GST on Maintenance Deposit: ಒಂದು ವೇಳೆ ನೀವೂ ಕೂಡ ಮನೆ ಅಥವಾ ಫ್ಲಾಟ್ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿಯನ್ನೊಮ್ಮೆ ಗಮನವಿಟ್ಟು ಓದಿ.
GST on Maintenance Deposit: ಒಂದು ವೇಳೆ ನೀವೂ ಕೂಡ ಮನೆ ಅಥವಾ ಫ್ಲಾಟ್ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿಯನ್ನೊಮ್ಮೆ ಗಮನವಿಟ್ಟು ಓದಿ. ಏಕೆಂದರೆ, ಈ ಸುದ್ದಿ ನಿಮ್ಮ ವ್ಯಾಲೆಟ್ ಮೇಲೆ ನೇರ ಪ್ರಭಾವ ಬೀರಲಿದೆ. ಹೌದು, ಫ್ಲಾಟ್/ಮನೆ ಖರೀದಿಯ ವೇಳೆ ಪಾವತಿಸಲಾಗುವ ಒನ್ ಟೈಮ್ ನಿರ್ವಹಣಾ ಡಿಪಾಸಿಟ್ ಮೇಲೆ ಶೇ.18 ರಷ್ಟು GST ಪಾವತಿಸಬೇಕಾಗಲಿದೆ. ಗುಜರಾತ್ ಅಥಾರಿಟಿ ಆಫ್ ಅಡ್ವಾನ್ಸ್ಡ್ ರೂಲಿಂಗ್ ಈ ತೀರ್ಪು ನೀಡಿದೆ.
ಇದನ್ನುಓದಿ - ಇನ್ಮುಂದೆ ಗೃಹ ಸಾಲಕ್ಕೂ ಸಿಗಲಿದೆ Discount, ಈ ಕಂಪನಿ ಜೊತೆ SBI ಒಡಂಬಡಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮನೆ ಖರೀದಿಸುವ ವೇಳೆ ನಿಮ್ಮ ಮೇಲೆ ಹಲವು ರೀತಿಯ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕಗಳಲ್ಲಿ ಒಂದೇ ಬಾರಿಗೆ ಪಾವತಿಸಲಾಗುವ ನಿರ್ವಹಣ ಶುಲ್ಕ ಕೂಡ ಒಂದು. ಸಾಮಾನ್ಯವಾಗಿ ಈ ಮೊದಲು ಈ ಶುಲ್ಕದ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸಲಾಗುತ್ತಿರಲಿಲ್ಲ. ಅಂದರೆ, ಒಂದು ವೇಳೆ ನೀವು ಯಾವುದಾದರೊಂದು ಫ್ಲಾಟ್ ಅಥವಾ ಮನೆ ಖರೀದಿಸುತ್ತಿದ್ದ ವೇಳೆ ಈ ಹಣವನ್ನು ಬಿಲ್ಡರ್ ಖಾತೆಯಿಂದ ಕಡಿತಗೊಳಿಸಲಾಗುತ್ತಿತ್ತು. ಆದರೆ, ಇದೀಗ ಬಿಲ್ಡರ್ ಈ ಹಣವನ್ನು ನಿಮ್ಮಿಂದ ಪಡೆದುಕೊಳ್ಳಲಿದ್ದಾರೆ.
