ಈ ಪುಟ್ಟ ಹುಡುಗಿ ಈಗ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ..! ಈಕೆ ಅಂದವನ್ನ ನೋಡೋದೇ ಕಣ್ಣಿಗೆ ಹಬ್ಬ.. ಗೆಸ್‌ ಮಾಡಿ ಯಾರಂತ..?

Actress Childhood photos : ಇತ್ತೀಚಿಗೆ ನಟ ನಟಿಯರ ಚಿಕ್ಕ ವಯಸ್ಸಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಈ ಪೈಕಿ ಖ್ಯಾತ ನಟಿಯೊಬ್ಬರ ಚಿಕ್ಕವಯಸ್ಸಿನ ಫೊಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಅಲ್ಲದೆ, ಈ ಪುಟ್ಟ ಬಾಲಕಿ ಯಾರು ಅಂತ ನೋಡಲು ಹೋದ ನೆಟ್ಟಿಗರು ಒಂದು ಕ್ಷಣ ಶಾಕ್‌ ಆಗಿದ್ದಾರೆ..

1 /9

ನಾಯಕಿಯ ಬಾಲ್ಯದ ಫೋಟೋಗಳು ಸದಾ ವೈರಲ್ ಆಗುತ್ತಿರುತ್ತವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯರ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ನೆಟ್ಟಿಗರು ಕೂಡ ನಾಯಕಿ ಯಾರೆಂದು ನೋಡಲು ಆಸಕ್ತಿ ತೋರಿಸುತ್ತಿದ್ದಾರೆ.  

2 /9

ಇದೇ ಸಾಲಿನಲ್ಲಿ ಇದೀಗ ನಾಯಕಿಯೊಬ್ಬರಿಗೆ ಸಂಬಂಧಿಸಿದ ಬಾಲ್ಯದ ಫೋಟೋವೊಂದು ವೈರಲ್ ಆಗಿದೆ. ಆಕೆ ಯಾರು ? ಅಂತ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ..  

3 /9

ಮೇಲಿನ ಫೋಟೋದಲ್ಲಿ ಕಾಣುತ್ತಿರುವ ಮಗು ಬೇರಾರೂ ಅಲ್ಲ.. ನಟಿ ಮಾಳವಿಕಾ ಮೋಹನನ್ (Malavika Mohanan). ಮಾಳವಿಕಾ ಅವರ ಬಾಲ್ಯದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   

4 /9

ಆದರೆ ಮಾಳವಿಕಾ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಮಾಳವಿಕಾ ಮೋಹನನ್ ಅವರು 7 ಆಗಸ್ಟ್ 1992 ರಂದು ಮುಂಬೈನಲ್ಲಿ ಜನಿಸಿದರು.   

5 /9

ಆಕೆಯ ತಂದೆ ಯುಕೆ ಮೋಹನನ್ ಬಾಲಿವುಡ್ ಚಲನಚಿತ್ರಗಳಿಗೆ ಪ್ರಸಿದ್ಧ ಸಿನಿಮಾಟೋಗ್ರಾಫರ್. ತಾಯಿ ವೀಣಾ ಮೋಹನನ್. ಆಕೆ ಪ್ರಸ್ತುತ ತನ್ನ ಕುಟುಂಬದೊಂದಿಗೆ ಕೇರಳದ ತನ್ನ ಹುಟ್ಟೂರಾದ ಬಿಯೂರಿನಲ್ಲಿ ನೆಲೆಸಿದ್ದಾಳೆ.  

6 /9

ಮಾಳವಿಕಾ ಮೋಹನನ್ 2013 ರಲ್ಲಿ “ಪಟ್ಟಂಪೋಲೆ” ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ರಜನಿಕಾಂತ್ ಅವರ ಪೆಟ್ಟಾ ಚಿತ್ರದಲ್ಲಿ ನಟಿಸಿ ತಮಿಳು ಅಭಿಮಾನಿಗಳ ಗಮನ ಸೆಳೆದರು.  

7 /9

ನಂತರ ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನಗೆದ್ದರು. ಇತ್ತೀಚೆಗೆ, ಬಿ. ರಂಜಿತ್ ನಿರ್ದೇಶನದ ವಿಕ್ರಮ್ ಅಭಿನಯದ "ತಂಗಳನ್" ಚಿತ್ರದಲ್ಲಿ ಮಾಳವಿಕಾ ಮೋಹನನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು..   

8 /9

ಮಾಳವಿಕಾ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಮನಸೆಳೆದಿದ್ದಾರೆ. ಇದೀಗ ಈ ಸುಂದರಿ ಪ್ರಭಾಸ್ ನಟನೆಯ ದಿ ರಾಜಾ ಸಾಬ್ ಚಿತ್ರದ ಮೂಲಕ ಟಾಲಿವುಡ್ ಗೆ ಪರಿಚಯವಾಗಲಿದ್ದಾರೆ.   

9 /9

ಸದ್ಯ ಈ ಸಿನಿಮಾದ ಶೂಟಿಂಗ್ ಹಂತದಲ್ಲಿದೆ.. ಈ ಚಿತ್ರದ ನಂತರ ಈ ಚೆಲುವೆ ಟಾಲಿವುಡ್‌ನಲ್ಲಿ ಮಿಂಚುತ್ತಾರಾ ಅಂತ ಕಾಯ್ದು ನೋಡೋಣ.