Ola, Yamaha, Suzuki ಭಾರತದಲ್ಲಿ ಲಾಂಚ್ ಮಾಡಲಿದೆ Electric Scooters

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚುತ್ತಿದೆ. Revolt, Ather Energy, Bajaj Auto ಮತ್ತು TVS Motor ನಂತರ ಇತರ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತರಲು ಮುಂದಾಗಿವೆ. 

ನವದೆಹಲಿ : ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ .100 ದಾಟಿದೆ ಇದೀಗ ಕಾರು ಮಾತ್ರವಲ್ಲ, ಸ್ಕೂಟರ್‌ನಲ್ಲಿ ಓಡಾಡುವುದು ಕೂಡಾ ದುಬಾರಿಯಾಗಿದೆ. ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ. ಈ ಸ್ಥಿತಿಯಲ್ಲಿ, ಎಲೆಕ್ಟ್ರಿಕ್ ವಾಹನದ ಯೋಚನೆ ಬಾರದೆ ಇರದು. ಎಲೆಕ್ಟ್ರಿಕ್ ಕಾರುಗಳಿಗೆ ಸಂಬಂಧಿಸಿದ ಆಯ್ಕೆಗಳು ಇದೀಗ ಭಾರತದಲ್ಲಿ ಬಹಳ ಕಡಿಮೆ. ಅಲ್ಲದೆ, ಈ ಕಾರುಗಳು ಬಹಳ ದುಬಾರಿ ಕೂಡಾ. ಹೀಗಿರುವಾಗ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ಎದುರಿಗಿನ ಉತ್ತಮ ಆಯ್ಕೆಯಾಗಿರುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚುತ್ತಿದೆ. Revolt, Ather Energy, Bajaj Auto ಮತ್ತು TVS Motor ನಂತರ ಇತರ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತರಲು ಮುಂದಾಗಿವೆ.  ಎಲೆಕ್ಟ್ರಿಕ್ ವಾಹನ ನೀತಿಯನ್ನು ಸರ್ಕಾರವು ತುಂಬಾ ಸಡಿಲಗೊಳಿಸಿದ್ದು, ತಯಾರಕರಿಗೆ ಸಬ್ಸಿಡಿ ನೀಡುತ್ತಿದೆ.  ಇದೇ ಕಾರಣಕ್ಕಾಗಿ ಯಮಹಾದಂತಹ ಕಂಪನಿಗಳು ಸಹ ಭಾರತದಲ್ಲಿ ತಮ್ಮದೇ ಆದ ಎಲೆಕ್ಟ್ರಿಕ್ ಸ್ಕೂಟರ್ ತರಲು ಹೊರಟಿದೆ

2 /4

ಓಲಾ ಎಲೆಕ್ಟ್ರಿಕ್ ಶೀಘ್ರದಲ್ಲೇ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮಾಧ್ಯಮ ವರದಿಗಳಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಕಂಪನಿಯು ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ಸ್ಕೂಟರ್‌ನ ಬೆಲೆಯನ್ನು ಪ್ರಕಟಿಸಲಿದೆ. ಕಂಪನಿಯು ಈಗಾಗಲೇ ತನ್ನ 'ಹೈಪರ್‌ಚಾರ್ಜರ್ ನೆಟ್‌ವರ್ಕ್' ಅನ್ನು ಭಾರತದ ಕೆಲ  ನಗರಗಳಲ್ಲಿ ವಿಸ್ತರಿಸಲು ಪ್ರಾರಂಭಿಸಿದೆ. ಈ ನೆಟ್‌ವರ್ಕ್ ಭಾರತದ 400 ನಗರಗಳಲ್ಲಿ ಒಂದು ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿರುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸ್ವಾಪ್ ಬ್ಯಾಟರಿಯನ್ನು ಬಳಸಲಾಗುತ್ತದೆ. ಅಂದರೆ ಬ್ಯಾಟರಿ ಚಾರ್ಜ್ ಮಾಡುವುದು ತೊಂದರೆಯಾಗುವುದಿಲ್ಲ. ಚಾರ್ಜ್ ಮಾಡಿದ ಬ್ಯಾಟರಿಯನ್ನು ಬದಲಾಯಿಸಿದರೆ ಸಾಕಾಗುತ್ತದೆ. ಇದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುವ ಕೆಲಸ. 

3 /4

Suzuki Motorcycle India ತನ್ನ ಎಲೆಕ್ಟ್ರಿಕ್ ಸ್ಕೂಟರ್ Burgman Street 125 ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ನ ಟೆಸ್ಟಿಂಗ್ ಅನೇಕ ತಿಂಗಳಿಗಳಿಂದ ನಡೆಯುತ್ತಿದೆ.  ಅದರ ಫೋಟೋವನ್ನು ಅನೇಕ ಆಟೋ ವೆಬ್‌ಸೈಟ್‌ಗಳಲ್ಲಿ ಮುದ್ರಿಸಲಾಗಿದೆ. 

4 /4

ಮಾಧ್ಯಮ ವರದಿಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, Yamaha ಭಾರತ ಮತ್ತು ಜಾಗತಿಕ ಮಾರುಕಟ್ಟೆಗಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಿದ್ದಪಡಿಸುತ್ತಿದೆ. ಯಮಹಾ 2019 E01 e-scooter 2019 Toyota Motor Show ನಲ್ಲಿ ಇ-ಸ್ಕೂಟರ್ ಪರಿಕಲ್ಪನೆಯನ್ನು ಪರಿಚಯಿಸಿತು. ಅದೇ ವರ್ಷದಲ್ಲಿ ಕಂಪನಿಯು EC-05 electric scooter ಅನ್ನು ತೈವಾನ್‌ನಲ್ಲಿ ಬಿಡುಗಡೆ ಮಾಡಿತು. ಈ ಸ್ಕೂಟರ್ ರಿಮೂವೆಬಲ್ ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಗರಿಷ್ಠ ಶ್ರೇಣಿ ಗಂಟೆಗೆ 100 ಕಿಲೋಮೀಟರ್. ಮಾಧ್ಯಮ ವರದಿಗಳ ಪ್ರಕಾರ, ಯಮಹಾ ತನ್ನ ಮೊದಲ ಹೈಬ್ರಿಡ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. Fascino 125 FI Hybrid ಮತ್ತು  ZR Hybrid ಅನ್ನು ಮುಂದಿನ ವರ್ಷದೊಳಗೆ ಬಿಡುಗಡೆ ಮಾಡಬಹುದು.