ಜುಲೈ15 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕ್ರಿಕೆಟ್

   

Last Updated : Jun 21, 2018, 12:07 PM IST
ಜುಲೈ15 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕ್ರಿಕೆಟ್ title=

 ನವದೆಹಲಿ: ಜುಲೈ 2019 ರಲ್ಲಿ ಕೆರಿಬಿಯನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡವು ತನ್ನ ಆರಂಭಿಕ ಪಂದ್ಯವನ್ನು ಆಡಲಿದೆ.

ಐಸಿಸಿ ಬಿಡುಗಡೆ ಮಾಡಿದ ಮುಂಬರುವ ಟೂರ್ನಿಗಳ ಪಟ್ಟಿಯ ಪ್ರಕಾರ , ಜುಲೈ 15, 2019 ರಿಂದ ಏಪ್ರಿಲ್ 30, 2021 ವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದೆ. ಎರಡು ವರ್ಷಗಳಲ್ಲಿ  ಪ್ರತಿ ತಂಡವು  ಆರು ಸರಣಿಗಳಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲಿ ಮೂರು ಸ್ವದೇಶದಲ್ಲಿ ಮೂರು ವಿದೇಶದಲ್ಲಿ ನಡೆಯುತ್ತವೆ.

ಇದಲ್ಲದೆ, 12 ಟೆಸ್ಟ್ ತಂಡಗಳು ಮತ್ತು  ನೆದರ್ಲ್ಯಾಂಡ್ಸ್ ಸಹಿತ ಒಳಗೊಂಡ  13-ತಂಡಗಳ ODI ಲೀಗ್  ಮೇ 1 ರಿಂದ 2020 ರವರೆಗೆ ಮಾರ್ಚ್ 31 ರಿಂದ 2022 ರವರೆಗೂ ನಡೆಯಲಿದೆ.ಎರಡು ವರ್ಷಗಳ ಅವಧಿಯಲ್ಲಿ ಪರಸ್ಪರ 8 ಸರಣಿಗಳಲ್ಲಿ ಪ್ರತಿ ತಂಡಗಳು ಭಾಗವಹಿಸಲಿವೆ ಎನ್ನಲಾಗಿದೆ.

ಏಕದಿನ ಲೀಗ್ ಐಸಿಸಿ ಕ್ರಿಕೆಟ್ ವಿಶ್ವಕಪ್ ನ ಅರ್ಹತಾ ಮಾರ್ಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.2023 ರ ವಿಶ್ವಕಪ್ ಟೂರ್ನಿಯನ್ನು ಭಾರತ ತಂಡವು ಆಯೋಜಿಸಲಿದೆ, 

ಅಂತರರಾಷ್ಟ್ರೀಯ ಕ್ರಿಕೆಟ್ ರಚನೆಯ ಭಾಗವಾಗಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬದಲಿಗೆ ಐಸಿಸಿ ವಿಶ್ವ ಟ್ವೆಂಟಿ -20 ಅನ್ನು ಐಸಿಸಿ ಮಂಡಳಿಯು ಅಂಗೀಕರಿಸಿದೆ ಮತ್ತು ಎಲ್ಲಾ 104 ಸದಸ್ಯರಿಗೆ ಟ್ವೆಂಟಿ -20 ಅಂತಾರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ.

Trending News