ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, ಜನರು ಮನೆಯಲ್ಲಿಯೇ ತಮ್ಮ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಮತ್ತು ಯಾವುದೇ ವ್ಯಾಯಾಮ ಮಾಡದ ಕಾರಣ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ನವದೆಹಲಿ: ಕರೋನಾ ಸಾಂಕ್ರಾಮಿಕ (Corona Epidemic) ರೋಗದಿಂದಾಗಿ, ಜನರು ಮನೆಯಲ್ಲಿಯೇ ತಮ್ಮ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಮತ್ತು ಯಾವುದೇ ವ್ಯಾಯಾಮ ಮಾಡದ ಕಾರಣ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಮತ್ತು ಉತ್ತಮ ಆಹಾರ ಮತ್ತು ವ್ಯಾಯಾಮವನ್ನು ಸಹ ಮಾಡಬೇಕು. ಇಂದು ನಾವು ನಿಮಗೆ ಒಂದು ಸೂಪರ್ಫುಡ್ ಬಗ್ಗೆ ಮಾಹಿತಿ ನೀಡಲಿದ್ದೇವೆ . ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು ನಾವು ಮೊರಿಂಗ ಅಥವಾ ನುಗ್ಗೆ ಸೊಪ್ಪಿನ ಪುಡಿಯ ಬಗ್ಗೆ ಮಾತನಾಡುತ್ತಿದ್ದೇವೆ. ಮೊರಿಂಗಾ ಪುಡಿಯನ್ನು ನುಗ್ಗೆ ಮರದ ಎಲೆಗಳಿಂದ ತಯಾರಿಸಲಾಗುತ್ತದೆ ಮತ್ತು ಇದು ಹಲವು ರೀತಿಯ ಔಷಧಿಯ ಗುಣಗಳನ್ನು ಹೊಂದಿದೆ. ಹಾಗಾದರೆ ಬನ್ನಿ ಇದರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ.
ಇದನ್ನು ಓದಿ- ಚಳಿಗಾಲದಲ್ಲಿ ರಾಮಬಾಣ ಮೆಂತ್ಯ, ಇಲ್ಲಿವೆ ಮೆಂತ್ಯದ ಅದ್ಭುತ ಲಾಭಗಳು
ನುಗ್ಗೆ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಬಿ 6 ಹಾಗೂ ರೈಬೋಫ್ಲೆವಿನ್ ಇರುತ್ತದೆ. ಇದಲ್ಲದೆ ಇದು ಪೊಟ್ಯಾಸಿಯಂ, ವಿಟಮಿನ್ ಎ, ವಿಟಮಿನ್ ಇ ಹಾಗೂ ಮ್ಯಾಗ್ನೆಸಿಯಂಗಳ ಆಗರವಾಗಿದೆ.
ನುಗ್ಗೆ ಸೊಪ್ಪಿನ ಎಲೆಗಳಿಂದ ತಯಾರಿಸಲಾಗಿರುವ ಪೌಡರ್ ಹೇರಳ ಪ್ರಮಾಣದಲ್ಲಿ ಪ್ರೋಟಿನ್ ಹೊಂದಿದೆ. ಒಂದು ದೊಡ್ಡ ಸ್ಪೂನ್ ಪೌಡರ್ ನಲ್ಲಿ 3 ಗ್ರಾಂ ಪ್ರೋಟಿನ್ ಹಾಗೂ ಅತ್ಯಾವಶ್ಯಕ ಅಮೈನೊ ಆಸಿಡ್ ಗಳನ್ನು ಹೊಂದಿರುತ್ತದೆ. ಇವು ದೇಹದ ಖಂಡಗಳಗಳಿಗೆ ಶಕ್ತಿ ನೀಡಿ ಉತ್ಪಾದನೆ ಹಾಗೂ ಮನಸ್ಥಿತಿಯನ್ನು ಸುಧಾರಿಸುತ್ತದೆ.
ನುಗ್ಗೆ ಸೊಪ್ಪಿನಲ್ಲಿ ಜಠರದ ಆಕ್ಸಿಕರಣವನ್ನು ತಡೆಯಲು ಪಾಲಿಫೆನೋಲ್ಸ್ ಗಳ ಹೈ ಕಾಂಸನ್ಟ್ರೆಶನ್ ಇರುತ್ತದೆ. ಲಿವರ್ ಫೈಫ್ರೋಸಿಸ್ ಕಡಿಮೆ ಮಾಡಲು ಹಾಗೂ ಲೀವರ್ ಗೆ ಆಗುವ ಹಾನಿ ತಪ್ಪಿಸಲು ನುಗ್ಗೆ ಸೊಪ್ಪು ಸೇವಿಸುವುದು ಉತ್ತಮ.
ನುಗ್ಗೆ ಸೊಪ್ಪಿನ ಪೌಡರ್ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ದೂರಗೊಳಿಸುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ.
ಇದು ನಮ್ಮ ತ್ವಚೆಯನ್ನು ಕೂಡ ಸುಂದರಗೊಳಿಸುತ್ತದೆ. ನುಗ್ಗೆಸೊಪ್ಪಿನ ಪೌಡರ್ ನಿಂದ ತಯಾರಿಸಲಾಗಿರುವ ಫೆಸ್ ಪ್ಯಾಕ್ ನಿಂದ ಮೊಡವೆ, ಕಲೆಗಳು ಹಾಗೂ ಪಿಂಪಲ್ಸ್ ಗಳಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಇದರಿಂದ ತ್ವಚೆಗೆ ಪೋಷಣೆ ಸಿಗುತ್ತದೆ ಮತ್ತು ನೈಸರ್ಗಿಕವಾಗಿ ತ್ವಚೆ ಹೊಳೆಯಲಾರಂಭಿಸುತ್ತದೆ.
ಚಳಿಗಾಲದ ದಿನಗಳಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ವೈರಲ್ ಇನ್ಫೆಕ್ಷನ್ ಗಳಂತಹ ಸಮಸ್ಯೆಗಳು ಸಾಮಾನ್ಯ. ಇಂತಹುದರಲ್ಲಿ ನುಗ್ಗೆ ಸೊಪ್ಪಿನ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದಾಗಿದೆ.