Budh Vakri 2023: 10 ದಿನಗಳ ಬಳಿಕ ಈ ರಾಶಿಯ ಜನರು ಭಾರಿ ಶ್ರೀಮಂತರಾಗಲಿದ್ದಾರೆ, ವಕ್ರಿ ಬುಧನ ಕಾರಣ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

Mercury Retrograde 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧಿ, ವಾಣಿ, ಸಂವಾದ, ವ್ಯಾಪಾರ ಹಾಗೂ ಧನದ ಕಾರಕ ಗ್ರಹ ಬುಧ ಏಪ್ರಿಲ್ 21, 2023 ರಂದು ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದು, ಎಲ್ಲಾ ದ್ವಾದಶ ರಾಶಿಗಳ ಜನರ ಆರ್ಥಿಕ ಸ್ಥಿತಿ, ವೃತ್ತಿ ಜೀವನ ಹಾಗೂ ವಾಣಿಯ ಮೇಲೆ ಪ್ರಭಾವ ಬೀರಲಿದ್ದಾನೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. 
 

Budh Vakri In Mesha 2023: ಗ್ರಹಗಳ ರಾಜಕುಮಾರ ಬುಧನ ಸ್ಥಾನ ಪಲ್ಲಟ ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅವು ಜನರ ಆರ್ಥಿಕ ಸ್ಥಿತಿ, ಬುದ್ಧಿವಂತಿಕೆ, ಮಾತು, ವ್ಯವಹಾರದ ಮೇಲೆ ಧನಾತ್ಮಕ-ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಏಪ್ರಿಲ್ 21 ರಂದು ಬುಧ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ ಮತ್ತು ಜೋತಿಷ್ಯ ಶಾಸ್ತ್ರದ ಪ್ರಕಾರ ಇದೊಂದು ಮಹತ್ವದ ಘಟನೆಯಾಗಿದೆ. ಯಾವ ರಾಶಿಯ ಜನರಿಗೆ ಬುದ್ಧನ ಹಿಮ್ಮುಖ ಚಲನೆ ವೃತ್ತಿಜೀವನದಲ್ಲಿ ಅಪಾರ ಉನ್ನತಿ ಹಾಗೂ ಧನಾಗಮನದ ಯೋಗ ತರಲಿದೆ ತಿಳಿದುಕೊಳ್ಳೋಣ.

 

ಇದನ್ನೂ ಓದಿ-Shash Mahapurush Rajyog: ಶನಿ ನಿರ್ಮಿಸಿರುವ ರಾಜಯೋಗದಿಂದ 2025ರವರೆಗೆ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ: ಬುಧನ ವಕ್ರ ನಡೆ ಮೇಷ ರಾಶಿಯವರಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗಿಸಲಿದೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಹೊಸ ಕೆಲಸ ಸಿಗಬಹುದು, ಬಡ್ತಿ-ಇನ್ಕ್ರಿಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗುತ್ತಿವೆ. ಹಣಕಾಸಿನ ಭಾಗ ಅತ್ಯಂತ ಉತ್ತಮವಾಗಿರಲಿದೆ. ಹೊಸ ಹೊಸ ಮೂಲಗಳಿಂದ ಆದಾಯ ಹರಿದುಬರಲಿದೆ.   

2 /5

ಮಿಥುನ ರಾಶಿ: ಬುದ್ಧನ ಹಿಮ್ಮುಖ ನಡೆ ಮಿಥುನ ರಾಶಿಯವರಿಗೆ ಸಮಸ್ಯೆಗಳು ಮತ್ತು ಅಡೆತಡೆಗಳಿಂದ ಪರಿಹಾರವನ್ನು ನೀಡಲಿದೆ. ಹೊಸ ಅವಕಾಶಗಳು ಸಿಗಲಿವೆ. ಕಚೇರಿಯಲ್ಲಿ ನಿಮ್ಮ ಇಮೇಜ್  ಉತ್ತಮವಾಗಿರುತ್ತದೆ. ನೀವು ಜನರ ಭಾರಿ ಪ್ರಶಂಸೆಗೆ ಪಾತ್ರರಾಗುವಿರಿ. ಉದ್ಯಮಿಗಳಿಗೆ ಅಪಾರ ಲಾಭವಾಗಲಿದ್ದು, ಆರ್ಥಿಕ ಸ್ಥಿತಿ ಪ್ರಯೋಜನಕಾರಿಯಾಗಲಿದೆ. ಹಲವು ಮೂಲಗಳಿಂದ ಹಣ ಹರಿದುಬರಲಿದೆ. .  

3 /5

ಸಿಂಹ ರಾಶಿ: ಬುಧನ ಹಿಮ್ಮುಖ ನಡೆ ಸಿಂಹ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡಲಿದೆ. ನೀವು ದೀರ್ಘ ಕಾಲದಿಂದ ನಿರೀಕ್ಷಿಸುತ್ತಿರುವ ಸಾಧನೆಯನ್ನು ನೀವು ಮಾಡಬಹುದು. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಬಹುದು. ವ್ಯಾಪಾರ ವೃದ್ಧಿಯಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ.  

4 /5

ಕುಂಭ ರಾಶಿ: ಬುಧನ ವಕ್ರ ನಡೆ ಕುಂಭ ರಾಶಿಯವರಿಗೆ ಜೀವನದಲ್ಲಿ ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯಲಿದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಯಾವುದೇ ವಿಶೇಷ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಬಾಸ್ ನಿಮ್ಮನ್ನು ಹೊಗಳಬಹುದು. ಕುಟುಂಬದಲ್ಲಿ ಸಮೃದ್ಧಿ ಇರಲಿದೆ. ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯ ಉತ್ತಮವಾಗಿರಲಿದೆ.

5 /5

ಮೀನ ರಾಶಿ: ವಕ್ರಿ ಬುಧ  ಮೀನ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಯಶಸ್ಸನ್ನು ದಯಪಾಲಿಸಲಿದ್ದಾನೆ. ನಿಮ್ಮ ಶ್ರಮದ ಸಂಪೂರ್ಣ ಫಲ ನಿಮಗೆ ಪ್ರಾಪ್ತಿಯಾಗಲಿದೆ ಮತ್ತು ನೀವು ಅಪಾರ ಸಂತೋಷವನ್ನು ಅನುಭವಿಸುವಿರಿ. ಬಡ್ತಿ-ಇಂಕ್ರಿಮೆಂಟ್ ಸಿಗಲಿದೆ. ಹಿರಿಯರ ಸಂಪರ್ಕದಿಂದ ಲಾಭವನ್ನು ಪಡೆಯುವಿರಿ. ವ್ಯಾಪಾರಸ್ಥರಿಗೆ ವಿದೇಶದಿಂದ ಲಾಭವಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)