Adipurush Cast Fees: ಆದಿಪುರುಷ ಚಿತ್ರಕ್ಕೆ ಪ್ರಭಾಸ್‌, ಕೃತಿ, ಸೈಫ್‌ ಅಲಿ ಖಾನ್‌ ಪಡೆದ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ!

Adipurush Cast remuneration: 'ಆದಿಪುರುಷ' ಚಿತ್ರ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದರೂ ಚಿತ್ರಕ್ಕೆ ಸಂಬಂಧಿಸಿದ ವಿವಾದಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. 

Adipurush Cast remuneration:  'ಆದಿಪುರುಷ' ಅನೇಕ ವಿಚಾರಗಳಿಗೆ ಸುದ್ದಿಯಲ್ಲಿದೆ. ಕೆಲವೊಮ್ಮೆ ಚಿತ್ರದಲ್ಲಿನ ತಾರೆಯರ ಲುಕ್ ವಿವಾದದ ವಿಷಯವಾಯಿತು, ಮತ್ತೆ ಸೀತೆಯ ಪಾತ್ರ ಟ್ರೋಲ್‌ ಆಯ್ತು ಹೀಗೆ ಒಂದಲ್ಲ ಇನ್ನೊಂದು ವಿಚಾರಕ್ಕೆ ಆದಿಪುರುಷ ಸಿನಿಮಾ ಸುದ್ದಿಯಲ್ಲಿರುತ್ತದೆ. ಆದರೆ ಮಲ್ಟಿ ಸ್ಟಾರ್ ಗಳಿಂದ ಕಂಗೊಳಿಸುತ್ತಿರುವ ಈ ಗಾ ಬಜೆಟ್ ಚಿತ್ರದಲಿ ನಟಿಸಲು ಪ್ರಭಾಸ್‌ನಿಂದ ಹಿಡಿದು ಸೈಫ್ ಅಲಿಖಾನ್‌ವರೆಗೆ ಭಾರೀ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ. 
 

1 /5

‘ಆದಿಪುರುಷ’ ಚಿತ್ರದಲ್ಲಿ ಲಕ್ಷ್ಮಣ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಸನ್ನಿ ಸಿಂಗ್ ಗೆ ಸುಮಾರು 1.5 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ. 

2 /5

ಆದಿಪುರುಷ ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸೈಫ್ ಈ ಚಿತ್ರಕ್ಕಾಗಿ ಸುಮಾರು 12 ಕೋಟಿ ರೂ. ಸಂಭಾವನೆ ಕೇಳಿದ್ದಾರಂತೆ. 

3 /5

ರಾಮನ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ ಚಿತ್ರವೊಂದಕ್ಕೆ 100 ಕೋಟಿ ಚಾರ್ಜ್ ಮಾಡುತ್ತಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಅವರು ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ. ಈ ಚಿತ್ರಕ್ಕಾಗಿ ಪ್ರಭಾಸ್ ನಿರ್ಮಾಪಕರಿಂದ ಸುಮಾರು 150 ಕೋಟಿ ರೂ. ಸಂಭಾವನೆ ಕೇಳಿದ್ದಾರಂತೆ. 

4 /5

ಆದಿಪುರುಷ ಚಿತ್ರದಲ್ಲಿ ಕೃತಿ ಸನನ್ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕೃತಿ ಸೀತೆಯ ಪಾತ್ರಕ್ಕಾಗಿ ಸುಮಾರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. 

5 /5

‘ಆದಿಪುರುಷ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸೋನಾಲ್ ಚೌಹಾಣ್ ಸುಮಾರು 50 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರಂತೆ.