Ranveer Singh ಫ್ಯಾಷನ್‌ಗೂ ಪಕ್ಷಿಗಳಿಗೂ ಇದೆಯೇ ಲಿಂಕ್-ಇಲ್ಲಿದೆ ಪುರಾವೆ

               

ಬಾಲಿವುಡ್‌ನಲ್ಲಿ ಅವರ ಬಲವಾದ ನಟನೆ ಮತ್ತು ಅದ್ಭುತ ಫಿಟ್‌ನೆಸ್‌ನಿಂದಾಗಿ ಜನರ ಮನಸ್ಸನ್ನು ಗೆದ್ದಿರುವ ರಣವೀರ್ ಸಿಂಗ್, ಈ ಎಲ್ಲದರ ಜೊತೆಗೆ ಇನ್ನೂ ಒಂದು ವಿಷಯಕ್ಕೆ ಪ್ರಸಿದ್ಧರಾಗಿದ್ದಾರೆ. ರಣವೀರ್ ಸಿಂಗ್ ಅವರ ವಿಲಕ್ಷಣ ಫ್ಯಾಷನ್ಗಾಗಿ ಸಹ ಜನರು  ಅವರನ್ನು ಇಷ್ಟಪಡುತ್ತಾರೆ. ಆರಂಭದಲ್ಲಿ, ಅವರ ಅಸಂಗತ ಶೈಲಿಯಿಂದಾಗಿ ಜನರು ಟೀಕಾ ಪ್ರಹಾರ ನಡೆಸಿದರಾದರೂ ರಣವೀರ್ ಸಿಂಗ್ ತಮ್ಮ ಸಿಗ್ನೇಚರ್ ಶೈಲಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ರಣವೀರ್ ಸಿಂಗ್ ಅವರ ಈ ವಿಶಿಷ್ಟ ಶೈಲಿಯು ಪ್ಯಾರಿಸ್ನ ಫ್ಯಾಷನ್ ಬೀದಿಗಳಿಂದ ಬಂದಿದ್ದಲ್ಲ ಪ್ರಕೃತಿಯಿಂದ ಬಂದಿದೆ ಎಂದು ನಿಮಗೆ ತಿಳಿದಿದೆಯೇ? ಹೌದು! ರಣವೀರ್ ಅವರ ಡ್ರೆಸ್ಸಿಂಗ್ ಪಕ್ಷಿಗಳಿಂದ ಅನೇಕ ಬಾರಿ ಸ್ಫೂರ್ತಿ ಪಡೆದಿದೆ. ನಂಬಿಕೆ ಇಲ್ಲದಿದ್ದರೆ ಈ ಚಿತ್ರಗಳನ್ನು ನೋಡಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /8

ಕ್ಯಾಶುಯಲ್ ಔಟಿಂಗ್, ಪಾರ್ಟಿ ಲುಕ್ ಅಥವಾ ವಿಮಾನ ನಿಲ್ದಾಣದ ಲುಕ್ ಅದು ಯಾವುದೇ ಇರಲಿ ನಟ ರಣವೀರ್ ಸಿಂಗ್ ಅವರ ಶೈಲಿ ವಿಶಿಷ್ಟವಾಗಿರಲಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ವಿಶಿಷ್ಟ ಶೈಲಿಯ ರಹಸ್ಯವನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಲಾಗಿದೆ. (Photo courtesy: Twitter@Bhrigu KP)

2 /8

ವನ್ಯಜೀವಿ ಛಾಯಾಗ್ರಾಹಕ ಭ್ರೀಗು ಕೆ.ಪಿ.ರಣವೀರ್ ಅವರ ಈ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯೊಂದಿಗೆ ಹಂಚಿಕೊಂಡಿದ್ದಾರೆ. (Photo courtesy: Twitter@Bhrigu KP)

3 /8

ಇದು ಮಾತ್ರವಲ್ಲ, ಭ್ರೀಗು ಕೆಪಿ ಈ ಮೊದಲು ಕೂಡ ಇಂತಹ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ರಣವೀರ್ ಅವರ ಉಡುಪನ್ನು ಪಕ್ಷಿಗಳೊಂದಿಗೆ ಹೊಂದಿಸುವ ಮೂಲಕ ಅವರು ಅನೇಕ ಬಾರಿ ತಮ್ಮ ವಿಷಯವನ್ನು ಸಾಬೀತುಪಡಿಸಿದ್ದಾರೆ. (Photo courtesy: Twitter@Bhrigu KP) ಇದನ್ನೂ ಓದಿ -  Exclusive: ನೀವೂ Deepika Padukone ರೀತಿ Foodie ಆಗಿದ್ದರೆ, ಈ Diet ಅನುಸರಿಸಿ

4 /8

ಪ್ರತಿ ಬಾರಿಯೂ ರಣವೀರ್  ಸಿಂಗ್ (Ranveer Singh) ಉಡುಪಿನಲ್ಲಿ ಒಂದು ಹಕ್ಕಿಯ ಬಣ್ಣಗಳು ಮತ್ತು ಮಾದರಿಗಳನ್ನು ನಿಖರವಾಗಿ ನಕಲಿಸಲಾಗಿದೆ ಎಂದು ಇಲ್ಲಿ ನಾವು ಸ್ಪಷ್ಟವಾಗಿ ನೋಡಬಹುದು.(Photo courtesy: Twitter@Bhrigu KP)

5 /8

ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಪಕ್ಷಿಗಳೊಂದಿಗಿನ ರಣವೀರ್ ಸಿಂಗ್ ಅವರ ಚಿತ್ರಗಳನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. (Photo courtesy: Twitter@Bhrigu KP)

6 /8

ಭೀಗ್ರು ರಣವೀರ್ ಅವರ ಈ ವಿಶಿಷ್ಟ ಶೈಲಿಗಳನ್ನು ಪಕ್ಷಿಗಳೊಂದಿಗೆ ಹೋಲಿಸಿರುವುದನ್ನು ಕಂಡು ಹಲವರು ನಕ್ಕರೆ, ಕೆಲವರು ಅವರ ಹೋಲಿಕೆಯನ್ನು ಹಾಡಿ-ಹೊಗಳಿದ್ದಾರೆ. (Photo courtesy: Twitter@Bhrigu KP) ಇದನ್ನೂ ಓದಿ-  Rashmika Mandanna: 'RC 15' ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

7 /8

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ವಿವಾಹದ ಸಮಯದಲ್ಲಿ, ಜನರು ತಮ್ಮ ಅಸಂಗತ ಫ್ಯಾಷನ್‌ನಿಂದಾಗಿ ಅನೇಕ MEME ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡಿದ್ದಾರೆ. (Photo courtesy: Twitter@Bhrigu KP)  

8 /8

ನಿಜ ಜೀವನದಲ್ಲಿ ಮಾತ್ರವಲ್ಲ ಚಿತ್ರದಲ್ಲೂ ರಣವೀರ್ ಅವರ ಗೆಟಪ್ ಪಕ್ಷಿಯ ಲುಕ್ ನಲ್ಲಿ ಕಾಣಬಹುದಾಗಿದೆ. (Photo courtesy: Twitter@Bhrigu KP)