Sexual health problems: ನೀವು ಹಾಸಿಗೆಯಲ್ಲಿದ್ದಾಗ, ಲೈಂಗಿಕತೆ ಹೊಂದುವಾಗ ನಿಮ್ಮ ಎಲ್ಲಾ ರೀತಿಯ ವರ್ತನೆ ಸರಿಯಾಗಿರಬೇಕು. ಆಗ ಮಾತ್ರವೇ ಲೈಂಗಿಕ ಕ್ರಿಯೆ ಅರ್ಥಪೂರ್ಣವಾಗಿ ಖುಷಿ ನೀಡಲು ಸಾಧ್ಯ. ಮಾನಸಿಕವಾಗಿ ಸಿದ್ಧರಿಲ್ಲದೆ ಬಲವಂತವಾಗಿ ತೊಡಗಿಕೊಳ್ಳುವ ಲೈಂಗಿಕ ಕ್ರಿಯೆ ಶಿಕ್ಷೆಯಂತೆ ಭಾಸವಾಗುತ್ತದೆ.
Sexual health: ಲೈಂಗಿಕ ಕ್ರಿಯೆ ಎನ್ನುವುದು ಸುಖದ ಪರಾಕಾಷ್ಠೆ ನೀಡುತ್ತದೆ. ವಿವಾಹಿತರು ಪ್ರತಿನಿತ್ಯ ಅಥವಾ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು. ಲೈಂಗಿಕ ಕ್ರಿಯೆಯ ಬಗ್ಗೆ ಪ್ರತಿಯೊಬ್ಬರಿಗೂ ಎಲ್ಲಾ ವಿಚಾರಗಳು ತಿಳಿದಿರುವುದಿಲ್ಲ. ಇದು ಅನುಭವದಿಂದ ಮಾತ್ರ ಬರುತ್ತದೆ. ನೀವು ಅನುಭವಿಯಾಗಿದ್ದರೂ ಅಥವಾ ಮೊದಲ ಸಲ ಲೈಂಗಿಕ ಕ್ರಿಯೆ ನಡೆಸುತ್ತಿದ್ದರೂ ಕೆಲವೊಂದು ವಿಚಾರಗಳನ್ನು ನೀವು ತುಂಬಾ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ನೀವು ಹಾಸಿಗೆಯಲ್ಲಿದ್ದಾಗ, ಲೈಂಗಿಕತೆ ಹೊಂದುವಾಗ ನಿಮ್ಮ ಎಲ್ಲಾ ರೀತಿಯ ವರ್ತನೆ ಸರಿಯಾಗಿರಬೇಕು. ಆಗ ಮಾತ್ರವೇ ಲೈಂಗಿಕ ಕ್ರಿಯೆ ಅರ್ಥಪೂರ್ಣವಾಗಿ ಖುಷಿ ನೀಡಲು ಸಾಧ್ಯ. ಮಾನಸಿಕವಾಗಿ ಸಿದ್ಧರಿಲ್ಲದೆ ಬಲವಂತವಾಗಿ ತೊಡಗಿಕೊಳ್ಳುವ ಲೈಂಗಿಕ ಕ್ರಿಯೆ ಶಿಕ್ಷೆಯಂತೆ ಭಾಸವಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಗ ನೀವು ಕೆಲವು ತಪ್ಪುಗಳನ್ನು ಮಾಡಲೇಬಾರದು. ಅವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಹಾಸಿಗೆಯಲ್ಲಿ ನೀವು ಮಾಡುತ್ತಿರುವ ಚಲನೆಗಳು ಸರಿಯಾಗಿವೆ ಮತ್ತು ಪರಿಪೂರ್ಣವೆಂದು ಊಹಿಸಬೇಡಿ. ನಿಮ್ಮ ಸಂಗಾತಿಗೆ ಏನು ಬೇಕು, ಏನು ಮಾಡಿದರೆ ಇಷ್ಟ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಅದು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ಒಂದೇ ರೀತಿ ಇರುವುದಿಲ್ಲ. ನೀವು ನಿರಾಶೆ, ಸೋಲು, ದುಃಖ ಅನುಭವಿಸಿರಬಹುದು. ಆದರೆ ಈ ಹತಾಶೆಯನ್ನು ಹಾಸಿಗೆಯವರೆಗೆ ತರಬೇಡಿ. ನೀವು ಮಲಗಲು ಬಂದಾಗ ಎಲ್ಲಾ ನಕಾರಾತ್ಮಕತೆಯನ್ನು ತೊಡೆದುಹಾಕಬೇಕು. ನಿಮ್ಮ ಹಾಸಿಗೆ ಧನಾತ್ಮಕ ಸ್ಥಳವಾಗಿರಬೇಕು ಮತ್ತು ಅದು ನಿಮ್ಮಿಬ್ಬರಿಗೂ ಮಾತ್ರ. ನೀವು ಅಸಮಾಧಾನಗೊಂಡಿದ್ದರೆ ಸಂಗಾತಿಯೊಂದಿಗೆ ಅದರ ಬಗ್ಗೆ ಮಾತನಾಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆತ ನಂತರವಷ್ಟೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಉತ್ತಮ.
