ಸುಶಾಂತ್ ಸಿಂಗ್ ಪುಣ್ಯಸ್ಮರಣೆ: “Miss you every day…” ರಿಯಾ ಚಕ್ರವರ್ತಿ ಭಾವುಕ ಪೋಸ್ಟ್‌

Sushant Singh Rajput death anniversary: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪುತ್​ ಸಾವನ್ನಪ್ಪಿ ಇಂದಿಗೆ ಎರಡು ವರ್ಷ. 

Sushant Singh Rajput death anniversary: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪುತ್ ಎರಡನೇ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ರಿಯಾ ಚಕ್ರವರ್ತಿ, ಸುಶಾಂತ್​ ಸಿಂಗ್​ರನ್ನ ನೆನದು ಇನ್​ಸ್ಟಾಗ್ರಾಮ್​ನಲ್ಲಿ ಭಾವುಕ ಪೋಸ್ಟ್​ ಮಾಡಿದ್ದಾರೆ. ಅಲ್ಲದೇ  ಅವರ ಸಹೋದರಿ ಶ್ವೇತಾ ಸಹ ತಮ್ಮನನ್ನು ನೆನೆದು ಭಾವುಕರಾಗಿದ್ದಾರೆ. ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಶ್ವೇತಾ ಸಹೋದರ ಸುಶಾಂತ್‌ನನ್ನು ಸ್ಮರಿಸಿದ್ದಾರೆ.

1 /5

ನೀವು ನಮ್ಮೆಲ್ಲರನ್ನ ಅಗಲಿ ಎರಡು ವರ್ಷಗಳಾಗಿವೆ. ಜೀವನದ ನಿಮ್ಮ ಮೌಲ್ಯಗಳಿಂದ ನೀವು ಅಮರರಾಗಿದ್ದೀರಿ. ನಿಮ್ಮ ಬದುಕಿನ ಆದರ್ಶಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಬೇರೋಬ್ಬರ ಮುಖದಲ್ಲಿ ನಗು ತರಲು ನಿಸ್ವಾರ್ಥದಿಂದ ಕೆಲಸ ಮಾಡೋಣ ಎಂದು ಸುಶಾಂತ್‌ ಸಹೋದರಿ ಶ್ವೇತಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

2 /5

ಸುಶಾಂತ್ ಜೊತೆ ಇರುವ ಫೋಟೋಗಳನ್ನ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ರಿಯಾ ಚಕ್ರವರ್ತಿ. ರಿಯಾ ಚಕ್ರವರ್ತಿ ತಮ್ಮ ಮಾಜಿ ಸ್ನೇಹಿತನನ್ನ ನೆನದು ಭಾವುಕ ಪೋಸ್ಟ್‌ ಹಾಕಿದ್ದಾರೆ.

3 /5

ಫೋಟೋಗಳ ಜೊತೆ “Miss you every day…” ಎಂದು ರಿಯಾ ಬರೆದುಕೊಂಡಿದ್ದಾರೆ.

4 /5

2020 ಜೂನ್​​ನಲ್ಲಿ ಮುಂಬೈನ ಬಾಂದ್ರಾ ಅಪಾರ್ಟ್​​ಮೆಂಟ್​ನಲ್ಲಿ 34 ವರ್ಷದ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ರಿಯಾ ಚಕ್ರವರ್ತಿಯಿಂದ ದೂರವಾಗಿ ಒಂದು ತಿಂಗಳ ಅವಧಿಯಲ್ಲಿ ಸುಶಾಂತ್​ ಸಿಂಗ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. 

5 /5

ಪ್ರಕರಣದ ವಿಚಾರಣೆಯನ್ನ ಕೈಗೆತ್ತಿಕೊಂಡಿದ್ದ ಸಿಬಿಐ, ರಿಯಾ ಚರ್ಕವರ್ತಿ ಹಾಗೂ ಅವರ ಕುಟುಂಬಸ್ಥರನ್ನ ಬಂಧಿಸಿ ವಿಚಾರಣೆ ನಡೆಸಿತ್ತು.