ಮಂಗಳನ ಮನೆಯಲ್ಲಿ ಮಾಯಾವಿ ರಾಹು-ಧನದಾತ ಶುಕ್ರನ ಮೈತ್ರಿ, 3 ರಾಶಿಗಳ ಜನರಿಗೆ ಧನಲಾಭದ ಜೊತೆಗೆ ಉನ್ನತಿ ಪ್ರಾಪ್ತಿ!

Rahu-Venus Conjunction In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಅಧಿಪತ್ಯದ ಮೇಷ ರಾಶಿಯಲ್ಲಿ ಮಾಯಾವಿ ರಾಹು ಹಾಗೂ ಧನದಾತ ಶುಕ್ರನ ಮೈತ್ರಿ ನೆರವೇರಿದೆ. ಇದರಿಂದ 3 ರಾಶಿಗಳ ಜಾತಕದ ಜನರಿಗೆ ಅಪಾರ ಧನ ಪ್ರಾಪ್ತಿ ಹಾಗೂ ಉನ್ನತಿಯ ಯೋಗ ರೂಪುಗೊಳ್ಳುತ್ತಿದೆ, ಆ ಮೂರು ಅದೃಷ್ಟಶಾಲಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Rahu Shukra Yuti In Mesha: ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ತಮ್ಮ ರಾಶಿಗಳನ್ನು ಬದಲಾಯಿಸುವ ಮೂಲಕ ಮೈತ್ರಿ ಮಾಡಿಕೊಳ್ಳುತ್ತವೆ. ಅದರ ಪ್ರಭಾವ ಭೂಮಿಯ ಮೇಲೇರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಮಾರ್ಚ್ 12 ರಂದು, ರಾಹು ಗ್ರಹವು ಈಗಾಗಲೇ ವಿರಾಜಮಾನನಾಗಿರುವ ಮಂಗಳನ ಮನೆಗೆ ಶುಕ್ರನ ಗೋಚರ ನೆರವೇರಿದೆ . ಇದರಿಂದ ಮೇಷ ರಾಶಿಯಲ್ಲಿ ಈ ಎರಡು ಗ್ರಹಗಳ ಮೈತ್ರಿ ಏರ್ಪಡುತ್ತಿದೆ. ಈ ಮೈತ್ರಿಯಿಂದ  3 ರಾಶಿಗಳ  ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಆ ಅದೃಷ್ಟಶಾಲಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Buddha Purnima ದಿನ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಪ್ರತಿ ಕ್ಷೇತ್ರದಲ್ಲಿ ಯಶಸ್ಸಿನ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮಿಥುನ ರಾಶಿ: ರಾಹು ಮತ್ತು ಶುಕ್ರರ ಸಂಯೋಜನೆಯು ಮಿಥುನ ಜಾತಕದವರಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಏಕಾದಶ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳುತ್ತಿದೆ. ಹೀಗಾಗಿ ವಿದೇಶದಿಂದ ವ್ಯಾಪಾರ ಮಾಡುವ ಜನರಿಗೆ ಲಾಭದ ಸಮಯ  ನಡೆಯುತ್ತಿದೆ ಮತ್ತು ನಿಮ್ಮ ವ್ಯಾಪಾರವು ವಿಸ್ತರಿಸಲಿದೆ . ಅಲ್ಲದೆ, ಹಳೆಯ ಹೂಡಿಕೆಗಳು ಸಹ ನಿಮಗೆ ಪ್ರಯೋಜನವನ್ನು ನೀಡಲಿವೆ. ಆದಾಯದಲ್ಲಿ ಅಪಾರ ಹೆಚ್ಚಳವಾಗಬಹುದು. ಸಂತಾನದ ಕಡೆಯಿಂದ ಪ್ರಗತಿ ಕಾಣಬಹುದು. ಇದರೊಂದಿಗೆ ಹಠಾತ್ ಹಣದ ಲಾಭದ ಸಾಧ್ಯತೆಗಳೂ ಸೃಷ್ಟಿಯಾಗುತ್ತಿವೆ.  

2 /3

ಮೇಷ ರಾಶಿ: ರಾಹು ಮತ್ತು ಶುಕ್ರನ ಸಂಯೋಜನೆಯು ಮೇಷ ರಾಶಿಯ ಜನರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಆರೋಹಣ ಭಾವದಲ್ಲಿ  ಈ ಮೈತ್ರಿ ಏರ್ಪಡಲಿದೆ. ಆದ್ದರಿಂದ, ಈ ಸಮಯದಲ್ಲಿ ನೀವು ನಿಮ್ಮ  ಆತ್ಮವಿಶ್ವಾಸದಲ್ಲಿ  ಹೆಚ್ಚಳವನ್ನು ನೋಡುವಿರಿ. ಇದರೊಂದಿಗೆ, ನಿಮ್ಮ ಸೌಕರ್ಯಗಳು ಹೆಚ್ಚಾಗಳಿವೆ ಮತ್ತು ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಈ ಸಮಯದಲ್ಲಿ ಉತ್ತಮವಾಗಿರುತ್ತದೆ. ಇದೇ ವೇಳೆ, ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವವು ಹೆಚ್ಚಾಗಲಿದೆ. ಇದರೊಂದಿಗೆ, ಮಾರ್ಚ್ ನಂತರ ವೇತನದಾರರ ಬಡ್ತಿ ಮತ್ತು ಇಂಕ್ರೀಮೆಂಟ್ ಸಾಧ್ಯತೆ ಕೂಡ ಗೋಚರಿಸುತ್ತಿದೆ. ಈ ಅವಧಿಯಲ್ಲಿ ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಪ್ರೀತಿಯ ಜೀವನವೂ ಚೆನ್ನಾಗಿರುತ್ತದೆ. ನೀವು ಪಾಲುದಾರಿಕೆ ವ್ಯವಹಾರವನ್ನು ಪ್ರಾರಂಭಿಸಲು ಬಯ್ಸುಟ್ಟಿದ್ದಾರೆ ಈ ಸಮಯವು ನಿಮಗೆ ಸಾಕಷ್ಟು ಅನುಕೂಲಕರವಾಗಿದೆ,  

3 /3

ಮಕರ ರಾಶಿ: ರಾಹು ಮತ್ತು ಶುಕ್ರರ ಮೈತ್ರಿ ನಿಮಗೆ ಆರ್ಥಿಕ ದೃಷ್ಟಿಯಿಂದ ಅತ್ಯಂತ ಮಂಗಳಕರವೆಂದು ಸಾಬೀತಾಗಲಿದೆ ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಚತುರ್ಥ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳುತ್ತಿದೆ. ಹೀಗಾಗಿ ನೀವು ಈ ಸಮಯದಲ್ಲಿ ಭೌತಿಕ ಸುಖಗಳನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯಲ್ಲಿ ನೀವು ವಾಹನ ಮತ್ತು ಆಸ್ತಿಯನ್ನು ಖರೀದಿಸಲು ನಿಮ್ಮ ಮನಸ್ಸು ಮಾಡಬಹುದು. ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ನೀವು ಅವರ ಪ್ರತಿಯೊಂದು ಆಸೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ನೀವು ಜವಾಬ್ದಾರಿಗಳನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಲಿದ್ದಾರೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಧಾರ್ಮಿಕ ನಂಬಿಕೆ ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)