ಒಂದು ವೇಳೆ ನೀವು ಸೊಸೈಟಿ ಖಾತೆಯಲ್ಲಿ OTMD ಪಾವತಿಸುತ್ತಿದ್ದು, ನಿಮ್ಮ ಸೊಸೈಟಿಯೇ ಎಲ್ಲ ಫ್ಲಾಟ್ ಗಳ ನಿರ್ವಹಣೆ ಹಾಗೂ ಬೇಕು-ಬೇಡಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಈ GST ನೀವು ಪಾವತಿಸಬೇಕಾಗಿಲ್ಲ. ಸರಳ ಭಾಷೆಯಲ್ಲಿ ಹೇಳುವುದಾದರೆ, ಬಿಲ್ಡರ್ ಫ್ಲಾಟ್ ಗಳಿರುವ ಜಾಗದಲ್ಲಿ ಒಂದು ವೇಳೆ ನೀವು ಮನೆ ಖರೀದಿಸಿದರೆ ಅಲ್ಲಿ ಪಾವತಿಸಲಾಗುವ OTMD ಮೇಲೆ ಇದೀಗ GST ಪಾವತಿಸಬೇಕಾಗಲಿದೆ. OTMD ನಾನ್-ರಿಫಂಡೆಬಲ್ ಡಿಪಾಸಿಟ್ ಆಗಿರುತ್ತದೆ. ಸೇವೆಗಳ ಪೂರೈಕೆ ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಕುರಿತು ತೀರ್ಪು ಪ್ರಕಟಿಸಿರುವ ಗುಜರಾತ್ ಅಥಾರಿಟಿ ಆಫ್ ಅಡ್ವಾನ್ಸ್ಡ್ ರೂಲಿಂಗ್, ಒಂದು ವೇಳೆ ಬಿಲ್ಡರ್ ವಸತಿ ಕಟ್ಟಡದ ನಿರ್ವಹಣೆ ನೋಡಿಕೊಳ್ಳುತ್ತಿದ್ದರೆ ಅವರಿಗೆ ಈ ಶೇ.18 ರಷ್ಟು GST ಸಲ್ಲಬೇಕು ಎಂದು ಹೇಳಿದೆ
ಗುಜರಾತ್ ನಲ್ಲಿರುವ Capital Commercial Coop Service Society, ಈ ಕುರಿತು ಪ್ರಾಧಿಕಾರದ ಮೊರೆ ಹೋಗಿ ಅಡ್ವಾನ್ಸ್ಡ್ ರೂಲಿಂಗ್ ಬೇಡಿಕೆಯನ್ನು ಸಲ್ಲಿಸಿತ್ತು. ತನ್ನ ಮನವಿ ಪತ್ರದಲ್ಲಿ ಒಂದುವೇಳೆ ಮನೆ ಮಾಲೀಕರು ಮನೆಯನ್ನು ತೊರೆದು ಹೋದರೆ ಅವರಿಗೆ ಡಿಪಾಸಿಟ್ ಹಿಂದಿರುಗಿಸಲಾಗುತ್ತಿತ್ತು. GST ಕಾನೂನು ಜಾರಿಗೆ ಬಂದ ಬಳಿಕ ಮರುಪಾವತಿಸಲಾದ ಡಿಪಾಸಿಟ್ ಅನ್ನು ಪರಿಗಣಿಸಲಾಗಿಲ್ಲ. ಹೀಗಾಗಿ ಮರುಪಾವತಿಸಲಾದ ಡಿಪಾಸಿಟ್ ಮೇಲೆ GST ಅನ್ವಯಿಸಬಾರರು ಎಂದಿತ್ತು. ಆದರೆ, ಪ್ರಾಧಿಕಾರ ಈ ತರ್ಕವನ್ನು ಅಲ್ಲಗಳೆದಿದೆ.
ಪ್ರಸ್ತುತ ಯಾವುದೇ ಓರ್ವ ವ್ಯಕ್ತಿ ಫ್ಲಾಟ್ ಅಥವಾ ಮನೆ ಖರೀದಿಸಿದರೆ, ಅವರು ಹಲವು ರೀತಿಯ ಚಾರ್ಜ್ ಅಂದರೆ, ಕ್ಲಬ್ ಚಾರ್ಜ್, ಪಾರ್ಕಿಂಗ್ ಚಾರ್ಜ್ ಇತ್ಯಾದಿಗಳನ್ನು ಭರಿಸುತ್ತಾರೆ. ಇದರ ಜೊತೆಗೆ ಅವರು ಒನ್ ಟೈಮ್ ಮೆಂಟೆನೆನ್ಸ್ ಡಿಪಾಸಿ ಕೂಡ ಭರಿಸುತ್ತಾರೆ. ಸೊಸೈಟಿ ಈ ಹಣವನ್ನು ತನ್ನ ಕಾರ್ಪಸ್ ನಲ್ಲಿರಿಸುತ್ತದೆ. ಹೀಗಾಗಿ ಈ ಡಿಪಾಸಿಟ್ ಹಣದ ಮೇಲೆ GST ಅನ್ವಯಿಸಬೇಕೋ ಅಥವಾ ಬೇಡವೋ ಎಂಬುದೇ ಇಲ್ಲಿನ ಪ್ರಮುಖ ಪ್ರಶ್ನೆ. ಆದರೆ, ಈಗಾಗಲೇ ಅಥಾರಿಟಿ ಈ ಕುರಿತು ತೀರ್ಪು ನೀಡಿದ್ದು ಮತ್ತು ಇದೊಂದು ಹಿಂದಿರುಗಿಸದ ಕಾರ್ಪಸ್ ಆಗಿರುವುದರಿಂದ ಕನ್ಸಿಡರೇಶನ್ ಅಡಿಯಲ್ಲಿ ಇದನ್ನು ನೋಡಬೇಕು ಮತ್ತು ಇದರ ಮೇಲೆ ಶೇ.18 ರಷ್ಟು GST ಪಾವತಿಸಬೇಕಾಗಲಿದೆ.