Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿ ʼಬಡ್ಡಿ ಬಂಗಾರಮ್ಮʼ ನಿಜಕ್ಕೂ ಯಾರು ಗೊತ್ತಾ? ಇವರು ನಟಿ ಮಾತ್ರವಲ್ಲ!!

Puttakkana Makkalu Baddi Bangaramma: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಪುಟ್ಟಕ್ಕನ ಮಕ್ಕಳು ಧಾರವಾಹಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ.. 
 

1 /7

ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಕಂಠಿ ತಾಯಿಯಾಗಿ ನಟಿಸಿರುವ ಬಡ್ಡಿ ಬಂಗಾರಮ್ಮ ನಿಜ್ಜಕೂ ಅಭಿಮಾನಿಗಳ ಫೇವರೆಟ್‌ ಎಂದರೇ ತಪ್ಪಾಗುವುದಿಲ್ಲ.. ಇಷ್ಟು ಖಡಕ್‌ ಆಗಿ ಪಾತ್ರಕ್ಕೆ ಜೀವ ತುಂಬಿರೋ ಈ ನಟಿ ಯಾರು? ಇವರ ಹಿನ್ನಲೆ ಏನು? ಇದರ ಒಂದಷ್ಟು ಮಾಹಿತಿ ಇಲ್ಲಿದೆ..  

2 /7

ದಿನದಿಂದ ದಿನಕ್ಕೆ ವಿಭಿನ್ನ ಟ್ವಿಸ್ಟ್‌ಗಳ ಪ್ರೇಕ್ಷಕರ ಮನಗೆಲ್ಲುತ್ತಿರುವ ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಖಡಕ್‌ ಮಾತು, ಮೃದು ಮನಸ್ಸಿನರುವ ಬಡ್ಡಿ ಬಂಗಾರಮ್ಮನ ಪಾತ್ರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.. ಈ ಪಾತ್ರಧಾರಿಯ ಜಿವಾದ ಹೆಸರು ಮಂಜುಭಾಷಿಣಿ..     

3 /7

 ನಟಿ ಮಂಜುಭಾಷಿಣಿ ಮೂಲತಃ ಮಂಗಳೂರಿನವರು.. ಸಿರೀಯಲ್‌ ಮೂಲಕವೇ ಮನೆ ಮಗಳಾದವರು.. ಸುಮಾರು ಮೂರ್ನಾಲ್ಕು ವರ್ಷಗಳಿಂದಲೂ ಕಿರುತೆರೆಯಿಂದ ಹೊರಗುಳಿದಿದ್ದರು.. ಇವರು ಆರೂರು ಜಗದೀಶ್‌ ನಿರ್ದೇಶನದ ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟರು..     

4 /7

ಈ ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಕಂಠಿ ತಾಯಿಯಾಗಿ ಬಡ್ಡಿ ಬಂಗಾರಮ್ಮನ ಪಾತ್ರ ಮಾಡುತ್ತಿರುವ ಮಂಜುಭಾಷಿನಿ 'ಭೂಮಿಗೀತ' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ...   

5 /7

ಆದರೆ ಇದರಿಂದ ಸಿರೀಯಲ್‌ನಿಂದ ಸಿಕ್ಕಷ್ಟು ಜನಪ್ರಿಯತೆ ಅವರಿಗೆ ಸಿಗಲಿಲ್ಲ.. ಗಿರೀಶ್ ಕಾರ್ನಾಡ್‌ ಅವರ ಅಂತರಾಳ ಸಿರೀಯಲ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು.. ಮಾಯಾಮೃಗ ಸಿರೀಯಲ್..‌      

6 /7

ಮನರಂಜನಾ ಲೋಕದಲ್ಲಿ ಮಿಂಚುತ್ತಿರುವ ಮಂಜುಭಾಷಿಣಿ ವೈಯಕ್ತಿಕ ಜೀವನದಲ್ಲೂ ಶ್ರಮ ಜೀವಿಯಾಗಿದ್ದಾರೆ.. ಇವರು ಬರೀ ನಟಿಯಾಗಿರದೇ ಅವರ ಪತಿ ಜೊತೆಗೂಡಿ ಹೊಸತೊಂದು ಕಂಪನಿ ನಡೆಸುತ್ತಿದ್ದಾರೆ..    

7 /7

ಇನ್ನು ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಮುಂಚೂಣಿಯಲ್ಲಿದೆ.. ವಿಭಿನ್ನ ಕಥಾಹಂದರ ಹೊಂದಿದ ಈ ಸಿರೀಯಲ್‌ನಲ್ಲಿ ದೊಡ್ಡ ದೊಡ್ಡ ಕಲಾವಿದರ ಬಳಗವೇ ಇದೆ..