Vipareet Rajyog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ಮಂಗಳನ ವೃಷಭ ರಾಶಿ ಗೋಚರ ನೆರವೇರಲಿದೆ. ಇದರಿಂದ ವಿಪರೀತ ರಾಜಯೋಗ ನಿರ್ಮಾಣಗೊಳ್ಳಲಿದೆ. ಈ ರಾಜಯೋಗ 4 ರಾಶಿಗಳ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದ್ದು, ಇವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳಲಿದೆ.
Mars Transit 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಗ್ರಹಗಳ ಸೇನಾಪತಿ ಎಂದೇ ಭಾವಿಸಲಾಗುವ ಮಂಗಳ ಮಾರ್ಚ್ 13 ರಂದು ಮಿಥುನ ರಾಶಿಯಲ್ಲಿ ಸಾಗಲಿದ್ದಾನೆ. ಇದರಿಂದ ವಿಪರೀತ ರಾಜಯೋಗ ಸೃಷ್ಟಿಯಾಗಲಿದೆ. ಮತ್ತೊಂದೆಡೆ, ಈ ರಾಜಯೋಗದ ರಚನೆಯೊಂದಿಗೆ, 4 ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.. ಈ ಜನರ ಜೀವನದಲ್ಲಿ ಹಠಾತ್ ಧನ ಲಾಭದ ಸಾಧ್ಯತೆಗಳೂ ಸೃಷ್ಟಿಯಾಗುತ್ತಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-Brihaspati Gochar 2023: ಮುಂದಿನ 15 ತಿಂಗಳು ಗುರು ದೆಸೆಯಿಂದ ಈ 3 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕರ್ಕ ರಾಶಿ: ವಿಪರೀತ ರಾಜಯೋಗ ನಿಮಗೆ ಉತ್ತಮ ಧನಲಾಭ ನೀಡಲಿದೆ. ಏಕೆಂದರೆ ಮಂಗಳನು ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಸಾಗುತ್ತಿದ್ದಾನೆ. ಇದರೊಂದಿಗೆ ಕೇತು ದೃಷ್ಟಿ ಕೂಡ ನಿಮ್ಮ ಮೇಲಿದೆ. ಹೀಗಾಗಿ ಈ ಸಂಪತ್ತಿನ ಯೋಗ ಸೃಷ್ಟಿಯಾಗುತ್ತಿದೆ. ಈ ಸಮಯದಲ್ಲಿ ನೀವು ಲಾಟರಿ ಗೆಲ್ಲಬಹುದು. ಅಲ್ಲದೆ, ಉದ್ಯಮಿಗಳು ಈ ಸಮಯದಲ್ಲಿ ಉತ್ತಮ ಆರ್ಡರ್ ಪಡೆಯಬಹುದು. ಇದರಿಂದಾಗಿ ಅಪಾರ ಲಾಭ ಪ್ರಾಪ್ತಿಯಾಗಲಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಇನ್ನೊಂದೆಡೆ, ಧೈರ್ಯವು ಹೆಚ್ಚಾಗುತ್ತದೆ. ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ ಹೊಸ ಆದಾಯದ ಮೂಲಗಳನ್ನು ರೂಪುಗೊಳ್ಳಲಿವೆ.
