ನೂರು ಕಣ್ಣು ಸಾಲು.. ನಿನ್ನ ನೋಡಲು..! ಎಷ್ಟು ಕ್ಯೂಟ್‌ ಅಲ್ವಾ ನಮ್ಮ ಬೆಳಗಾವಿ ಸುಂದರಿ

Raai Laxmi : ಬೆಳಗಾವಿ ಸುಂದರಿ ಲಕ್ಷ್ಮಿ ರೈ ಯಾರಿಗೆ ಗೊತ್ತಿಲ್ಲ ಹೇಳಿ. ವಾಲ್ಮೀಕಿ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸುಂದರಿ ಸಾಕಷ್ಟು ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಧ್ಯ ಲಕ್ಷಿ ರೈ ಹಂಚಿಕೊಂಡಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದ್ದು, ನೀವು ಒಮ್ಮೆ ಆ ಚಿತ್ರಗಳನ್ನು ನೋಡಿಬಿಡಿ..
 

1 /9

ಲಕ್ಷ್ಮಿ ರೈ ದಕ್ಷಿಣ ಭಾರತದ ಸೂಪರ್ ಹಿಟ್ ನಟಿಯರಲ್ಲಿ ಒಬ್ಬರು. ತಮ್ಮ ಅಮೋಘ ಸೌಂದರ್ಯ ಮತ್ತು ನಟನೆಯಿಂದ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಗಳಿಸಿದ್ದಾರೆ.     

2 /9

ಮೇ 9, 1985 ರಂದು ಬೆಳಗಾವಿ ಜಿಲ್ಲೆಯ ರಾಯಬಾಗ್‌ನಲ್ಲಿ ಲಕ್ಷಿ ಜನಿಸಿದರು.     

3 /9

ಶಿವರಾಜ್‌ ಕುಮಾರ್‌ ನಟನೆಯ ವಾಲ್ಮಿಕಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು.  

4 /9

ಸ್ನೇಹಾನಾ ಪ್ರೀತಿನಾ ಸಿನಿಮಾ ಲಕ್ಷ್ಮಿ ರೈಗೆ ಖ್ಯಾತಿ ತಂದು ಕೊಟ್ಟಿತು.   

5 /9

ಸ್ನೇಹಾನಾ ಪ್ರೀತಿನಾ ಸಿನಿಮಾದಲ್ಲಿ ದರ್ಶನ್‌ ಮತ್ತು ಆದಿತ್ಯ ಜೊತೆಯಾಗಿ ಲಕ್ಷ್ಮಿ ರೈ ನಟಿಸಿದ್ದರು.  

6 /9

ನಂತರ ಮಿಂಚಿನ ಓಟ,  ಅಟ್ಟಹಾಸ, ಜಾನ್ಸಿ ಐಪಿಎಸ್‌ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡರು.  

7 /9

ಕಳೆದ ಕೆಲವು ವರ್ಷಗಳ ಹಿಂದೆ ಲಕ್ಷ್ಮಿ ರೈ  ತಮ್ಮ ಹೆಸರನ್ನು ರೈ ಲಕ್ಷ್ಮಿ ಎಂದು ಬದಲಾಯಿಸಿಕೊಂಡಿದ್ದಾರೆ.  

8 /9

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ, ಆಗಾಗ ಫೋಟೋ ಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ.  

9 /9

ಸಧ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ಲಕ್ಷ್ಮಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದು, ಫೋಟೋಸ್‌ ವೈರಲ್‌ ಆಗುತ್ತಿವೆ.