World Test Championshipನಿಂದ ಭಾರತ ಹೊರಹೊಗಲಿದೆಯೇ?

 World Test Championship - ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಮೊದಲ ಟೆಸ್ಟ್ ಪಂದ್ಯದ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗಾಗಿ ರೆಸ್ ಇನ್ನಷ್ಟು ರೋಚಕವಾಗಿದೆ. 

ನವದೆಹಲಿ: World Test Championship - ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಮೊದಲ ಟೆಸ್ಟ್ ಪಂದ್ಯದ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗಾಗಿ ರೆಸ್ ಇನ್ನಷ್ಟು ರೋಚಕವಾಗಿದೆ. ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಭಾರತವನ್ನು 227 ರನ್‌ಗಳಿಂದ ಸೋಲಿಸಿದೆ. ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಯ ಅಂಕಗಳ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ. ಸರಣಿಯ ಮೊದಲು ಪಟ್ಟಿಯಲ್ಲಿ ಅಗ್ರಸ್ಥಾನ ತಲುಪಿದ್ದ ಟೀಮ್ ಇಂಡಿಯಾ, ಸೋಲಿನ ನಂತರ ಈಗ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಮುಗಿದ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿರುವ ಎಲ್ಲ ತಂಡಗಳ ಸ್ಥಿತಿ ಹೇಗಿದೆ ಎಂದು ನೋಡೋಣ.

 

ಇದನ್ನು ಓದಿ-ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ ಪದ್ಧತಿಗೆ ಕೇನ್ ವಿಲಿಯಮ್ಸನ್ ಅಸಮಾಧಾನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಚೆನ್ನೈನಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಅಡ್ವಾಂಟೆಜ್ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ ಪಡೆದುಕೊಂಡಿದೆ. WTC ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಶೇ.70.2 ಹಾಗೂ 442 ಅಂಕಗಳ ಸಹಾಯದಿಂದ  ಅಗ್ರಸ್ಥಾನಕ್ಕೆ ತಲುಪಿದೆ. ಈ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸಿದರೆ, ನಂತರ ತಮ್ಮ ತಾಯ್ನಾಡಿನಲ್ಲಿ ಡಬ್ಲ್ಯೂಟಿಸಿ ಫೈನಲ್ ಆಡಲು ಅದಕ್ಕೆ ಸುವರ್ಣಾವಕಾಶವಿದೆ.

2 /4

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಸರಣಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಯಾವುದೇ ತೊಂದರೆ ಇಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದುಗೊಂಡ ಬಳಿಕ, ಕೇನ್ ವಿಲಿಯಮ್ಸನ್ ಅವರ ತಂಡವು ಈಗಾಗಲೇ ಡಬ್ಲ್ಯೂಟಿಸಿ ಫೈನಲ್ಸ್ಗೆ ಅರ್ಹತೆ ಪಡೆದಿದೆ. ನ್ಯೂಜಿಲೆಂಡ್ ಪ್ರಸ್ತುತ ಶೇ.70 ಮತ್ತು 420 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

3 /4

ಮೊದಲು ಭಾರತ ವಿರುದ್ಧದ ತವರು ಸರಣಿಯಲ್ಲಿ 2–1ರ ಸೋಲುಂಡು ನಂತರ ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಮುಂದೂಡುವುದು ಆಸ್ಟ್ರೇಲಿಯಾ ತಂಡಕ್ಕೆ ನಷ್ಟ ತಂದಿದೆ. ಆಸ್ಟ್ರೇಲಿಯಾದ ಭವಿಷ್ಯವು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಸರಣಿಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ, ಆಸ್ಟ್ರೇಲಿಯಾ 69.2 ಪ್ರತಿಶತ ಮತ್ತು 332 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

4 /4

ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತ ಭಾರತ ತಂಡವು ಡಬ್ಲ್ಯುಟಿಸಿ ಫೈನಲ್‌ಗೆ ತಲುಪುವ ಭರವಸೆಯನ್ನು ಹೊಂದಿದೆ. ಫೈನಲ್ ಪಂದ್ಯವನ್ನು ಆಡಲು ಭಾರತವು ಇಂಗ್ಲೆಂಡ್ ಅನ್ನು 2-1 ಅಥವಾ 3-1 ಅಂತರದಲ್ಲಿ  ಸೋಲಿಸಿ ಸರಣಿಯನ್ನು ತನ್ನದಾಗಿಸಬೇಕು. ಆದರೆ ಭಾರತವು ಈಗ ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಸೋಲುವುದರಿಂದ ಕೂಡ ಪಾರಾಗಬೇಕಿದೆ. ಏಕೆಂದರೆ ಒಂದು ಟೆಸ್ಟ್ ಸೋತ ನಂತರ ಭಾರತಕ್ಕೆ ಲಾರ್ಡ್ಸ್ ಬಾಗಿಲು ಮುಚ್ಚಲಿದೆ.