ಈ‌ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿವೆ ಮುಂದಿನ 23 ದಿನಗಳು, ಸೂರ್ಯನ ಕೃಪೆಯಿಂದ ಜೀವನದಲ್ಲಿ ಅಪಾರ ಧನಾಗಮನ!

Sun Transit 2023: ಕಳೆದ ಮಾರ್ಚ್ 15 ರಂದು ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಗುರುವಿನ ರಾಶಿಯಲ್ಲಿ ಸೂರ್ಯನ ಪ್ರವೇಶ ಹಲವು ಜನರ ಭಾಗ್ಯದ ಬಾಗಿಲನ್ನೇ ತೆರೆಯಲಿದೆ. ಇದರಿಂದ ಕೆಲ ರಾಶಿಗಳ ಜಾತಕದವರ ಜೀವನದಲ್ಲಿ ಅಪಾರ ಧನಾಗಮನವಾಗಲಿದೆ. ಬನ್ನಿ ಆ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ. 
 

Surya Gochar 2023: ಜೋತಿಷ್ಯ ಶಾಸ್ತ್ರದಲ್ಲಿ, ಸೂರ್ಯನನ್ನು ಯಶಸ್ಸು, ಆರೋಗ್ಯ ಮತ್ತು ಆತ್ಮ ವಿಶ್ವಾಸದ ಕಾರಕ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಸೂರ್ಯನನ್ನು  ಗ್ರಹಗಳ ರಾಜ ಎಂದೂ ಕೂಡ ಭಾವಿಸಲಾಗಿದೆ ಮತ್ತು ಪ್ರತಿ ತಿಂಗಳು ಆತ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ಬಾರಿ ಸೂರ್ಯನು ಮಾರ್ಚ್ 15 ರಂದು ಮೀನ ರಾಶಿಯನ್ನು ಪ್ರವೇಶಿಸಿದ್ದು ಏಪ್ರಿಲ್ 14 ರವರೆಗೆ ಮೀನ ರಾಶಿಯಲ್ಲಿಯೇ ಇರಲಿದ್ದಾನೆ. ಈ ಸಮಯದಲ್ಲಿ, ಕೆಲ ರಾಶಿಗಳ ಸ್ಥಳೀಯರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ಪ್ರಾಪ್ತಿಯಾಗಲಿವೆ. ಮುಂದಿನ 23 ದಿನಗಳು ಯಾವ ರಾಶಿಯವರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ ಎಂಬುದನ್ನೂ ನೋಡೋಣ ಬನ್ನಿ.

 

ಇದನ್ನೂ ಓದಿ-ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಚತುರ್ಗ್ರಹಿ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಾಗಮನ ಭಾಗ್ಯ ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಹೆಚ್ಚಿನ ಲಾಭವಾಗಲಿದೆ. ಆರ್ಥಿಕ ಪ್ರಗತಿ ಇರುತ್ತದೆ, ಇದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ವೃತ್ತಿಯಲ್ಲಿ ದೊಡ್ಡ ಪ್ರಗತಿಯನ್ನು ನೀವು ಕಾಣಬಹುದು. ಉನ್ನತ ಸ್ಥಾನ, ಪ್ರತಿಷ್ಠೆ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.  

2 /6

2. ಮಿಥುನ ರಾಶಿ: ಸೂರ್ಯ ಸಂಚಾರವು ಮಿಥುನ ರಾಶಿಯವರಿಗೆ ಗೌರವ ಮತ್ತು ಘನತೆಯನ್ನು ತರಲಿದೆ. ಉದ್ಯೋಗಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುವಿರಿ.  

3 /6

3. ಕರ್ಕ ರಾಶಿ: ಕರ್ಕ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ, ನಿಮ್ಮ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರ ಎರಡಕ್ಕೂ ಉತ್ತಮ ಸಮಯ.  

4 /6

4. ತುಲಾ ರಾಶಿ: ಸೂರ್ಯನ ರಾಶಿ ಈ ರಾಶಿ ಪರಿವರ್ತನೆ ತುಲಾ ರಾಶಿಯವರಿಗೆ ದೊಡ್ಡ ಯಶಸ್ಸನ್ನು ತರಲಿದೆ. ನಿಮ್ಮ ಎದುರಾಳಿಗಳು ನಿಮ್ಮ ವಿರುದ್ಧ ವಿಫಲರಾಗಲಿದ್ದಾರೆ. ವೃತ್ತಿ ಜೀವನದಲ್ಲಿ ಪ್ರಗತಿ ಇರಲಿದೆ. ಆದಾಯ ಹೆಚ್ಚಲಿದೆ. ಏಪ್ರಿಲ್ 14 ರವರೆಗಿನ ಸಮಯವು ಈ ಜನರಿಗೆ ಅತ್ಯುತ್ತಮವಾಗಿದೆ.   

5 /6

5. ವೃಶ್ಚಿಕ ರಾಶಿ: ಸೂರ್ಯನ ಈ ಸಂಕ್ರಮಣ  ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿ ಭಾರಿ ಲಾಭ ತರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಅದೃಷ್ಟದ ಬೆಂಬಲ ಸಿಗಲಿದೆ.  

6 /6

6. ಧನು ರಾಶಿ : ಏಪ್ರಿಲ್ 14 ರವರೆಗೆ ಸೂರ್ಯನು ನಿಮ್ಮ ಜೀವನದಲ್ಲಿ ಸಂತೋಷವನ್ನು ತುಂಬುತ್ತಾನೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಆದಾಯ ಹೆಚ್ಚಾಗಲಿದೆ. ಬೆಲೆಬಾಳುವ ವಸ್ತುವನ್ನು ಖರೀದಿಸುವ ಸಾಧ್ಯತೆಗಳಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ  ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)