Republic Day 2021: ರಾಜಪಥವಲ್ಲ..! ಇದು ಭಾರತದ ಗಗನ ಪಥ !

72 ನೇ ಗಣರಾಜ್ಯೋತ್ಸವ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು. ರಾಜಪಥದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಕಳೆ ಕಟ್ಟಿತ್ತು.

Republic Day 2021 : 72 ನೇ ಗಣರಾಜ್ಯೋತ್ಸವ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು. ರಾಜಪಥದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಕಳೆ ಕಟ್ಟಿತ್ತು. ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಮನಸೂರೆಗೊಂಡವು. ಕರ್ನಾಟಕದಿಂದ ವಿಜಯನಗರ ಸಾಮ್ರಾಜ್ಯದ ವೈಭವವನ್ನು ತೋರಿಸುವ ಸ್ತಬ್ದಚಿತ್ರ ಅನಾವರಣಗೊಂಡಿತ್ತು. ಇದರೊಂದಿಗೆ ಭಾರದತದ ಮಿಲಿಟರಿ ಶಕ್ತಿಯನ್ನು ಕೂಡಾ ಪ್ರದರ್ಶಿಸಲಾಯಿತು. 

1 /5

ರಾಜಪಥದಲ್ಲಿ ಭಾರತದ ಶಕ್ತಿ ಸಾಮರ್ಥ್ಯವನ್ನು ಅನಾವರಣಗೊಳಿಸುವ ಹಲವು ಟ್ಯಾಬ್ಲೋಗಳು, ಯುದ್ದಟ್ಯಾಂಕ್ ಗಳು, ಸೇನಾ ತುಕಡಿಗಳು ಸಾಗಿದವು.  ಬ್ರಹ್ಮೋಸ್ ಸೇರಿದಂತೆ ಹಲವು ಯುದ್ದಾಸ್ತ್ರಗಳ ಪರಿಚಯವಾಯಿತು.  

2 /5

 ನಭಂ ಸ್ಪರ್ಶಂ ದೀಪ್ತಂ..! ಇದು ವಾಯುಪಡೆಯ ಧ್ಯೇಯವಾಕ್ಯ. ಇದನ್ನು ಕಂಗೊಳಿಸುವಂತೆ ಹಾರಿದ್ದು ಈ ಸಿಂಗಲ್ ರಾಫೇಲ್.  ಪ್ರತಿಗಂಟೆಗೆ 900 ಕಿ.ಮೀ. ಸ್ಪೀಡ್ ನಲ್ಲಿ ನೇರ ಲಂಬಕೋನದಲ್ಲಿ ನಭಕ್ಕೆ ಚಿಮ್ಮಿ, ಅಚ್ಚರಿಯ ಸ್ಟಂಟ್ ಗಳನ್ನೂ ಮಾಡಿತು. ಸಿಂಗಲ್ ರಾಫೇಲ್ ತಾಕತ್ತಿನ ಪ್ರದರ್ಶನದೊಂದಿಗೆ ರಾಜಪಥ ಪರೇಡ್ ಸಮಾಪನವಾಯಿತು.   

3 /5

ಇದು ತ್ರಿನೇತ್ರ ಯುದ್ದ ವ್ಯೂಹ. ಅಂದರೆ ತ್ರಿನೇತ್ರ ಫಾರ್ಮೇಶನ್.  ಮೂರು ಸುಖೋಯ್ Su-30MKI ಯುದ್ಧ ವಿಮಾನಗಳು ಶಬ್ದಾತೀತ ವೇಗದಲ್ಲಿ ಚಿಮ್ಮಿ ಆಕಾಶದಲ್ಲಿ ತ್ರಿಶೂಲ, ಅಂದರೆ ಮೂರು ಮಾರ್ಗಗಳ ರಚನೆ ಮಾಡಿ ಮರೆಯಾದವು. 

4 /5

ಇದು ಏಕಲವ್ಯ ವ್ಯೂಹ..!ಅಂದರೆ ಏಕಲವ್ಯ ಫಾರ್ಮೇಶನ್. ಒಂದು ರಾಫೇಲ್ ಫೈಟರ್,  ಎರಡು ಜಗ್ವಾರ್ ಸ್ಟ್ರೈಕ್ ಫೈಟರ್, ಎರಡು ಮಿಗ್ 29 ಏರ್ ಸೂಪಿರಿಯೋರಿಟಿ ಫೈಟರ್ ಸೇರಿ ಏಕಲವ್ಯ ವ್ಯೂಹ ರಚಿಸಿದ್ದವು.  ರಾಜಪಥದಿಂದ ಕೇವಲ 300 ಮೀಟರ್ ಎತ್ತರದಲ್ಲಿ ಪ್ರತಿಗಂಟೆಗೆ 780 ಕಿ.ಮಿ. ವೇಗದಲ್ಲಿ ಈ ಯುದ್ಧವಿಮಾನ ವ್ಯೂಹಗಳು ಸಾಗಿದ್ದು ವಿಶೇಷ. 

5 /5

ರುದ್ರ ವ್ಯೂಹ, ಅಂದರೆ ರುದ್ರ ಫಾರ್ಮೇಶನ್. ಇದರಲ್ಲಿ ಕಾಣಿಸಿಕೊಂಡಿದ್ದು ಅತ್ಯಾಧುನಿಕ ಯುದ್ಧ ವಿಮಾನವಲ್ಲ. ಡಕೋಟಾಸ್ ಎಂಬ ಹಳೆಯ ಸೂಪರ್ ಫೈಟರ್.  ಇದಕ್ಕೆ ಸಾಥ್ ಕೊಟ್ಟಿದ್ದು ಎರಡು Mi-17 IV ಹೆಲಿಕಾಪ್ಟರ್ಸ್ಸ.  ಡಕೋಟಾ ಫೈಟರ್ಸ್ ಗೆ ಇದೊಂದು ರೀತಿಯ ವಿಶಿಷ್ಠ ಗೌರವ. ಡಕೋಟಾ ಫೈಟರ್ಸ್ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ನಾವಿಂದು ಹೇಳಲೇ ಬೇಕು. 1947ರ ಭಾರತ ಪಾಕ್ ಯುದ್ಧದಲ್ಲಿ ಈ ಡಕೋಟಾ ಸಲ್ಲಿಸಿದ ಸೇವೆ ಗಣನೀಯ. ಇನ್ನೇನು ಭಾರತಕ್ಕೆ ಹಿನ್ನಡೆಯಾಗುತ್ತೆ ಅನ್ನುವಾಗ ಡಕೋಟಾ ಫೈಟರ್ ದಾಳಿಗಿಳಿದಿತ್ತು. ಶತ್ರು ಸೈನ್ಯ ಕಾಶ್ಮೀರ ಕಣಿವೆಯಿಂದ  ಓಡಿಹೋಗಿತ್ತು. 1971ರ ಬಾಂಗ್ಲಾ ಯುದ್ಧದಲ್ಲೂ ಡಕೋಟ ಫೈಟರ್ಸ್ ವ್ಯೂಹಕ್ಕೆ ಪಾಕಿಸ್ತಾನ ನಿರುತ್ತರವಾಗಿಬಿಟ್ಟಿತ್ತು.