Monthly Horoscope: ಮಾರ್ಚ್‌ನಲ್ಲಿ ಶನಿ ಆಶೀರ್ವಾದದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ನನಸಾಗಲಿದೆ ಕನಸು

Monthly Horoscope: ಇಂದಿನಿಂದ ಮಾರ್ಚ್ ತಿಂಗಳು ಆರಂಭವಾಗಿದೆ. ಮಾರ್ಚ್ ತಿಂಗಳಿನಲ್ಲಿ ಕೆಲವು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆಯೊಂದಿಗೆ ಕೆಲವು ರಾಶಿಯವರ ಅದೃಷ್ಟವೂ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಮಾರ್ಚ್ ಮಾಸ ಭವಿಷ್ಯ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ ತಿಂಗಳಿನ ಆರಂಭದಲ್ಲಿ ಬುಧ ರಾಶಿ ಬದಲಾವಣೆ ಮಾಡಲಿದ್ದಾನೆ. ಬಳಿಕ ಸೂರ್ಯ-ಶುಕ್ರರ ರಾಶಿ ಪರಿವರ್ತನೆ ನಡೆಯಲಿದೆ. ನಂತರ ನ್ಯಾಯದ ದೇವರು ಶನಿ ದೇವ ಉದಯಿಸಲಿದ್ದಾನೆ. ಹೀಗೆ, ಮಾರ್ಚ್ ತಿಂಗಳಿನಲ್ಲಿ ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಕಂಡು ಬರಲಿದ್ದು, ಇದರ ಪರಿಣಾಮವಾಗಿ ಐದು ರಾಶಿಯವರಿಗೆ ಭಾರೀ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

2 /7

ಕನ್ಯಾ ರಾಶಿ :  ಮಾರ್ಚ್ ಮಾಸದಲ್ಲಿ ಕನ್ಯಾ ರಾಶಿಯ ಜನರಿಗೆ ಸಂಬಂಧದಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ಇದರಿಂದಾಗಿ ವೈಯಕ್ತಿಕ ಜೀವನದಲ್ಲಿ ಸುಖ-ಸಂತೋಷವನ್ನು ಕಾಣುವಿರಿ. ಹಣ ಗಳಿಸುವ ಹೊಸ ಮೂಲಗಳು ಗೋಚರಿಸಲಿದ್ದು, ನೀವು ಸರಿಯಾದ ನಿರ್ಧಾರವನ್ನು ಕೈಗೊಂಡರೆ ಯಶಸ್ಸು ಖಂಡಿತ. 

3 /7

ತುಲಾ ರಾಶಿ:  ತುಲಾ ರಾಶಿಯವರಿಗೆ ಈ ತಿಂಗಳು ನಿಮ್ಮ ದೀರ್ಘಕಾಲದ ಕೆಲಸವೊಂದು ಪೂರ್ಣಗೊಳ್ಳಲಿದೆ. ಇದರಿಂದಾಗಿ ಬಂಪರ್ ಧನಲಾಭವನ್ನು ಸಹ ನಿರೀಕ್ಷಿಸಬಹುದು. ನೀವು ಶುದ್ಧ ಮನಸ್ಸಿನಿಂದ ಕೈ ಹಾಕಿದ ಕೆಲಸದಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. 

4 /7

ವೃಶ್ಚಿಕ ರಾಶಿ:  ಮಾರ್ಚ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರಿಗೆ ನಿಮ್ಮ ಬಹುದಿನದ ಕನಸು ನನಸಾಗಲಿದೆ. ಈ ತಿಂಗಳು ನಿಮ್ಮ ಸೃಜನಶೀಲತೆ ಉತ್ತುಂಗದಲ್ಲಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರೆ ಉಜ್ವಲ ಭವಿಷ್ಯ ನಿಮ್ಮದಾಗಲಿದೆ. 

5 /7

ಧನು ರಾಶಿ:  ಮಾರ್ಚ್ ತಿಂಗಳ ಗ್ರಹ ಗೋಚಾರದ ಫಲವಾಗಿ ಧನು ರಾಶಿಯವರಿಗೆ ಧೈರ್ಯ, ಶೌರ್ಯ ಹೆಚ್ಚಾಗಲಿದೆ. ಇದರಿಂದಾಗಿ, ನೀವು ಪ್ರತಿ ಸವಾಲನ್ನೂ ದಿಟ್ಟತೆಯಿಂದ ಎದುರಿಸುವಿರಿ. ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. 

6 /7

ಕುಂಭ ರಾಶಿ:  ಮಾರ್ಚ್ ಮಾಸದ ಗ್ರಹ ಗೋಚಾರದ ಫಲವಾಗಿ, ಅದರಲ್ಲೂ ವಿಶೇಷವಾಗಿ ಶನಿ ಆಶೀರ್ವಾದದಿಂದ ಕುಂಭ ರಾಶಿಯ ಜನರಿಗೆ ಆದಾಯದಲ್ಲಿ ಗಮನಾರ್ಹ ಏರಿಕೆ ಕಂಡು ಬರಲಿದೆ. ಈ ಸಮಯದಲ್ಲಿ ನಿಮ್ಮ ಮಾತೇ ನಿಮಗೆ ಬಂಡವಾಳವಾಗಿದ್ದು ಸೌಜನ್ಯದಿಂದ ಮಾತನಾಡಿ ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಿ. 

7 /7

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.