Astro Predictions 2021: ವರ್ಷ 2021ರಲ್ಲಿ ಯಾವ ರಾಶಿ ಜಾತಕದವರಿಗೆ ಯಾವ ತಿಂಗಳು Lucky, ತಪ್ಪದೆ ಓದಿ

Astro Predictions 2021: ಗ್ರಹಗಳ ಬದಲಾಗುತ್ತಿರುವ ಚಲನೆಯಿಂದಾಗಿ, ನಮ್ಮ ಪ್ರತಿಯೊಂದು ದಿನ ಇತರೆ ದಿನಕ್ಕಿಂತ  ವಿಭಿನ್ನವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ, ನಿಮ್ಮ ಜಾತಕದ ಯಾವ ಮನೆಯಲ್ಲಿ ಯಾವ ಗ್ರಹ ಮತ್ತು ನಕ್ಷತ್ರವಿದೆ ಎಂಬುದು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ.

  • Dec 16, 2020, 20:50 PM IST

ನವದೆಹಲಿ: Astro Predictions 2021- ವರ್ಷ 2020 ಇತಿಹಾಸವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇನ್ನೊಂದೆಡೆ ನೂತನ ವರ್ಷ 2021 ಆಗಮನಕ್ಕೆ ದಿನಗಣನೆ ಕೂಡ ಆರಂಭವಾಗಿದೆ. ನಕ್ಷತ್ರಗಳು ಯಾವಾಗಲು ತಮ್ಮ ಸ್ಥಾನವನ್ನು ಪರಿವರ್ತಿಸುತ್ತಿರುತ್ತವೆ. ಈ ನಕ್ಷತ್ರಗಳು ನಮ್ಮ ಜೀವನದ ಮೇಲೂ ಕೂಡ ಪರಿಣಾಮ ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ಯಾವ ಗ್ರಹ ಹಾಗೂ ಯಾವ ನಕ್ಷತ್ರ ನಮ್ಮ ಕುಂಡಲಿಯ ಯಾವ ಮನೆ ಸೇರಿತ್ತಿದೆ ಎಂಬುದು ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದೆ. ಏಕೆಂದರೆ ಇದು ನಮ್ಮ ಜಾವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಬನ್ನಿ ರಾಶಿಗಳ ಅನುಸಾರ 2021ವರ್ಷದ ಯಾವ ತಿಂಗಳು ಯಾವ ರಾಶಿಯವರಿಗೆ ಶುಭ ಇರಲಿದೆ ಎಂಬುದು ತಿಳಿಯೋಣ.

 

ಇದನ್ನು ಓದಿ-Rashifal 2021: 2021ಈ ಮೂರು ರಾಶಿಗಳ ಮೇಲೆ ಶನಿಯ ವಕ್ರದೃಷ್ಟಿ ... ನಿಮ್ಮ ರಾಶಿ ಯಾವುದು?

1 /12

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿ ಜಾತಕ ಹೊಂದಿದವರಿಗೆ ವರ್ಷದ ಮೊದಲ ತಿಂಗಳು ಅಂದರೆ ಜನವರಿ ತುಂಬಾ ಶುಭವಾಗಿರಲಿದೆ. ವರ್ಷದ ಆರಂಭದಲ್ಲಿಯೇ ನಿಮ್ಮ ಕರಿಯರ್ ಹಾಗೂ ಲವ್ ಲೈಫ್ ನಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ನೀವು ಕಾಣಬಹುದಾಗಿದೆ.

2 /12

ವೃಷಭ ರಾಶಿಯ ಜನರಿಗೆ ವರ್ಷದ ಆರಂಭ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಆರಂಭದಲ್ಲಿ ನಿಮಗೆ ಕೆಲ ವಿಪರೀತ ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ಉತ್ತಮ ಫಲ ಪ್ರಾಪ್ತಿಗಾಗಿ ನೀವು ವರ್ಷಾಂತ್ಯದವರೆಗೆ ಕಾಯಬೇಕಾಗುವ ಸಾಧ್ಯತೆ ಇದೆ.