ವೃಶ್ಚಿಕ ರಾಶಿ: ವಿಪರೀತ ರಾಜಯೋಗ ರಚನೆಯಿಂದಾಗಿ ವೃಶ್ಚಿಕ ರಾಶಿಯವರಿಗೆ ಉತ್ತಮ ಧನಲಾಭ, ಪ್ರಗತಿ ಸಾಧ್ಯತೆಗಳು ನಿರ್ಮಾಣಗೊಳ್ಳುತ್ತಿವೆ. ಏಕೆಂದರೆ ಮಂಗಳನು ನಿಮ್ಮ ಸಂಕ್ರಮಣ ಜಾತಕದಲ್ಲಿ ಷಷ್ಟಮ ಭಾವಕ್ಕೆ ಅಧಿಪತಿಯಾಗಿದ್ದು, ಅಷ್ಟಮ ಭಾವದಲ್ಲಿ ಕುಳಿತಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮಗೆ ಸಾಕಷ್ಟು ಹಣ ಬರಲಿದೆ. ದೀರ್ಘಕಾಲದಿಂದ ನೀವು ನಿರೀಕ್ಷಿಸುತ್ತಿದ್ದ ಮತ್ತು ನಿಮಗೆ ಬರಬೇಕಾದ ಹಣ ನಿಮಗೆ ಸಿಗಲಿದೆ. ಅಲ್ಲದೆ, ನೀವು ಇದ್ದಕ್ಕಿದ್ದಂತೆ ಧನಲಾಭ ಪಡೆಯಬಹುದು. ಆದರೆ ಗಾಯಗಳು ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆ ಕೂಡ ಇದೆ. ಈ ಕಾರಣದಿಂದಾಗಿ ನೀವು ಜಾಗರೂಕರಾಗಿರಬೇಕು. ಮತ್ತೊಂದೆಡೆ, ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಮೆಚ್ಚುಗೆಯನ್ನು ಪಡೆಯುತ್ತಾರೆ. ಆತ್ಮವಿಶ್ವಾಸ ಹೆಚ್ಚಲಿದೆ.
ಮೇಷ ರಾಶಿ: ಮೇಷ ರಾಶಿಯವರಿಗೆ ವಿಪರೀತ ರಾಜಯೋಗವು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಗೆ ಮಂಗಳ ಅಧಿಪತಿ ಮತ್ತು ಆತ ನಿಮ್ಮ ಜಾತಕದ ತೃತೀಯ ಭಾವದಲ್ಲಿ ಸಾಗಲಿದ್ದಾನೆ. ನಿಮ್ಮ ರಾಶಿಯ ತೃತೀಯ ಭಾವದಲ್ಲಿ ಆತ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಇದಲ್ಲದೆ ಈ ಭಾವದ ಮೇಲೆ ಕೇತುವಿನ ದೃಷ್ಟಿ ಕೂಡ ಇದೆ. ಹೀಗಾಗಿ ಈ ವಿಪರೀತ ರಾಜಯೋಗ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನೀವು ಹಠಾತ್ ಧನಲಾಭವನ್ನು ಪಡೆಯಬಹುದು. ಉದ್ಯಮಿಗಳು ನೀಡಿದ ಸಾಲದ ಹಣ ಅವರ ಬಳಿ ಮರಳಲಿದೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ಆದರೆ ಕಿರಿಯ ಸಹೋದರರು ನೋಯಿಸಬಹುದು. ನಿಮ್ಮ ಆರೋಗ್ಯಕ್ಕೂ ಅಪಾಯವಿದೆ.
ಮಕರ ರಾಶಿ: ವಿಪರೀತ ರಾಜಯೋಗದಿಂದ ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಏಕಾದಶ ಮತ್ತು ಚತುರ್ಥ ಭಾವಕ್ಕೆ ಅಧಿಪತಿ ಮಂಗಳ. ಆದ್ದರಿಂದ, ನಿಮ್ಮ ವ್ಯವಹಾರವು ಒಂದು ವೇಳೆ ರಿಯಲ್ ಎಸ್ಟೇಟ್, ಆಸ್ತಿ ಮತ್ತು ಭೂಮಿ-ಆಸ್ತಿಗೆ ಸಂಬಂಧಿಸಿದ್ದರೆ, ನಿಮಗೆ ಉತ್ತಮ ಲಾಭವನ್ನು ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಈ ರಾಜಯೋಗವು ದುಡಿಯುವ ಜನರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಸ್ಥಗಿತಗೊಂಡ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ. ಅಲ್ಲದೆ, ಈ ಸಮಯದಲ್ಲಿ ಅವಿವಾಹಿತರಿಗೆ ಸಂಬಂಧಕ್ಕಾಗಿ ಪ್ರಸ್ತಾಪಗಳು ಬರಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)