ಸಾಡೇಸಾತಿಯಲ್ಲೂ ಈ ರಾಶಿಯವರನ್ನು ಕಾಪಾಡುತ್ತಾನೆ ಶನಿದೇವ

Shani Udaya  Effect 2023 : ಶನಿಯು ಉದಯಿಸುವುದರೊಂದಿಗೆ ಧನ ರಾಜಯೋಗ ರೂಪುಗೊಂಡಿದೆ. ಇದರೊಂದಿಗೆ ಕೆಲವು ರಾಶಿಯವರ ಉದ್ಯೋಗ-ವ್ಯವಹಾರದಲ್ಲಿ ಉತ್ತಮ  ಯಶಸ್ಸು ಸಿಗಲಿದೆ.

ಬೆಂಗಳೂರು : ಜನವರಿ 30, 2023 ರಂದು ಅಸ್ತವಾಗಿದ್ದ ಶನಿ ದೇವ  ಮಾರ್ಚ್ 6 ರಂದು ಮತ್ತೆ ಉದಯಿಸಿದ್ದಾರೆ. ಅಸ್ತವಾಗಿದ್ದ ಕಾಲದಲ್ಲಿ ಕೆಲವೊಂದು ರಾಶಿಯವರ ಪಾಲಿಗೆ ಕೆಟ್ಟ ದಿನಗಳು ನಡೆಯುತ್ತಿತ್ತು, ಆದರೆ ಶನಿ ದೇವ ಮತ್ತೆ ಉದಯವಾಗುವುದರೊಂದಿಗೆ ಈ ರಾಶಿಯವರ ಕಷ್ಟಗಳನ್ನು ರುವ ಶನಿ, ಕೆಲವೊಂದು ರಾಶಿಯವರ ಜೀವನದ   ಕಷ್ಟವನ್ನು ಕಳೆಯುತ್ತಾನೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /4

ಅಸ್ತವಾಗಿದ್ದ ಶನಿಯು ಉದಯದೊಂದಿಗೆ ಧನ ರಾಜಯೋಗ ರೂಪುಗೊಂಡಿದೆ. ಇದರೊಂದಿಗೆ ಕೆಲವು ರಾಶಿಯವರ ಅವಸ್ಥೆಯಲ್ಲಿ ಶನಿದೆಸೆ ನಡೆಯುತ್ತಿದ್ದರೂ ಕೆಲವು ರಾಶಿಯವರನ್ನು ಕೈ ಬಿಡದೇ ಕಾಯುತ್ತಾನೆ ಶನಿ ಮಹಾತ್ಮ. ಈ  ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಉತ್ತಮ ಯಶಸ್ಸು ಗಳಿಸಲಿದ್ದಾರೆ. 

2 /4

ವೃಷಭ ರಾಶಿ : ಶನಿಯ ಉದಯವು ವೃಷಭ ರಾಶಿಯವರ ವೃತ್ತಿ ಜೀವನದಲ್ಲಿನ ಬಹು ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಈ ರಾಶಿಯವರು ಉತ್ತಮ ವೇತನ ಪಡೆಯುವುದರೊಂದಿಗೆ ಹೊಸ ಉದ್ಯೋಗದ ಆಫರ್ ಕೂಡಾ ಸಿಗಲಿದೆ. ಪ್ರಸ್ತುತ ಕೆಲಸದಲ್ಲಿ ಇರುವವರಿಗೆ ದೊಡ್ಡ ಮಟ್ಟದ ಬಡ್ತಿ ಸಿಕ್ಕಿ ವೇತನದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರದಲ್ಲಿಯೂ ಲಾಭವಾಗಲಿದೆ. ಹೊಸ ಕೆಲಸ ಆರಂಭಿಸುವುದಕ್ಕೂ ಇದು ಸೂಕ್ತ ಸಮಯ. 

3 /4

ಸಿಂಹ ರಾಶಿ : ಶನಿ ಉದಯವಾಗುವುದರೊಂದಿಗೆ ಈ ರಾಶಿಯವರ ಅದೃಷ್ಟ ಬದಲಾಗಿದೆ. ಅನಿರೀಕ್ಷಿತ ಮೂಲದಿಂದ ಹಣ ಪಡೆಯುವುದು ಈ ರಾಶಿಯವರಿಗೆ ಸಾಧ್ಯವಾಗುತ್ತದೆ. ಸಾಲ ಕೊಟ್ಟ ಹಣ ಮರಳಿ ಕೈ ಸೇರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಣಡ ಕೊರತೆ ಎದುರಾಗದಂತೆ ಕಾಯುತ್ತಾನೆ ಶನಿ ಮಹಾತ್ಮ. 

4 /4

ಕುಂಭ ರಾಶಿ : ಕುಂಭ ರಾಶಿಯಲ್ಲಿ ಶನಿಯು ಉದಯಿಸುವುದರೊಂದಿಗೆ ಧನ ರಾಜಯೋಗ ರೂಪುಗೊಂಡಿದೆ. ಇದು ಕುಂಭ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಶನಿ ಉದಯವು ಕುಂಭ ರಾಶಿಯವರ ಜಾತಕದಲ್ಲಿ ಶಶರಾಜಯೋಗ ಕೂಡಾ ನಿರ್ಮಿಸಿದೆ. ಈ ಎರಡೂ ಯೋಗಗಳು ಕುಂಭ ರಾಶಿಯವರಿಗೆ ಪ್ರತಿ ಹಂತದಲ್ಲಿಯೂ ಲಾಭ ನೀಡುತ್ತದೆ. ಈ ಎರಡು ಯೋಗಗಳ ಕಾರಣದಿಂದಾಗಿ ಶನಿಯ ಸಾಡೇಸಾತಿಯ ಕಾರಣದಿಂದ ಎದುರಾಗುವ ಕಷ್ಟಗಳು ಕೂಡಾ ಪರಿಹಾರವಾಗಲಿವೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

You May Like

Sponsored by Taboola