುತಿ 2020ರ ಡಿಸೆಂಬರ್ ತಿಂಗಳಲ್ಲಿಯೇ ಹೇಳಿತ್ತು. ಇದಕ್ಕೂ ಮುನ್ನ ಹ್ಯುಂಡೈ (Hyundai), ಕಿಯಾ (Kia), ಮಹೀಂದ್ರಾ Mahindra & Mahindra) ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಿತ್ತು.
ಆದರೆ ಯಾವ ಮಾದರಿಯ ಕಾರುಗಳ ಬೆಲೆ ಏರಿಕೆಯಾಗಿದೆ ಎನ್ನುವುದನ್ನು ಮಾರುತಿ ಇನ್ನೂ ಬಹಿರಂಗಪಡಿಸಿಲ್ಲ. ಸ್ವಿಫ್ಟ್ ಡಿಜೈರ್, ಮಾರುತಿ ಬಲಾನೋ, ಬ್ರಿಜಾ ಮತ್ತು ಸಿಯಾಜ್ ಕಾರುಗಳ ಟಾಪ್ ಮಾಡಲ್ ನ ಬೆಲೆಯನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಯಾವ ಮಾದರಿಯ ಕಾರುಗಳ ಬೆಲೆಗಳು ಹೆಚ್ಚಾಗಿದೆ ಎಂದು ಕಂಡುಹಿಡಿಯಲು, ಶೋ ರೂಂಗೇ ಭೇಟಿ ನೀಡಬೇಕು..
ಲೋನ್ (Loan) ಮೂಲಕ ಮಾರುತಿ ಕಾರನ್ನು ಖರೀದಿಸುವ ಪ್ರಕ್ರಿಯೆ ಈಗ ಸುಲಭ. ಲೋನ್ ಗಾಗಿ ಈಗ ಅಲೆದಾಡುವ ಅಗತ್ಯ ಇಲ್ಲ. ಇದಕ್ಕಾಗಿ ಮಾರುತಿ ಸುಝುಕಿ ದೇಶದ 30 ಕ್ಕೂ ಹೆಚ್ಚು ನಗರಗಳಲ್ಲಿ ಆನ್‌ಲೈನ್ ಫೈನಾನ್ಸ್ ಪ್ಲಾಟ್ ಫಾರ್ಮ್ ಸ್ಮಾರ್ಟ್ ಫೈನಾನ್ಸ್ (Smart Finance)ಅನ್ನು ಪ್ರಾರಂಭಿಸಿದೆ. ಈ ಮೂಲಕ ಮನೆಯಲ್ಲಿ ಕುಳಿತುಕೊಂಡೇ ಲೋನ್ ಪ್ರಕ್ರಿಯೆ ಪುರ್ತಿಗೊಳಿಸಬಹುದು.
ಮಾರುತಿ ಸುಝುಕಿ ತನ್ನ ಗ್ರಾಹಕರಿಗೆ ಆನ್‌ಲೈನ್ ಹಣಕಾಸು ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ 12 ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಚೋಳಮಂಡಲಂ ಫೈನಾನ್ಸ್, ಕೊಟಕ್ ಮಹೀಂದ್ರಾ ಪ್ರೈಮ್, ಆಕ್ಸಿಸ್ ಬ್ಯಾಂಕ್, ಮತ್ತು ಯೆಸ್ ಬ್ಯಾಂಕ್ ಸೇರಿವೆ.