ನಿತ್ಯ ಈ ಐದು ಕಾರ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ

ಜ್ಯೋತಿಷಿಗಳು ಹೇಳುವ ಪ್ರಕಾರ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಮತ್ತು ದುಷ್ಟ ಶಕ್ತಿಗಳು ನೆಲೆಸುವುದಿಲ್ಲ. 
 

ಬೆಂಗಳೂರು : ನಿಯಮಿತವಾದ ಕಠಿಣ ಪರಿಶ್ರಮದ ನಂತರವೂ ಜೀವನದಲ್ಲಿ ಯಶಸ್ಸು ಸಿಗುತ್ತಿಲ್ಲ. ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದಾದರೆ ಜ್ಯೋತಿಷ್ಯದಲ್ಲಿ ಕೆಲವು ರೀತಿಯ ಸಲಹೆಗಳನ್ನು ಹೇಳಲಾಗಿದೆ. ಆ ಸಲಹೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿದರೆ ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

 ಜ್ಯೋತಿಷಿಗಳು ಹೇಳುವ ಪ್ರಕಾರ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಮತ್ತು ದುಷ್ಟ ಶಕ್ತಿಗಳು ನೆಲೆಸುವುದಿಲ್ಲ. ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಪೂಜೆ ಮಾಡಿ, ದೀಪ ಹಚ್ಚಿ. ಭಾನುವಾರದಂದು ಅತ್ತಿಮರದ ಬೇರನ್ನು ತಂದು ಅದನ್ನು ಯಥಾವತ್ತಾಗಿ ಪೂಜಿಸುವುದರಿಂದ ವ್ಯಕ್ತಿಗೆ ಎಂದೂ ಹಣದ ಕೊರತೆಯಾಗುವುದಿಲ್ಲ

2 /5

ಬೆಳಿಗ್ಗೆ ಎದ್ದ ನಂತರ ಹಲ್ಲುಜ್ಜುವುದು, ಸ್ನಾನ ಮಾಡುವುದು ಮಾಡಿದರೆ  ಅಶುಭವು ನಾಶವಾಗುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳಿಗ್ಗೆ ಸ್ನಾನ ಮಾಡಿದ ಬಳಿಕವೇ ಯಾವುದೇ ಆಹಾರ ಪದಾರ್ಥವನ್ನು ಸೇವಿಸಬೇಕು.  ಅಲ್ಲದೆ, ಸ್ನಾನ ಮಾಡದೆ ಧಾರ್ಮಿಕ ಪುಸ್ತಕಗಳು ಮತ್ತು ವಿಗ್ರಹಗಳನ್ನು ಸ್ಪರ್ಶಿಸುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ಕಡಿಮೆಯಾಗತೊಡಗುತ್ತದೆ. 

3 /5

ಜ್ಯೋತಿಷ್ಯ ಮತ್ತು ವಾಸ್ತುದಲ್ಲಿ ಕೆಲವು ಕೆಲಸಗಳನ್ನು ದಿಕ್ಕು ನೋಡಿ ಮಾಡಿದರೆ ಅದು ಶುಭ. ಆಹಾರವನ್ನು ಸೇವಿಸುವ ವಿಚಾರದಲ್ಲಿಯೂ ಇದನ್ನೂ ಹೇಳಲಾಗಿದೆ. ಆಹಾರವನ್ನು ಸೇವಿಸುವಾಗ, ವ್ಯಕ್ತಿಯು ಪೂರ್ವ ದಿಕ್ಕಿಗೆ ಮುಖ ಮಾಡಬೇಕು. ಪೂರ್ವ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಿ ಆಹಾರವನ್ನು ಎಂದಿಗೂ ಸೇವಿಸಬೇಡಿ. ಆಹಾರಕ್ಕೆ ಎಂದೂ ಅಗೌರವ ತೋರಿಸಬೇಡಿ.

4 /5

ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಈಶಾನ್ಯ ಮೂಲೆಯಲ್ಲಿ ಗಂಗಾಜಲವನ್ನು  ಸಿಂಪಡಿಸುವುದರಿಂದ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ. ಅಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಪರಿಚಲನೆಯು ಹೆಚ್ಚಾಗುತ್ತದೆ

5 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜೆಯ ಮನೆಯಲ್ಲಿ ಅರ್ಪಿಸಿದ ಹೂವುಗಳನ್ನು ಪೂಜೆಯ ಸ್ವಲ್ಪ ಸಮಯದ ನಂತರ ತೆಗೆಯಬೇಕು. ಅವುಗಳನ್ನು ಸಕಾಲದಲ್ಲಿ ತೆಗೆದುಹಾಕದಿದ್ದರೆ, ದುಷ್ಟ ಶಕ್ತಿಗಳು ಅವುಗಳಲ್ಲಿ ಮನೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಒಣಗಿದ ಹೂವುಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹತ್ತಿರ ಹರಿಯುವ ನೀರಿನ ಮೂಲ ಇಲ್ಲ ಎಂದಾದರೆ ಹೂವನ್ನು ಮಣ್ಣಿನಲ್ಲಿ ಹೂಳಬಹುದು.