Coconut Water Lemon Juice Combination: ತೆಂಗಿನ ನೀರಿನ ಆರೋಗ್ಯ ಪ್ರಯೋಜನಗಳ ಬಗ್ಗೆ ವಿಶೇಷವಾಗಿ ಹೇಳಬೇಕೆಂದೇನಿಲ್ಲ. ಇದರಲ್ಲಿ ಅನೇಕ ಆರೋಗ್ಯ ಪ್ರಯೋಜನಕಾರಿ ಗುಣಗಳು ಅಡಕವಾಗಿದೆ. ಆದ್ದರಿಂದಲೇ ಇದನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ತೆಂಗಿನ ನೀರಿಗೆ ನಿರ್ಜಲೀಕರಣದ ವಿರುದ್ಧ ಹೋರಾಡುವ ಶಕ್ತಿ ಮಾತ್ರವಲ್ಲದೆ, ತ್ವರಿತ ಶಕ್ತಿಯನ್ನು ಒದಗಿಸುವ ಮತ್ತು ಚರ್ಮವನ್ನು ಆರೋಗ್ಯವಾಗಿಡುವ ಸಾಮರ್ಥ್ಯವೂ ಇದೆ.
ತೆಂಗಿನ ನೀರಿನಂತೆ ನಿಂಬೆ ಸೇವನೆಯು ಸಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅಂದಹಾಗೆ ಈ ಎರಡು ಆರೋಗ್ಯಕರ ಆಹಾರಗಳನ್ನು ಮಿಶ್ರಣ ಮಾಡಿ ಸೇವಿಸಿದಾಗ ದೇಹಕ್ಕೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.
ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು, ನಿಂಬೆ ಮತ್ತು ತೆಂಗಿನ ನೀರಿನ ಸಂಯೋಜನೆಯು ಉತ್ತಮ ಆಯ್ಕೆಯಾಗಿದೆ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವುದೇ ಇದಕ್ಕೆ ಕಾರಣ.
ಇನ್ನು ಬಿಳಿಕೂದಲಿಗೆ ತೆಂಗಿನಿಂದ ತಯಾರಿಸ್ಪಲ್ಟ ವಸ್ತುಗಳು ಬಹಳಷ್ಟು ಇಳ್ಳೆಯದು. ಉದಾಹರಣೆಗೆ ತೆಂಗಿನೆಣ್ಣೆ. ಇದಕ್ಕೆ ನಿಂಬೆ ರಸವನ್ನು ಸೇರಿಸಿ ಕೂದಲನ್ನು ಮೃದುವಾಗಿ ಮಸಾಜ್ ಮಾಡಿ. ಸುಮಾರು 20 ನಿಮಿಷಗಳ ಕಾಲ ಬಿಟ್ಟು ನಂತರ ಚೆನ್ನಾಗಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ, ಕೂದಲು ಉದುರುವುದು ನಿಲ್ಲುತ್ತದೆ, ಜೊತೆಗೆ ಬಿಳಿಕೂದಲು ಕಪ್ಪಾಗಲು ಪ್ರಾರಂಭವಾಗುತ್ತದೆ.
ಇದಲ್ಲದೆ, ಎಳನೀರಿಗೆ ನಿಂಬೆ ರಸ ಹಿಂಡಿ ಮಿಶ್ರಣ ಮಾಡಿ ಕುಡಿದರೂ ಸಹ ಕೂದಲು ಬೆಳವಣಿಗೆಗೆ ಮತ್ತು ಕಪ್ಪು ಕೂದಲು ಪಡೆಯಲು ಸಾಧ್ಯವಾಗುತ್ತದೆ,
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)