Actor Darshan: ನಟ ದರ್ಶನ್ ಬಳಿ ಇದೆ 2 ಪಿಸ್ತೂಲ್‍ಗಳು!

Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ನಟ ದರ್ಶನ್‌ ಹಾಗೂ ಗ್ಯಾಂಗ್‌ ವಿಚಾರಣಾಧೀನ ಖೈದಿಗಳಾಗಿದ್ದಾರೆ.. ತನಿಖೆಯಲ್ಲಿ ಸಾಕಷ್ಟು ಶಾಕಿಂಗ್‌ ವಿಚಾರಗಳು ಬಹಿರಂಗವಾಗುತ್ತಿದ್ದು, ಇದೀಗ ನಟ ದರ್ಶನ್‌ ಹಾಗೂ ಪ್ರದೋಶ್‌ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ.. 

1 /5

ನಟ ದರ್ಶನ್ ಮತ್ತು ಪ್ರದೋಶ್ ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದ್ದು, ಪ್ರದೋಷ್ ಮತ್ತು ದರ್ಶನ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇದೆ‌ ಎನ್ನುವ ವಿಚಾರ ಬಹಿರಂಗವಾಗಿದೆ..   

2 /5

ಬೆಂಗಳೂರು ನಗರದ್ಯಾಂತ 7830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ.. ಈ ಪೈಕಿ ದರ್ಶನ್ ಮತ್ತು ಪ್ರದೋಶ್ ಸೇರಿ 277 ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು..   

3 /5

ನಿವೃತ್ತ ನ್ಯಾಯಾಧೀಶರು, ಐಎಎಸ್ , ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಗಳು, ಬ್ಯುಜಿನೇಸ್ ಮೆನ್ ಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿ ಗಳಿಗೆ ಮಾತ್ರ ವಿನಾಯಿತಿ ನೀಡಬಹುದು.. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಅಯಾ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಶಕ್ಕೆ ಪಡೆಯಬೇಕು ಎಂದು ಕಳೆದ ಮಾರ್ಚ್ 27 ರಂದು ವಿನಾಯಿತಿ ನೀಡಿ ಆದೇಶ ನೀಡಿದ್ದ ಕಮಿಷನರ್ ದಯಾನಂದ್..   

4 /5

ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರ ಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು.. ಆದರೆ ನಟ ದರ್ಶನ್ ಮತ್ತು ಪ್ರದೋಶ್ ಪಿಸ್ತೂಲ್ ವಾಪಸ್ ಮಾಡದೇ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದಿದ್ದಾರೆ..   

5 /5

ಸದ್ಯ ಪ್ರದೋಷ್ ಇರುವ ಗಿರಿನಗರ ಠಾಣೆ ಹಾಗೂ ದರ್ಶನ್ ಬಂಧಿಯಾಗಿರುವ ಆರ್.ಆರ್.ನಗರ ಠಾಣಾಧಿಕಾರಿಗಳಿಗೆ ಶಸ್ತ್ರ ವಶಪಡಿಸಿಕೊಳ್ಳಲಿಕ್ಕೆ ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ..