ದೇಶದ ಪ್ರಧಾನ ಸೇವಕನಿಗೆ ಹೂಮಳೆ ಸುರಿಸಿದ ಬೆಂಗಳೂರು ಜನತೆ, ಪೋಟೋಸ್‌ ನೋಡಿ

PM Modi Road Show : ಕರುನಾಡ ಕುರುಕ್ಷೇತ್ರಕ್ಕೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಇವೆ. ಕದನ ಕಲಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕೇಂದ್ರ ನಾಯಕರನ್ನು ರಾಜ್ಯಕ್ಕೆ ಕರೆಸಿ ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ. ಆಡಳಿತಾರೂಢ ಪಕ್ಷ ಬಿಜೆಪಿ ತನ್ನ ಕೇಂದ್ರ ನಾಯಕನನ್ನು ರಾಜ್ಯಕ್ಕೆ ಕರೆಸಿ ಪ್ರಚಾರ ಭರಾಟೆ ನಡೆಸುತ್ತಿದೆ.
 

1 /5

ಚುನಾವಣಾ ಪ್ರಚಾರಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋಗಳ ಮೂಲಕ ಪಕ್ಷದ ಭರ್ಜರಿ ಪ್ರಚಾರವನ್ನು ನಡೆಸಿದರು.   

2 /5

ಮೋದಿಜಿ ಅವರು 26 ಕಿ.ಮೀ ನಷ್ಟು ರೋಡ್‌ ಶೋ ನಡೆಸಿದ್ದು, ಬೆಂಗಳೂರಿನ ಅನೇಕ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.   

3 /5

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ನೋಡಲು ಜನಸಾಗರ ಹರಿದು ಬಂದಿದೆ. ಜೊತೆಗೆ ಹೂಮಳೆ ಸುರಿಸಿ ಪ್ರಧಾನಿಯವರನ್ನು ಗೌರವಿಸಲಾಯಿತು.  

4 /5

ಪ್ರಧಾನಿ ಮೋದಿಜಿ ಅವರು ಹಲವಾರು ಕಡೆಗಳಲ್ಲಿ ರೋಡ್‌ ಶೋ ಮೂಲಕ ಭರ್ಜರಿಯಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  

5 /5

ಪ್ರಧಾನಿ ಮೋದಿ ಅವರ ರೋಡ್‌ ಶೋ ವೇಳೆಯಲ್ಲಿ ತುರ್ತು ವಾಹನಗಳು, ಆಂಬುಲೆನ್ಸ್‌, ಮುಂತಾದವುಗಳಿಗೆ ಅಡೆತಡೆ ಮಾಡದೇ ಹಾದು ಹೋಗಲು ಅನುಮತಿಯನ್ನು ನೀಡಲಾಗಿದೆ.