3 /12

ಜೋತಿಶ್ಯಾಚಾರ್ಯರು ಹೇಳುವುದನ್ನು ನಂಬುವುದಾದರೆ ಮಿಥುನ ರಾಶಿಯ ಜಾತಕ ಹೊಂದಿದವರಿಗೆ 2021 ರ ಆಗಸ್ಟ್ ತಿಂಗಳು ಶುಭಾವಾಗಿರಲಿದೆ. ಈ ತಿಂಗಳಲ್ಲಿ ನಿಮ್ಮ ಮೇಲೆ ಬುಧ ಗ್ರಹದ ಕೃಪಾದೃಷ್ಟಿ ಬೀಳಲಿದೆ ಹಾಗೂ ವರ್ಷದ ಆರಂಭದಿಂದ ನೀವು ನಿರೀಕ್ಷಿಸುತ್ತಿರುವ ಎಲ್ಲ ಫಲಗಳು ನಿಮಗೆ ಲಭಿಸಲಿವೆ. ಈ ತಿಂಗಳು ನಿಮ್ಮನ್ನು ಆಶಾವಾದಿಯನ್ನಾಗಿಸಲಿದೆ.

4 /12

ಕರ್ಕ ರಾಶಿಯ ಜಾತಕದವರಿಗೂ ಕೂಡ ಹೊಸ ವರ್ಷದಲ್ಲಿ ಉತ್ತಮ ಫಲ ಪಡೆಯಲು ಕಾಯಬೇಕಾಗಲಿದೆ. ಈ ಜಾತಕದವರ ಉತ್ತಮ ಸಮಯ ಸೆಪ್ಟೆಂಬರ್ ತಿಂಗಳಿನಿಂದ ಆರಂಭಗೊಳ್ಳಲಿದೆ. ವರ್ಷದ 10ನೇ ತಿಂಗಳಿನಲ್ಲಿ ನಿಮ್ಮ ಇಚ್ಛೆಗೆ ಅನುಗುಣವಾಗಿ ನಿಮಗೆ ಫಲಗಳು ಲಭಿಸಲಿವೆ. ಈ ತಿಂಗಳಿನಲ್ಲಿ ನಿಮ್ಮ ಮನದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಪೂರ್ಣಗೊಳ್ಳಲಿವೆ.

5 /12

ಸಿಂಹ ರಾಶಿಯ ಜನರಿಗೆ ಫೆಬ್ರುವರಿ ತಿಂಗಳು ವಿಶಿಷ್ಠವಾಗಿರಲಿದೆ. ತುಲಾ ರಾಶಿಯ ಜಾತಕದವರಿಗೆ ಫೆಬ್ರುವರಿ ತಿಂಗಳು ಮಹತ್ವಾಕಾಂಕ್ಷಿಗಳನ್ನಾಗಿಸಲಿದೆ. ವರ್ಷದ ಎರಡನೇ ತಿಂಗಳು ಮಂಗಳ ಹಾಗೂ ಅರುಣ ಗ್ರಹಗಳು ಸರಿಯಾದ ದಿಕ್ಕಿನಲ್ಲಿ ಕಾರ್ಯ ಮಾಡಲು ನಿಮಗೆ ಪ್ರೇರಣೆ ನೀಡಲಿವೆ.

6 /12

ಕನ್ಯಾ ಜಾತಕದವರಿಗೂ ಕೂಡ ಆಗಸ್ಟ್ ತಿಂಗಳು ಉತ್ತಮವಾಗಿರಲಿದೆ. ಈ ರಾಶಿಯ ಜನರು ಧರ್ಮ ಹಾಗೂ ನಂಬಿಕೆಯ ವಿಷಯದಲ್ಲಿ ಮುಂದೆ ಇರಲಿದ್ದಾರೆ. ಈ ತಿಂಗಳು ಯಾವುದೇ ನಕಾರಾತ್ಮಕ ಶಕ್ತಿ ಅಥವಾ ವ್ಯಕ್ತಿ ನಿಮ್ಮನ್ನು ಹಿಂದಕ್ಕೆ ತಳ್ಳಲು ಸಾಧ್ಯವಿಲ್ಲ. ಈ ತಿಂಗಳಲ್ಲಿ ನೀವು ಸಾಧಿಸಬೇಕಾದ ಗುರಿಯನ್ನು ಸಾಧಿಸುವಿರಿ.