ದಂಪತಿಗಳಲ್ಲಿ ಇದು ತುಂಬಾ ಕಾಮನ್. ಇಬ್ಬರಲ್ಲಿ ಯಾರಾದರೂ ಕೆಲವೊಮ್ಮೆ ತಮ್ಮ ಸಂಗಾತಿಯು ಹಾಸಿಗೆಯಲ್ಲಿ ಏನು ಮಾಡುತ್ತಿದ್ದಾರೋ ಅದು ಸರಿ ಅನ್ನುತ್ತಾರೆ. ಅವರು ಮಾಡುವ ಮನಸ್ಥಿತಿಯಲ್ಲಿ ಇಲ್ಲದಿದ್ದರೂ, ಅದನ್ನು ಮಾಡುತ್ತಾರೆ. ಇದು ಅವರನ್ನು ಪ್ರಚೋದಿಸುತ್ತದೆ ಮತ್ತು ಅಂತಿಮವಾಗಿ ಅದು ಜಗಳಕ್ಕೆ ಕಾರಣವಾಗಬಹುದು. ಮನಸ್ಸು ಒಪ್ಪಿಗೆಯ ಸ್ಥಿತಿಯಲ್ಲಿದ್ದಾಗ ಮಾತ್ರ ಸಂಭೋದಲ್ಲಿ ತೊಡಗಿಸಿಕೊಳ್ಳಬೇಕು.
ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ. ಆದರೆ ಪ್ರತಿ ದೇಹದ ರೂಪವೂ ತನ್ನದೇ ರೀತಿಯಲ್ಲಿ ಸುಂದರವಾಗಿರುತ್ತದೆ. ಸಂಗಾತಿ ತೆಳ್ಳಗೆ, ದಪ್ಪ, ಕುಳ್ಳಗೆ, ಕಪ್ಪು ಇರುವ ಬಗ್ಗೆ ಹಾಸಿಗೆಯಲ್ಲಿರುವಾಗ ಟೀಕಿಸಬೇಡಿ. ಅವರ ದೇಹದಲ್ಲಿರುವ ಗುರುತುಗಳು, ಮಚ್ಚೆಗಳ ಬಗ್ಗೆ ಹಂಗಿಸಬೇಡಿ. ಇದು ನಿಮ್ಮ ಸಂಗಾತಿಯ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಬೆತ್ತಲೆಯಾಗಿದ್ದಾಗ ನಾವು ಹೆಚ್ಚು ದುರ್ಬಲರಾಗಿರುತ್ತೇವೆ.
ಬೆಡ್‌ನಲ್ಲಿದ್ದಾಗ ಯಾವಾಗಲೂ ಖುಷಿಯ ವಿಚಾರವನ್ನಷ್ಟೇ ಮಾತನಾಡಬೇಕು. ಸಂಗಾತಿಯ ಜೊತೆ ಖುಷಿಯಾಗಿ ಕಳೆದಿರುವ ಹಿಂದಿನ ಕ್ಷಣಗಳನ್ನು ನೆನಪಿಸಿ ಅವರನ್ನು ರೋಮಾಂಚನಗೊಳಿಸಬೇಕು. ಇದರ ಬದಲು ಅವರಿಗೆ ಇಷ್ಟವಿಲ್ಲದ ವಿಚಾರಗಳ ಬಗ್ಗೆ ಮಾತನಾಡಲು ಹೋಗಬಾರದು. ಮಾಜಿ ಗರ್ಲ್‌ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಬಗ್ಗೆಯಂತೂ ಅಪ್ಪಿ ತಪ್ಪಿಯೂ ಮಾತನಾಡಬಾರದು. ಇದು ನಿಮ್ಮ ರೊಮ್ಯಾಂಟಿಕ್ ಕ್ಷಣಗಳನ್ನು ಹಾಳು ಮಾಡುತ್ತದೆ.