ಶನಿಯ ಸಂಕ್ರಮಣದಿಂದ ಶಶ ಮಹಾಪುರುಷ ಯೋಗವು ರೂಪುಗೊಳ್ಳುತ್ತಿದೆ.ಈ ಯೋಗವು ಯಾವ ರಾಶಿಯವರಿಗೆ ಹೆಚ್ಚು ಲಾಭವನ್ನು ನೀಡುತ್ತದೆ ನೋಡೋಣ.
ಬೆಂಗಳೂರು : ನವ ಗ್ರಹಗಳ ಪೈಕಿ ಜನರು ಹೆಚ್ಚು ಭಯ ಪಡುವ ಗ್ರಹ ಶನಿ. ವೈದಿಕ ಜ್ಯೋತಿಷ್ಯದ ಪ್ರಕಾರ ಶನಿ ಕರ್ಮಕ್ಕೆ ಅನುಸಾರವಾಗಿ ಫಲ ನೀಡುವವನು. ಶನಿದೇವ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಅವರು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾನೆ. ಪ್ರಸ್ತುತ ಶನಿದೇವನು ತನ್ನದೇ ಆದ ಕುಂಭ ರಾಶಿಯಲ್ಲಿರುವ ಶನಿ, 2025 ರವರೆಗೆ ಅಲ್ಲೇ ಇರಲಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಶನಿಯ ಸಂಕ್ರಮಣದಿಂದ ಶಶ ಮಹಾಪುರುಷ ಯೋಗವು ರೂಪುಗೊಳ್ಳುತ್ತಿದೆ. ಈ ರಾಜಯೋಗವು ಕೆಲವು ರಾಶಿಯವರ ಜನ್ಮ ಜಾತಕದಲ್ಲಿ ಕಷ್ಟವನ್ನು ಹೆಚ್ಚಿಸಿದರೆ ಇನ್ನು ಕೆಲವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಈ ಯೋಗವು ಯಾವ ರಾಶಿಯವರಿಗೆ ಹೆಚ್ಚು ಲಾಭವನ್ನು ನೀಡುತ್ತದೆ ನೋಡೋಣ.
ಶಶ ಮಹಾಪುರುಷ ಯೋಗದ ಪರಿಣಾಮ : ಈ ಯೋಗವು ಪಂಚಮಹಾಪುರುಷ ಯೋಗಗಳಲ್ಲಿ ಒಂದು. ಜನನ ಜಾತಕದಲ್ಲಿ ಶನಿಯು ಚಂದ್ರ ಅಥವಾ ಲಗ್ನದಿಂದ ಕೇಂದ್ರ ಮನೆಯಲ್ಲಿದ್ದಾಗ ಅಥವಾ ಶನಿಯು ಚಂದ್ರ ಅಥವಾ ಲಗ್ನದಿಂದ 1, 4, 7ನೇ ಮನೆ ಅಥವಾ 10 ನೇ ಮನೆಯಲ್ಲಿ ಕುಂಭ, ತುಲಾ ಅಥವಾ ಮಕರ ರಾಶಿಯಿದ್ದರೆ ಈ ಯೋಗವು ರೂಪುಗೊಳ್ಳುತ್ತದೆ.
ಮೇಷ ರಾಶಿ :ಶಶ ಮಹಾಪುರುಷ ಯೋಗವು ಮೇಷ ರಾಶಿಯವರಿಗೆ ಜೀವನದಲ್ಲಿ ಶುಭ ಸುದ್ದಿ ತರಲಿದೆ. ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಕಾಣಲಿದ್ದಾರೆ. ಈ ರಾಶಿಯವರ ಯಾವುದಾದರೂ ಕೆಲಸ ಅರ್ಧಕ್ಕೆ ನಿಂತಿದ್ದರೆ ಆ ಕೆಲಸಗಳು ಮತ್ತೆ ಪ್ರಾರಂಭವಾಗುತ್ತವೆ. ಹಣಕಾಸಿನ ಮುಗ್ಗಟ್ಟು ದೂರವಾಗುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.
ವೃಷಭ ರಾಶಿ : ಶಶ ಮಹಾಪುರುಷ ಯೋಗದಿಂದಾಗಿ, ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ. ಹಣಕಾಸಿನ ಮುಗ್ಗಟ್ಟು ದೂರವಾಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
ಕನ್ಯಾರಾಶಿ : ನಿಮ್ಮ ಸಂಕ್ರಮಣದ ಜಾತಕದ ಆರನೇ ಮನೆಯಲ್ಲಿ ಶಶ ಮಹಾಪುರುಷ ಯೋಗವು ರೂಪುಗೊಳ್ಳುತ್ತಿದೆ. ನೀವು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಯಾವುದೇ ಸವಾಲನ್ನು ನಿಮ್ಮ ಧೈರ್ಯದಿಂದ ಎದುರಿಸಿ ಜಯಿಸಬಹುದು.
ಕುಂಭ ರಾಶಿ : ಪ್ರಸ್ತುತ ಶನಿದೇವನು ಈ ರಾಶಿಯಲ್ಲಿದ್ದು 2025ರವರೆಗೆ ಇಲ್ಲೇ ಇರುತ್ತಾನೆ. ಶಶಮಹಾಪುರುಷ ಯೋಗವು ಕುಂಭ ರಾಶಿಯವರಿಗೆ ವಿಶೇಷವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಇದ್ದ ಕಷ್ಟಗಳು ದೂರವಾಗುತ್ತವೆ. ಸಾಡೇ ಸಾತಿ ನಡೆಯುತ್ತಿದ್ದರೂ ಶನಿಯ ವಿಶೇಷ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. (ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)