Rules For Worshiping Shani Dev: ಶನಿ ದೇವರನ್ನು ಒಲಿಸಿಕೊಳ್ಳಲು ಶನಿಯ ಪೂಜೆ, ಮಂತ್ರ ಹೇಳುವುದು, ಕಾಗೆಗೆ ಆಹಾರ ನೀಡುವುದು, ಎಳ್ಳೆಣ್ಣೆ ನೀಡುವುದು ಮತ್ತು ಆಂಜನೇಯ ಸ್ವಾಮಿಯ ಪೂಜೆ ಮಾಡಬೇಕು. ಹೀಗೆ ಮಾಡಿದರೆ ನೀವು ತಕ್ಕಮಟ್ಟಿಗೆ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.
ಶನಿವಾರ ಬಂತೆಂದರೆ ಶನಿದೇವನ ವಾರ ಎಂದರ್ಥ. ನೀವು ಏನಾದರೂ ಶನಿ ಗ್ರಹದ ವಕ್ರದೃಷ್ಟಿಗೆ ಒಳಗಾಗಿದ್ದರೆ ಈ ದಿನ ಶನಿದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ ಪೂಜೆ ಮಾಡುವುದರಿಂದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಕೆಲವರು ಶನಿಯ ವಕ್ರದೃಷ್ಟಿಯಿಂದ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಶನಿಕಾಟದಿಂದ ಅವರಿಗೆ ಯಾವುದೇ ರೀತಿಯ ಯಶಸ್ಸು ದೊರೆಯುವುದಿಲ್ಲ, ಪ್ರತಿಯೊಂದರಲ್ಲಿಯೂ ಅವರಿಗೆ ಸೋಲು ಇರುತ್ತದೆ.
ಶನಿದೇವನ ಅವಗಣನೆಗೆ ಒಳಗಾದರೆ ಜೀವನದಲ್ಲಿ ಕೈ ಹಿಡಿದ ಕೆಲಸಗಳಲ್ಲಿ ಸೋಲು, ವೃತ್ತಿ ಜೀವನದಲ್ಲಿ ಹಿನ್ನಡೆ, ನಿರುದ್ಯೋಗ ಸಮಸ್ಯೆ, ಸಮಾಜದಲ್ಲಿ ಅವಮಾನ, ಆರ್ಥಿಕವಾಗಿ ಹಿನ್ನಡೆಯುಂಟಾಗುತ್ತದೆ. ಶನಿದೇವನ ಕೃಪಾಕಟಾಕ್ಷ ದೊರೆತರೆ ಈ ಎಲ್ಲಾ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ.
ಶನಿ ದೇವರನ್ನು ಒಲಿಸಿಕೊಳ್ಳಲು ಶನಿಯ ಪೂಜೆ, ಮಂತ್ರ ಹೇಳುವುದು, ಕಾಗೆಗೆ ಆಹಾರ ನೀಡುವುದು, ಎಳ್ಳೆಣ್ಣೆ ನೀಡುವುದು ಮತ್ತು ಆಂಜನೇಯ ಸ್ವಾಮಿಯ ಪೂಜೆ ಮಾಡಬೇಕು. ಹೀಗೆ ಮಾಡಿದರೆ ನೀವು ತಕ್ಕಮಟ್ಟಿಗೆ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.
ಕರ್ಮಕಾರಕನಾದ ಶನಿದೇವರು ನಮ್ಮ ಕರ್ಮ ಫಲಗಳಿಗೆ ಅನುಸಾರವಾಗಿ ಒಳಿತು-ಕೆಡುಕು ಮಾಡುತ್ತಾನೆ. ಶನಿ ದೇವನ ಕೆಡುಕಿನಿಂದ ಪಾರಾಗಬೇಕಾದರೆ ಶನಿವಾರಗಳಂದು ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವಾಗ ದೀಪಕ್ಕೆ ಒಂದು ಲವಂಗವನ್ನೂ ಹಾಕಬೇಕು. ವಾಸ್ತು ಪ್ರಕಾರ ಹೀಗೆ ಮಾಡುವುದರಿಂದ ಶನಿಯಿಂದ ಆಗಬಹುದಾದ ತೊಂದರೆಗಳು ನಿವಾರಣೆಯಾಗುತ್ತದೆ. ನಮ್ಮ ಆರ್ಥಿಕ ಸಂಕಷ್ಟಗಳೂ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.