ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ಅವರ ಪ್ರೇಮ ಕಥೆ

ಪ್ರಿಯಾಂಕ ಚೋಪ್ರಾ  (Priyanka Chopra) ಇಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
 

  • Jul 18, 2020, 12:13 PM IST

ನವದೆಹಲಿ: ಗ್ಲೋಬಲ್ ತಾರೆ ಪ್ರಿಯಾಂಕಾ ಚೋಪ್ರಾ ಜುಲೈ 18 ರಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನ ಛಾಪು ಮೂಡಿಸಿದ ಪ್ರಿಯಾಂಕಾ ಚೋಪ್ರಾ ಅವರ ವಿವಾಹವು ಹೆಚ್ಚು ಚರ್ಚೆಯಾಗಿದೆ. 2018ರಲ್ಲಿ ಅಮೆರಿಕದ ಗಾಯಕ ನಿಕ್ ಜೊನಾಸ್ ಅವರನ್ನು ಮದುವೆಯಾಗುವ ಮೂಲಕ ಪ್ರಿಯಾಂಕಾ ಎಲ್ಲರನ್ನು ಅಚ್ಚರಿಗೊಳಿಸಿದರು. ಮದುವೆಯ ನಂತರ ಹೊರಬಂದ ಪ್ರಿಯಾಂಕಾ ಮತ್ತು ನಿಕ್ ಅವರ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಇಬ್ಬರೂ ತಮ್ಮ ಪ್ರಣಯಕ್ಕೆ ಹೆಸರುವಾಸಿಯಾಗಿದ್ದಾರೆ. ಬನ್ನಿ ಅವರ ಕೆಲವು ಸುಂದರ ಚಿತ್ರಗಳನ್ನು ನೋಡಿ ...

1 /6

ಪ್ರಿಯಾಂಕಾ ಮತ್ತು ನಿಕ್ ಅವರ ಸಂಬಂಧವು 2017ರ ಮೆಟ್ ಗಾಲಾ ಘಟನೆಯೊಂದಿಗೆ ಪ್ರಾರಂಭವಾಯಿತು, ಅಲ್ಲಿ ಅವರು ಮೊದಲು ನಿಕ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು.  

2 /6

'ದಿ ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿ'ಯಲ್ಲಿ, ನಿಕ್ ಮೊದಲ ಬಾರಿಗೆ ಪ್ರಿಯಾಂಕಾಳನ್ನು ನೋಡಿದನು. ಆಗಲೇ ಫಿದಾ ಆದರಂತೆ. ಈ ಘಟನೆಯು 2017ರ ಪ್ರಸಿದ್ಧ ಮೆಟ್ ಗಾಲಾಕ್ಕೆ ಕೆಲವು ತಿಂಗಳ ಮೊದಲು ನಡೆಯಿತು.

3 /6

ನಿಕ್ ಟ್ವಿಟ್ಟರ್ ನಲ್ಲಿ ಪ್ರಿಯಾಂಕಾ ಅವರಿಗೆ ನೇರ ಸಂದೇಶಗಳನ್ನು ಕಳುಹಿಸುತ್ತಿದ್ದರು.

4 /6

ಒಂದು ದಿನ ಪ್ರಿಯಾಂಕಾ ನೀವು ಕಳುಹಿಸುವ ಡಿಎಂ (ಡೈರೆಕ್ಟ್ ಮೆಸೇಜ್) ಅನ್ನು ನನ್ನ ತಂಡವೋ ಓದಬಹುದು ಎಂದು ಹೇಳಿ ನಂತರ ನಿಕ್‌ಗೆ ತನ್ನ ನಂಬರ್ ನೀಡಿದ್ದಾಗಿ ಹೇಳಿದರು.  

5 /6

ನಂತರ ಇಬ್ಬರೂ ಪ್ರಸಿದ್ಧ ಪಾಪ್ ತಾರೆ ರಿಹಾನ್ನಾ ಅವರ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪ್ರಿಯಾಂಕಾ ಮತ್ತು ನಿಕ್ ನಡುವಿನ ಸಂಬಂಧದ ಸುದ್ದಿ ಹುಟ್ಟಿದ್ದು ಇಲ್ಲಿಂದಲೇ. (ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಅವರ ಇನ್‌ಸ್ಟಾಗ್ರಾಮ್‌ನಿಂದ ತೆಗೆದುಕೊಳ್ಳಲಾಗಿದೆ)  

6 /6

2017 ರ ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ಪ್ರಿಯಾಂಕಾ ಅವರನ್ನು ಭೇಟಿಯಾದ ನಂತರ ನಿಕ್ ತನ್ನ ಪಾನೀಯವನ್ನು ಕೆಳಗಿಳಿಸಿ ಒಂದು ಮೊಣಕಾಲಿನ ಮೇಲೆ ಕುಳಿತನು. ಎಲ್ಲರ ಮುಂದೆ ನಿಕ್ ಪ್ರಿಯಾಂಕಾಳನ್ನು ಜೋರಾಗಿ ಕೂಗಿ ನೀವು ನಿಜವಾಗಿಯೂ ನನ್ನ ಜೀವನ ಪರ್ಯಂತ ನನ್ನ ಜೊತೆಗಿರುವಿರಾ? ಎಂದು ಕೇಳಿದರು.