ನಟನೆ ತೊರೆದು ಸನ್ಯಾಸಿಯಾದ ಪ್ರಖ್ಯಾತ ನಟಿ: ಕೋಟಿ ಕೋಟಿ ಆಸ್ತಿ ತ್ಯಜಿಸಿ ತಪಸ್ವಿಯಾದ ‘ಮಿಸ್ ಇಂಡಿಯಾ’ ಬ್ಯೂಟಿ ಈಕೆ!

Barkha Madan Monk: 1994 ರಲ್ಲಿ ಐಶ್ವರ್ಯಾ ರೈ ಬಚ್ಚನ್, ಸುಶ್ಮಿತಾ ಸೇನ್ ಮತ್ತು ಶ್ವೇತಾ ಮೆನನ್ ಅವರೊಂದಿಗೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬರ್ಖಾ ಮದನ್ ಇದೀಗ ಸನ್ಯಾಸಿನಿಯಾಗಿದ್ದಾರೆ. ಮಿಸ್ ಇಂಡಿಯಾ ಗೆಲ್ಲದಿದ್ದರೂ, ಮಿಸ್ ಟೂರಿಸಂ ಇಂಟರ್‌ನ್ಯಾಶನಲ್‌ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು ಬರ್ಖಾ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಈ ಫೋಟೋದಲ್ಲಿರುವಾಕೆ ಸುಶ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಅವರಂತಹ ಸುಂದರಿಯರೊಂದಿಗೆ ಸ್ಪರ್ಧಿಸಿದವರು. ಹಲವು ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದವರು. ಸಿನಿಮಾಗಳ ಹೊರತಾಗಿ ಧಾರಾವಾಹಿಗಳಲ್ಲೂ ನಟಿಸಿ ಮೆಚ್ಚುಗೆ ಪಡೆದವರು… ಆದರೆ ಈಗ ಸನ್ಯಾಸಿನಿಯಾಗಿ ಬದಲಾಗಿದ್ದು ಎಲ್ಲರಿಗೂ ಶಾಕ್ ನೀಡಿದ್ದಾರೆ

2 /7

 ಈಕೆ ಯಾರೆಂದು ಯೋಚಿಸುತ್ತಿದ್ದೀರಾ? ಇವರ ಹೆಸರು ಬರ್ಖಾ ಮದನ್. ಪಂಜಾಬ್’ನಲ್ಲಿ ಹುಟ್ಟಿ ಬೆಳೆದ ಬರ್ಖಾ ಮದನ್ ಮೊದಲು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. 1994 ರಲ್ಲಿ ಮಿಸ್ ಇಂಡಿಯಾ ಫೈನಲಿಸ್ಟ್ ಕೂಡ ಆಗಿದ್ದರು. ಸೌಂದರ್ಯ ಕಿರೀಟಕ್ಕಾಗಿ ಸುಶ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಅವರೊಂದಿಗೆ ಸ್ಪರ್ಧಿಸಿ ಮೊದಲ ರನ್ನರ್ ಅಪ್ ಆದರು. ಅದರ ನಂತರ, ಮಿಸ್ ಟೂರಿಸಂ ವರ್ಲ್ಡ್ ವೈಡ್ ರನ್ನರ್ ಅಪ್ ಆದರು.

3 /7

ಬರ್ಖಾ ಮದನ್ 1996 ರಲ್ಲಿ "ಖಿಲಾಡಿ ಕಾ ಕಿಲಾಡಿ" ಚಿತ್ರದ ಮೂಲಕ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆನಂತರ 2012 ರವರೆಗೆ ಕೇವಲ ಆರು ಚಿತ್ರಗಳನ್ನು ಮಾಡಿದ್ದರು. ಇವುಗಳಲ್ಲಿ ರಾಮ್ ಗೋಪಾಲ್ ವರ್ಮಾ ಅವರ 'ಭೂತ್' ಸಿನಿಮಾ ಕೂಡ ಸೇರಿದ್ದು, ಬರ್ಖಾ ಇದರಲ್ಲಿ ದೆವ್ವದ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ. ಅಜಯ್ ದೇವಗನ್, ಊರ್ಮಿಳಾ ಮಾತೋಂಡ್ಕರ್, ನಾನಾ ಪಾಟೇಕರ್, ರೇಖಾ, ಫರ್ದೀನ್ ಖಾನ್ ಮುಂತಾದ ತಾರೆಯರೊಂದಿಗೆ ಕೆಲಸ ಮಾಡಿದ್ದಾರೆ.

4 /7

ಅಂದಹಾಗೆ ಬರ್ಖಾ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2005 ರಿಂದ 2009 ರವರೆಗೆ ಅವರು ಜನಪ್ರಿಯ Zee TV ಶೋ ಸಾಥ್ ಫೆರೆ ಸಲೋನಿ ಕಾ ಸಫರ್‌ನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ 2010 ರಲ್ಲಿ, ನಿರ್ಮಾಪಕರಾಗಲು ನಿರ್ಧರಿಸಿದರು.

5 /7

ಪ್ರತಿಭಾವಂತ ಸ್ವತಂತ್ರ ಚಲನಚಿತ್ರ ನಿರ್ಮಾಪಕರನ್ನು ಉತ್ತೇಜಿಸಲು ಖರ್ಜಾ ಗೋಲ್ಡನ್ ಗೇಟ್ LLC ಅನ್ನು ಪ್ರಾರಂಭಿಸಿದರು. ಆದರೆ ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ ಬರ್ಖಾ ಮದನ್ ಇದ್ದಕ್ಕಿದ್ದಂತೆ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದರು.

6 /7

ತನ್ನ ಜೀವನದುದ್ದಕ್ಕೂ ದಲೈ ಲಾಮಾ ಅವರ ಕಟ್ಟಾ ಅನುಯಾಯಿಯಾಗಿದ್ದ ಬರ್ಖಾ 2012 ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದರು. ಬರ್ಖಾ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನ ಹೆಸರನ್ನು 'ಗಾಲ್ಟೆನ್ ಸ್ಯಾಮ್ಟೆನ್' ಎಂದು ಬದಲಾಯಿಸಿಕೊಂಡರು.

7 /7

ಪ್ರಸ್ತುತ ಆಶ್ರಮ, ಬೆಟ್ಟಗಳಲ್ಲಿ ಅಲೆಯುತ್ತಿರುವ ಬರ್ಖಾ, Instagram ನಲ್ಲಿನ ಪೋಸ್ಟ್‌’ಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಅವೆಲ್ಲವೂ ಆಧ್ಯಾತ್ಮಿಕ ಅಂಶಗಳನ್ನು ಸಹ ಒಳಗೊಂಡಿರುತ್ತವೆ.