Popular Tv Bollywood Actors: ಇಂದು ಬಾಲಿವುಡ್ ಮತ್ತು ಟಿವಿ ಉದ್ಯಮದಲ್ಲಿ ಮೋಡಿ ಮಾಡುವ ಮೂಲಕ ಪ್ರೇಕ್ಷಕರ ಹೃದಯವವನ್ನಾಳುತ್ತಿರುವ ನಟ-ನಟಿಯರು, 90ರ ದಶಕದಲ್ಲಿ ಟೆಲಿವಿಷನ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
ದೂರದರ್ಶನದಿಂದ ವೃತ್ತಿಜೀವನ ಆರಂಭಿಸಿದ ನಟರು: ಇಂದು ಬಾಲಿವುಡ್ ಮತ್ತು ಟಿವಿ ಉದ್ಯಮದಲ್ಲಿ ಮೋಡಿ ಮಾಡುವ ಮೂಲಕ ಪ್ರೇಕ್ಷಕರ ಹೃದಯವವನ್ನಾಳುತ್ತಿರುವ ನಟ-ನಟಿಯರು, 90ರ ದಶಕದಲ್ಲಿ ಟೆಲಿವಿಷನ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. ದೂರದರ್ಶನದಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ನಟರ ಪೈಕಿ ಶಾರುಖ್ ಖಾನ್ ಹೆಸರು ಮೊದಲಿಗೆ ನೆನಪಾಗುತ್ತದೆ. ಶಾರುಖ್ನಿಂದ ಮಂದಿರಾ ಬೇಡಿಯವರೆಗೆ ಅನೇಕ ಖ್ಯಾತನಾಮರು ದೂರದರ್ಶನದಿಂದ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬಾಲಿವುಡ್ ಕಿಂಗ್ ಎಂದು ಕರೆಯಲ್ಪಡುವ ಶಾರುಖ್ ಖಾನ್ 90ರ ದಶಕದಲ್ಲಿ ದೂರದರ್ಶನದ 'ಫೌಜಿ' ಮತ್ತು 'ಸರ್ಕಸ್' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ದೂರದರ್ಶನದಿಂದ ಜನರ ಹೃದಯದಲ್ಲಿ ಸ್ಥಾನ ಪಡೆದ ಶಾರುಖ್ ಖಾನ್ ಅವರು ತಮ್ಮ ನಟನೆಯಿಂದ ಇಂದು ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಪರಿಚಿತರಾಗಿದ್ದಾರೆ.
ಬಾಲಿವುಡ್ನಲ್ಲಿ ಅದ್ಭುತ ನಟನೆಗೆ ಹೆಸರುವಾಸಿಯಾಗಿರುವ ನಟ ನವಾಜುದ್ದೀನ್ ಸಿದ್ದಿಕಿ ದೂರದರ್ಶನದ ಅನೇಕ ಕಾರ್ಯಕ್ರಮಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದರು. ನವಾಜುದ್ದೀನ್ ಸಿದ್ದಿಕಿ ದೀರ್ಘಕಾಲದವರೆಗೆ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದರು. ನಂತರ 2012ರಲ್ಲಿ 'ಗ್ಯಾಂಗ್ಸ್ ಆಫ್ ವಾಸೇಪುರ್' ಚಿತ್ರದಿಂದ ಜನಪ್ರಿಯತೆ ಗಳಿಸಿದರು.
ಬಾಲಿವುಡ್ನ ಟಾಪ್ ನಟಿಯರಲ್ಲಿ ಒಬ್ಬರಾದ ವಿದ್ಯಾ ಬಾಲನ್ 90ರ ದಶಕದಲ್ಲಿ 'ಹಮ್ ಪಾಂಚ್' ಹೆಸರಿನ ಹಾಸ್ಯ ಕಾರ್ಯಕ್ರಮದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ನಂತರ ನಟಿ 2005ರಲ್ಲಿ ಸೈಫ್ ಅಲಿ ಖಾನ್ ಜೊತೆಗಿನ ಮೊದಲ ಚಿತ್ರ 'ಪರಿಣೀತಾ' ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು.
ನಟಿ ಮಂದಿರಾ ಬೇಡಿ ಇನ್ನೂ ಸಿನಿಮಾ ಮತ್ತು ಟಿವಿ ಜಗತ್ತಿನಲ್ಲಿ ತಮ್ಮ ಪ್ರತಿಭೆ ಮತ್ತು ನಟನಾ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಂದಿರಾ ಬೇಡಿ 1994ರಲ್ಲಿ ದೂರದರ್ಶನದ ಹಿಟ್ ಶೋ 'ಶಾಂತಿ' ಮೂಲಕ ಛಾಪು ಮೂಡಿಸಿದರು.
ಪ್ರಸಿದ್ಧ ಬಾಲಿವುಡ್ ಮತ್ತು ಟಿವಿ ನಟಿ ರೇಣುಕಾ ಶಹಾನೆ ದೂರದರ್ಶನದ ಪ್ರಸಿದ್ಧ 'ಸರ್ಕಸ್' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ರೇಣುಕಾ ಅವರು ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿದರು.