Budh Vakri: ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುದ್ದಿಕಾರಕ ಎಂದು ಕರೆಯಲ್ಪಡುವ ಬುಧ ಏಪ್ರಿಲ್ ಮೊದಲನೇ ವಾರದಲ್ಲಿಯೇ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಏಳು ರಾಶಿಯ ಜನರು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ತರ್ಕ, ಬುದ್ಧಿ, ಹಣಕಾಸಿನ ಅಂಶ ಎಂದು ಪರಿಗಣಿಸಲಾಗಿರುವ ಬುಧ ಗ್ರಹವು ಶೀಘ್ರದಲ್ಲೇ ತನ್ನ ವಕ್ರ ನಡೆಯನ್ನು ಆರಂಭಿಸಲಿದೆ. 02 ಏಪ್ರಿಲ್ 2024 ರಂದು, ಮೇಷ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದರ ಶುಭ-ಅಶುಭ ಪರಿಣಾಮಗಳು ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಏಳು ರಾಶಿಯ ಜನರಿಗೆ ಹಣಕಾಸಿನ ಬಿಕ್ಕಟ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಸ್ವ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ ಮೇಷ ರಾಶಿ ಜನರಿಗೆ ಅಷ್ಟು ಉತ್ತಮವಾಗಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗುವುದರಿಂದ ಆರ್ಥಿಕವಾಗಿ ಇದು ಸವಾಲಿನ ಸಮಯ. ಈ ಸಮಯದಲ್ಲಿ ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದಿರಿ.
ವೃಷಭ ರಾಶಿಯವರಿಗೆ ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಆದಾಯ ಲಭಿಸದೆ ನಿಮ್ಮ ಮನಸ್ಥಿತಿ ಹಾಳಾಗಬಹುದು. ಇದಲ್ಲದೆ, ಮೇಷ ರಾಶಿಯಲ್ಲಿ ಬುಧನ ವಕ್ರ ನಡೆಯು ಉತ್ತಮ ಆದಾಯ ಗಳಿಸಲು ತೊಡಕುಂಟು ಮಾಡಬಹುದು. ಹಾಗಾಗಿ, ಈ ಅವಧಿಯಲ್ಲಿ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದಿರಿ.
ಮೇಷ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿರುವ ಬುಧನು ಕರ್ಕಾಟಕ ರಾಶಿಯವರ ವೆಚ್ಚಗಳನ್ನು ಹೆಚ್ಚಾಗಿಸಲಿದ್ದು ಇವರ ಆರ್ಥಿಕ ಸ್ಥಿತಿ ಹದಗೆಡಲಿದೆ. ಗಮನಾರ್ಹವಾಗಿ ಆದಾಯವು ಮೊದಲಿಗಿಂತ ಕಡಿಮೆಯಾಗಲಿದ್ದು, ದೂರ ಪ್ರಯಾಣದಿಂದ ಹಣಕಾಸಿನ ನಷ್ಟ ಸಾಧ್ಯತೆ ಇದೆ.
ಬುಧನ ಹಿಮ್ಮುಖ ಚಲನೆಯು ಕನ್ಯಾ ರಾಶಿಯವರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸಬಹುದು. ಇದು ನಿಮ್ಮ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಕೂಡ ಸವಾಲುಗಳನ್ನು ತಂದೊಡ್ಡಬಹುದು. ಹಠಾತ್ ವೆಚ್ಚಗಳಿಂದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ಮೇಷ ರಾಶಿಯಲ್ಲಿ ಬುಧನ ಸಂಚಾರದ ಅವಧಿಯಲ್ಲಿ ವೃಶ್ಚಿಕ ರಾಶಿಯ ಜನರು ಹಣಕಾಸು ನಷ್ಟದ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ಹಣಕಾಸಿನ ಹೆಚ್ಚಿನ ಜವಾಬ್ದಾರಿ, ಜೊತೆಗೆ ಖರ್ಚುಗಳ ನಿರ್ವಹಣೆ ಕಷ್ಟವಾಗುವ ಕಾರಣ ನಿಮ್ಮ ಒತ್ತಡ ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ನೀವು ನಿರೀಕ್ಷಿಸಿದಷ್ಟು ಲಾಭವಾಗದೇ ಇರಬಹುದು.
ಬುಧನ ವಕ್ರ ನಡೆಯ ಸಮಯದಲ್ಲಿ ಧನು ರಾಶಿಯವರಿಗೆ ನಿಮ್ಮ ಖರ್ಚುಗಳು ಗಣನೀಯ ಏರಿಕೆಯನ್ನ್ ಕಾಣಬಹುದು. ಹಣದ ಕೊರತೆಯಿಂದಾಗಿ ಖರ್ಚುಗಳ ನಿರ್ವಹಣೆ ಸವಾಲು ಎಂದೆನಿಸಬಹುದು. ಇದು ನಿಮ್ಮಲ್ಲಿ ನಿರಾಶೆಯನ್ನು ಕೂಡ ಉಂಟು ಮಾಡಬಹುದು.
ಬುಧನ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ವ್ಯಾಪಾರದಲ್ಲಿ ನೀವು ನಿರೀಕ್ಷಿಸಿದಷ್ಟು ಲಾಭ ಗಳಿಸಲು ಅಡ್ಡಿಯುಂಟು ಮಾಡಬಹುದು. ಹಾಗಾಗಿ, ಹೊಸ ಡೀಲ್ಗಳಲ್ಲಿ ತೊಡಗಿಸಿಕೊಳ್ಳಲು ವ್ಯಾಪಾರಸ್ಥರಿಗೆ ಕಠಿಣ ಸಮಯ ಇದಾಗಿದೆ. ಹಣದ ಹರಿವು ಹೆಚ್ಚಾಗಲಿದೆಯಾದರೂ, ಉಳಿತಾಯ ಸವಾಲಾಗಿರುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.