Mobile Game : ವಿಶ್ವದ ಜನಪ್ರಿಯ ಆಟಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸುವಲ್ಲಿಯೂ PUBG ವಿಫಲ

ವಿಶ್ವದ ಜನಪ್ರಿಯ ಆಟಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸುವಲ್ಲಿಯೂ PUBG ವಿಫಲವಾಗಿದೆ.

ನವದೆಹಲಿ : PUBG ಮೊಬೈಲ್ ವಿಶ್ವದ ನಂಬರ್ ಒನ್ ಆಟ ಎಂದೇ ಅನೇಕರು ಭಾವಿಸಿರುತ್ತಾರೆ. ಆದರೆ ವಿಶ್ವದ ಮೊದಲ ಮೂರು ಜನಪ್ರಿಯ ಮೊಬೈಲ್ ಗೇಮ್ ನ ಪಟ್ಟಿಯಲ್ಲಿಯೂ PUBG ಸ್ಥಾನ ಪಡೆದಿಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಆಡುವ ಮೊಬೈಲ್ ಗೇಮ್ ಯಾವುದು ಎಂಬ ಮಾಹಿತಿಯನ್ನು ನಾವು ನೀಡುತ್ತೇವೆ..

1 /5

ವಿಶ್ವದಲ್ಲಿ ಅತಿಹೆಚ್ಚು ಅಡುವ  ಮೂರು  ಮೊಬೈಲ್ ಗೇಮ್ನ ಪಟ್ಟಿಯಲ್ಲಿ PUBG ಸ್ಥಾನಪಡೆದಿಲ್ಲ. 2020 ರ ಅತ್ಯಂತ ಜನಪ್ರಿಯ ಆಟಗಳ ಪಟ್ಟಿಯಲ್ಲಿPUBG ಹಿಂದುಳಿದಿದೆ. ಡೌನ್‌ಲೋಡ್‌ಗಳು ಮತ್ತು ಗಳಿಕೆಗಳ ಆಧಾರದಲ್ಲಿ ಇತರ ಹಲವು ಆಟಗಳು PUBG ಯನ್ನು ಮೀರಿಸಿದೆ ಎಂದು Apptopia ತನ್ನ ಹೊಸ ವರದಿಯಲ್ಲಿ ಬಹಿರಂಗಪಡಿಸಿದೆ.

2 /5

Among Us ಹೆಸರು ಹೊಸತರಂತೆ  ಅನಿಸಬಹುದು. ಆದರೆ  Among Us ಈಗ ವಿಶ್ವದ ಅತ್ಯಂತ ಜನಪ್ರಿಯ ಆಟವಾಗಿದೆ.  Among Us 2020 ರ ಅತ್ಯಂತ ಜನಪ್ರಿಯ ಗೇಮ್ ಎಂದು Apptopia ತನ್ನ ವರದಿಯಲ್ಲಿ  ಹೇಳಿದೆ. ಕಳೆದ ವರ್ಷ, ಇದನ್ನು ಸುಮಾರು 26.4 ಮಿಲಿಯನ್ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.  ಯುಎಸ್ ಒಂದರಲ್ಲೇ ಸುಮಾರು 4.1 ಕೋಟಿ ಜನರು ಇದನ್ನು ಡೌನ್ಲೋಡ್ ಮಾಡಿದ್ದಾರೆ.

3 /5

ಇನ್ನೂ ಕುತೂಹಲಕಾರಿ ಸಂಗತಿಯೆಂದರೆ,  ಡೆನ್ಮಾರ್ಕ್‌ನ Subway Surfers ಅತ್ಯುತ್ತಮ ಆಟಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಆಟವನ್ನು ವಿಶ್ವಾದ್ಯಂತ 227 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. 

4 /5

Garena Free Fire ಕೂಡಾ PUBG ಶೈಲಿಯ ಗೇಮ್ ಆಗಿದೆ. ಆದರೆ  Garena Free Fire ಗೇಮ್ PUBG ಗಿಂತ ಹೆಚ್ಚು ಮೆಚ್ಚುಗೆ ಪಡೆದಿದೆ. 2020 ರಲ್ಲಿ, ಇದನ್ನು 21.8 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. 

5 /5

ಕಳೆದ ವರ್ಷ, PUBGಯನ್ನು   17.5 ಕೋಟಿ  ಜನ  ಡೌನ್‌ಲೋಡ್ ಮಾಡಿದ್ದಾರೆ. ಭಾರತ-ಚೀನಾ ಗಡಿ ವಿವಾದದ ನಂತರ, ಭಾರತದಲ್ಲಿ ನಿಷೇಧಿಸಲಾದ PUBG ಮೊಬೈಲ್ ಅಪ್ಲಿಕೇಶನ್‌ನ ನೇರ ಪರಿಣಾಮವನ್ನು ಇಲ್ಲಿ ಕಾಣಬಹುದು.  ಕಂಪನಿಯು ಮತ್ತೆ ಭಾರತದಲ್ಲಿ  PUBG  ರಿಲಾಂಚ್ ಮಾಡುವ ಎಲ್ಲಾ ಪ್ರಯತ್ನವನ್ನೂ ನಡೆಸುತ್ತಿದೆ. ಆದರೆ ಸದ್ಯಕ್ಕೆ ಇದು ಸಾಧ್ಯವಾಗದ ಮಾತು ಎನ್ನಲಾಗಿದೆ.