Shani Uday: ಶನಿ ಉದಯದಿಂದ 2 ರಾಶಿಯವರಿಗೆ ಬಂಪರ್, 3 ರಾಶಿಯವರಿಗೆ ಎಚ್ಚರಿಕೆ ಅಗತ್ಯ

Shani Uday: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನನ್ನು ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಪ್ರಸ್ತುತ ತನ್ನದೇ ಆದ ಕುಂಭ ರಾಶಿಚಕ್ರದಲ್ಲಿ ಅಸ್ತಮಿಸಿರುವ ಶನಿದೇವನು, ಶೀಘ್ರದಲ್ಲೇ ಉದಯಿಸಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ಮಹಾತ್ಮನನ್ನು ಪ್ರತಿಯೊಬ್ಬರಿಗೂ ಅವರವರ ಕರ್ಮಗಳಿಗೆ ಫಲ ನೀಡುವ ಕರ್ಮಫಲದಾತ ಎಂದು ಹೇಳಲಾಗುತ್ತದೆ. 

2 /8

ಪ್ರಸ್ತುತ, ತನ್ನದೇ ಆದ ಕುಂಭ ರಾಶಿಯಲ್ಲಿ ಅಸ್ತಮ ಸ್ಥಿತಿಯಲ್ಲಿರುವ ಶನಿದೇವನು ಮಾರ್ಚ್ 18, 2024ರಂದು ಉದಯಿಸಲಿದ್ದಾನೆ.   

3 /8

ಶನಿ ಉದಯದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಕುಂಭ ರಾಶಿಯಲ್ಲಿ ಶನಿ ಉದಯವು ಎರಡು ರಾಶಿಯವರಿಗೆ ಭಾರೀ ಪ್ರಯೋಜನಗಳನ್ನು ನೀಡಿದರೆ, ಮೂರು ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾರಿಗೆ ಬಂಪರ್, ಯಾರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ... 

4 /8

ಮಿಥುನ ರಾಶಿ:  ಶನಿ ಉದಯವು ಮಿಥುನ ರಾಶಿಯ ಜನರಿಗೆ ಲಾಭದಾಯಕವೆಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಎದುರಾಗಿದ್ದ ಸಮಸ್ಯೆಗಳು ನಿವಾರಣೆಯಾಗಿ ಅವು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಇದರಿಂದಾಗಿ ಹಣಕಾಸಿನ ಸ್ಥೀಟ್ ಸುಧಾರಿಸಲಿದ್ದು, ಮನೆಯಲ್ಲಿ ಸಂತೋಷ-ಸಮೃದ್ಧಿ ನೆಲೆಸಲಿದೆ ಎಂದು ಹೇಳಲಾಗುತ್ತಿದೆ. 

5 /8

ತುಲಾ ರಾಶಿ:  ಶನಿ ಉದಯವು ತುಲಾ ರಾಶಿಯ ಜನರಿಗೂ ಒಳ್ಳೆಯ ಫಲಗಳನ್ನು ನೀಡಲಿದೆ. ಈ ವೇಳೆ ಉದ್ಯೋಗ ರಂಗದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ನಿಮ್ಮ ಪ್ರತಿ ಕೆಲಸದಲ್ಲೂ ಶನಿಯ ಆಶೀರ್ವಾದವಿರಲಿದ್ದು ಅವು ಯಶಸ್ವಿಯಾಗಳಿವೆ. ವಿದೇಶ ಪ್ರವಾಸ, ವಿದೇಶ ವ್ಯವಹಾರದಿಂದ ಬಂಪರ್ ಲಾಭವಾಗಲಿದೆ. 

6 /8

ಮೇಷ ರಾಶಿ:  ಶನಿ ಉದಯವು ಮೇಷ ರಾಶಿಯ ಜನರಿಗೆ ಒಳ್ಳೆಯ ಫಲಗಳನ್ನು ನೀಡುವುದಿಲ್ಲ. ಈ ಸಮಯದಲ್ಲಿ ನಿಮ್ಮ ಮನಸ್ಸು ವಿಚಲಿತವಾಗುವ ಸಾಧ್ಯತೆ ಇದ್ದು, ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಬಾಧಿಸಬಹುದು. ಅಪಘಾತ ಸಾಧ್ಯತೆ ಇರುವುದರಿಂದ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರುವುದನ್ನು ಪರಿಗಣಿಸಿ. 

7 /8

ಸಿಂಹ ರಾಶಿ:  ಶನಿ ಉದಯವು ಸಿಂಹ ರಾಶಿಯ ಜನರಿಗೂ ಅಷ್ಟು ಉತ್ತಮವಾಗಿರುವುದಿಲ್ಲ. ಈ ವೇಳೆ ನೀವು ಕೆಲಸದಲ್ಲಿ ಭಾರೀ ಎಚ್ಚರಿಕೆ ವಹಿಸುವುದು ಅಗತ್ಯ. ಯಾವುದೇ ವಿಚಾರದಲ್ಲಿ ಸ್ವಲ್ಪ ನಿರ್ಲಕ್ಷ್ಯವು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯನ್ನು ಉಂಟು ಮಾಡಬಹುದು. ವ್ಯಾಪಾರಿಗಳಿಗೆ ನಷ್ಟ. ಹೂಡಿಕೆಯಿಂದ ಕೈ ಸುಟ್ಟುಕೊಳ್ಳುವ ಸಂಭವವಿದೆ. 

8 /8

ಧನು ರಾಶಿ:  ಶನಿ ಉದಯವು ಧನು ರಾಶಿಯವರಿಗೆ ಅಷ್ಟು ಫಲಪ್ರದವಾಗಿರುವುದಿಲ್ಲ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡಬಹುದು. ಇದಲ್ಲದೆ, ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಕದಡಬಹುದು. ಉದ್ಯೋಗ ರಂಗದಲ್ಲೂ ಸಣ್ಣಪುಟ್ಟ ಸಮಸ್ಯೆಗಳು ನಿಮ್ಮನ್ನು ವಿಚಲಿತಗೊಳಿಸಬಹುದು.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.