Radhika Pandit: ಪ್ರೇಮಿಗಳ ದಿನ ಟೈಮ್‌ನಲ್ಲಿ ಸ್ಯಾಂಡಲ್‌ವುಡ್‌ ಸಿಂಡ್ರೆಲಾಳ ನ್ಯೂ ಫೋಟೋಶೂಟ್‌!

Radhika Pandit Latest Photoshoot: ಪ್ರೇಮಿಗಳ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆ ದಿನವನ್ನು ತಮ್ಮ ಪ್ರೇಮಿಯೊಂದಿಗೆ ಹೇಗೆಲ್ಲಾ ಸಂಭ್ರಮಿಸಬೇಕು ಅಂತ ಈಗಾಗಲೇ ಲವರ್ಸ್‌ ಸ್ಕೆಚ್ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌  ಹೊಸ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳ  ಜೊತೆಗೆ ಹಂಚಿಕೊಂಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಇನ್ನೇನು ಪ್ರೇಮಿಗಳ ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಕೂಡ ಹೊಸ  ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ವ್ಯಾಲೆಂಟಥನ್ಸ್‌ ಡೇ ಮೂಡ್‌ನಲ್ಲಿ ಚಂದನವನದ ಸಿಂಡ್ರೆಲ್ಲಾ ರಾಧಿಕಾ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

2 /6

ನಟಿ ರಾಧಿಕಾ ಪಂಡಿತ್‌,  ಕಡು ಕೆಂಪು ಬಣ್ಣದ ಗೌನ್ ತೊಟ್ಟು, ಮಿಣ ಮಿಣ ಅಂತ ಮಿನುಗುವ ಲೈಟ್‌ಗಳ ಮಧ್ಯೆ ಥೇಟ್  ಸಿಂಡ್ರೆಲ್ಲಾರಂತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ನಟಿ  ಬ್ಯಾಕ್‌ಗ್ರೌಂಡ್‌ನಲ್ಲಿ ಮೂರು ಫೋಟೊಗಳನ್ನು ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

3 /6

ರಾಧಿಕಾ ಪಂಡಿತ್‌ ಪ್ರೇಮಿಗಳ ವಾರದಲ್ಲಿ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಜೊತೆ ಯಶ್ ಫ್ಯಾನ್ಸ್ ಕೂಡ ಕಮೆಂಟ್ ಮೇಲೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

4 /6

ಚಂದನವನದ ಬೆಡಗಿ ರಾಧಿಕಾ ಸಿಂಡ್ರೆಲ್ಲ ಹಾಗೇನೇ ಮಿಂಚುತ್ತಿರುವ ತಮ್ಮ ಫೋಟೋಗಳಿಗೆ ಕ್ಯಾಪ್ಷನ್ ಕೂಡ ಕೊಟ್ಟಿ, "ನನ್ನ ಪ್ರೀತಿಪಾತ್ರರು ಕಾಣಿಸಿಕೊಂಡಾಗ ಸುಂದರ ಕ್ಷಣಗಳು ಆರಂಭ ಆಗುತ್ತವೆ " ಎಂದು ಬರೆದುಕೊಂಡಿದ್ದಾರೆ. ಈ ನಟಿಯ ಫೋಟೊಗಳು ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ರಾಕಿಂಗ್ ಸ್ಟಾರ್ ಯಶ್‌ರನ್ನು ಹುಡುಕಾಡುತ್ತಿದ್ದಾರೆ. 

5 /6

ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿರುವ ಫೋಟೊಗಳಿಗೆ ಅಭಿಮಾನಿಗಳು ಕ್ಯೂಟ್ ಆಗಿ ಕಮೆಂಟ್‌ಗಳನ್ನು ಮಾಡಿದ್ದು, "ಅತ್ತಿಗೆ ಅಣ್ಣನಾ ಫೋಟೋ ಕೂಡ ಹಾಕ್ಬೇಕು ತಾನೇ.. ಬರಿ ನಿಮ್ಮ ಫೋಟೋ ಅಷ್ಟೇನಾ ಪ್ರತಿ ಸರಿ.." ಎಂದು ಯಶ್ ಅಭಿಮಾನಿ ಕಮೆಂಟ್ ಮಾಡಿದ್ದಾರೆ. 

6 /6

ನಟಿ ರಾಧಿಕಾ ಫೋಟೋಗಳಿಗೆ, "ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ. ರಾಧು ನಿಮಗೆ ನನ್ನ ಕಡೆಯಿಂದ ಲಾಟ್ಸ್ ಆಫ್ ಲವ್" ಎಂದು ರಾಧಿಕಾ ಅವರ ಮಹಿಳಾ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರ ಮಹಿಳಾ ಅಭಿಮಾನಿ " ಈ ಸೌಂದರ್ಯವನ್ನು ಹ್ಯಾಂಡಲ್ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.