7 /12

ತುಲಾ ರಾಶಿ ಜಾತಕದವರಿಗೆ ಏಪ್ರಿಲ್ ತಿಂಗಳು ಶುಭ ಇರಲಿದೆ. ಈ ತಿಂಗಳು ಹಲವು ಮಹತ್ವಪೂರ್ಣ ನಿರ್ಣಯಗಳನ್ನು ಕೈಗೊಳ್ಳುವಿರಿ ಹಾಗೂ ಅವುಗಳ ಉತ್ತಮ ಪರಿಣಾಮಗಳನ್ನು ಕೂಡ ನೀವು ಅನುಭವಿಸುವಿರಿ.

8 /12

ವೃಶ್ಚಿಕ ರಾಶಿಯ ಜನರು ತಮ್ಮ ಕನಸುಗಳನ್ನು ನನಸಾಗಿಸಲು ನೂತನ ವರ್ಷದಲ್ಲಿ ಸ್ವಲ್ಪ ಕಾಯಬೇಕಾಗಲಿದೆ. ಅಕ್ಟೋಬರ್ ತಿಂಗಳು ನಿಮ್ಮ ಪಾಲಿಗೆ ಶುಭ ಇರಲಿದೆ. ಈ ತಿಂಗಳು ಉತ್ತಮ ಕಾರ್ಯಗಳನ್ನು ಮುಂದುವರೆಸಲು ನಿಮಗೆ ಶನಿ ಹಾಗೂ ಗುರು ಸಹಕರಿಸಲಿವೆ.

9 /12

ಧನು ರಾಶಿಯ ಜಾತಕ ಹೊಂದಿರುವವರಿಗೆ ಜನವರಿ ತಿಂಗಳು ಲಕ್ಕಿ ಆಗಿರಲಿದೆ. ಒಂದು ವೇಳೆ ಉತ್ತಮ ಆರಂಭ ಮಾಡುವಲ್ಲಿ ನೀವು ವಿಶ್ವಾಸವಿಡುತ್ತಿದ್ದರೆ, ನಿಶ್ಚಿತವಾಗಿ ಈ ತಿಂಗಳು ನಿಮ್ಮ ಪಾಲಿಗೆ ಅದ್ಭುತವಾಗಿರಲಿದೆ.

10 /12

ಮಕರ ರಾಶಿಯ ಜಾತಕದವರಿಗೆ ಸೆಪ್ಟೆಂಬರ್ ತಿಂಗಳು ಭಾಗ್ಯಶಾಲಿಯನ್ನಾಗಿಸಲಿದೆ. ಶನಿ ಹಾಗೂ ಮಂಗಳ ಗ್ರಹಗಳ ಸಂಯೋಗ ನಿಮಗೆ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲು ಸಹಕರಿಸಲಿದೆ.

11 /12

ಕುಂಭ ರಾಶಿಯವರಿಗೆ ನವೆಂಬರ್ ತಿಂಗಳು ಅತ್ಯಂತ ವಿಶಿಷ್ಠವಾಗಿರಲಿದೆ. ಈ ತಿಂಗಳು ನಿಮಗೆ ಆತ್ಮವಿಶ್ವಾಸದ ಮಹತ್ವ ತಿಳಿಯಲಿದೆ. ಈ ತಿಂಗಳು ನೀವು ತುಂಬಾ ಮಹತ್ವಾಕಾಂಕ್ಷಿ ಹಾಗೂ ಪರಿಶ್ರಮಿಗಳಾಗಲಿದ್ದಿರಿ. ಈ ಅವಧಿಯಲ್ಲಿ ಸಫಲಗೊಂಡ ಯೋಜನೆಗಳು ದೀರ್ಘಕಾಲದವರೆಗೆ ಇರಲಿವೆ.

12 /12

ಮೀನ ರಾಶಿಯ ಜನರಿಗೂ ಕೂಡ ಉತ್ತಮ ಕಾಲ ನೋಡಲು ಕಾಲಾವಕಾಶ ಬೇಕಾಗಲಿದೆ. ಏಕೆಂದರೆ ಡಿಸೆಂಬರ್ 2021 ನಿಮ್ಮ ಪಾಲಿಗೆ ಶುಭ ತಿಂಗಳು ಆಗಿರಲಿದೆ. ಈ ತಿಂಗಳಿನಲ್ಲಿ ನೀವು ಸರಿಯಾದ ದಿಕ್ಕಿನಲ್ಲಿ ಯೋಚಿಸಲು ಆರಂಭಿಸುವಿರಿ.