Shashi Shukra Yuti 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೂ ಕೆಲವೇ ಗಂಟೆಗಳಲ್ಲಿ ಕಲಾತ್ಮಕ ರಾಜಯೋಗ ರೂಪುಗೊಳ್ಳುತ್ತಿದೆ. ಈ ರಾಜಯೋಗ ನಿರ್ಮಾಣದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಖುಷಿಗಳ ಆಗಮನವಾಗಲಿದೆ. ಈ ರಾಶಿಗಳ ಜನರಿಗೆ ಅದರಿಂದ ವಿಶೇಷ ಲಾಭಗಳು ಸಿಗಲಿದೆ.(Spiritual News In Kannada)
ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಲ್ಲಿ ಚಂದ್ರ ಅತ್ಯಂತ ವೇಗದ ಗತಿಯಲ್ಲಿ ಚಲಿಸುವ ಗ್ರಹ ಎಂದು ಹೇಳಲಾಗುತ್ತದೆ. ಸುಮಾರು ಎರಡೂವರೆ ದಿನಗಳಿಗೊಮ್ಮೆ ಆತ ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಎನ್ನಲಾಗುತ್ತದೆ. ಹೀಗಿರುವಾಗ ಯಾವುದಾದರೊಂದು ಗ್ರಹದ ಜೊತೆಗೆ ಆತನ ಮೈತ್ರಿ ಖಂಡಿತ ನೆರವೇರುತ್ತದೆ. ಆತನ ಈ ಮೈತ್ರಿ ಶುಭ ಹಾಗೂ ಅಶುಭ ಯೋಗಗಳನ್ನು ರೂಪುಸುತ್ತದೆ. ಅಂತಹುದೇ ಶುಭ ಯೋಗ ಎಂದರೆ ಅದು ಕಲಾತ್ಮಕ ಯೋಗ ಮತ್ತು ಅದು ಶುಕ್ರ ಹಾಗೂ ಚಂದ್ರನ ಮೈತಿಯಿಂದ ಕೆಲವೇ ಗಂಟೆಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ನವೆಂಬರ್ 8, 2023 ರಂದು ರಾತ್ರಿ 9ಗಂಟೆ 35 ನಿಮಿಷಕ್ಕೆ ಚಂದ್ರ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಅಲ್ಲಿ ಈಗಾಗಲೇ ಶುಕ್ರನೀರುವ ಕಾರಣ ಇಬ್ಬರ ಮೈತ್ರಿಯಿಂದ ಅಲ್ಲಿ ಕಲಾತ್ಮಕ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಿರುವಾಗ ಶುಕ್ರನ ಜೊತೆಗೆ ಚಂದ್ರನ ಶುಭ ಫಲಗಳು ಕೆಲ ರಾಶಿಗಳ ಜಾತಕದವರಿಗೆ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಬನ್ನಿ ಕಲಾತ್ಮಕ ಯೋಗದಿಂದ ಶುಭ ಫಲಗಳನ್ನು ಪಡೆಯುವ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
ಇದನ್ನೂ ಓದಿ-ಹನ್ನೆರಡು ವರ್ಷಗಳ ಬಳಿಕ ಪವರ್ಫುಲ್ ರಾಜ ಲಕ್ಷಣ ರಾಜಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಸಾಹುಕಾರರಾಗುವ ಯೋಗ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Shashi Shukra Yuti 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೂ ಕೆಲವೇ ಗಂಟೆಗಳಲ್ಲಿ ಕಲಾತ್ಮಕ ರಾಜಯೋಗ ರೂಪುಗೊಳ್ಳುತ್ತಿದೆ. ಈ ರಾಜಯೋಗ ನಿರ್ಮಾಣದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಖುಷಿಗಳ ಆಗಮನವಾಗಲಿದೆ. ಈ ರಾಶಿಗಳ ಜನರಿಗೆ ಅದರಿಂದ ವಿಶೇಷ ಲಾಭಗಳು ಸಿಗಲಿದೆ.(Spiritual News In Kannada)
ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಇದನ್ನು ಸಂಪತ್ತು, ಮನೆ, ವಾಹನ, ತಾಯಿ ಹಾಗೂ ಸನ್ಮಾನದ ಭಾವ ಎನ್ನಲಾಗುತ್ತದೆ. ಹೀಗಿರುವಾಗ ಈ ಯೋಗ ನಿರ್ಮಾಣದಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಮನೆ ಕನಸನ್ನು ಕಾಣುತ್ತಿರುವ ಜನರ ಕನಸು ನನಸಾಗುವ ಸಾಧ್ಯತೆ ಇದೆ. ಹೊಸ ಮನೆ ಅಥವಾ ನಿವೇಶನ ಅಠಾ ವಾಹನ ಖರೀದಿಗೆ ನೀವು ಮನಸ್ಸು ಮಾಡುವ ಸಾಧ್ಯತೆ ಇದೆ . ತಂದೆಯ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಹಳೆ ಸ್ನೇಹಿತರನ್ನು ನೀವು ಭೇಟಿಯಾಗುವ ಸಾಧ್ಯತೆ ಇದೆ. ಶುಕ್ರ ನಿಮ್ಮ ವಿಲಾಸಿತನವನ್ನು ಹೆಚ್ಚಿಸಲಿದ್ದಾನೆ. ವ್ಯಾಪಾರದಲ್ಲಿ ಸಾಕಷ್ಟು ಲಾಭ ನಿಮ್ಮದಾಗಲಿದೆ.
ತುಲಾ ರಾಶಿ: ಈ ರಾಶಿಯಲ್ಲಿ ಚಂದ್ರ ಹಾಗೂ ಶುಕ್ರರ ಯುತಿ ಲಗ್ನ ಭಾವದಲ್ಲಿ ನೆರವೇರುತ್ತಿದೆ. ಕಲಾತ್ಮಕ ಯೋಗ ಕೂಡ ಇದೆ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಯೋಗ ನಿಮಗೆ ವರದಾನ ಸಾಬೀತಾಗಲಿದೆ. ನಿಮ್ಮ ವ್ಯಕ್ತಿತ್ವ ಅಪಾರ ಸುಧಾರಿಸಲಿದೆ. ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ. ಜೀವನದಲ್ಲಿನ ಅನಿಶ್ಚಿತತೆಯಿಂದ ನಿಮಗೆ ಮುಕ್ತಿ ಸಿಗಲಿದೆ. ವೈವಾಹಿಕ ಜೀವನದಲ್ಲಿ ಖುಷಿಗಳು ಮರುಕಳಿಸಲಿವೆ. ಈ ಅವಧಿ ನಿಮ್ಮ ಪಾಲಿಗೆ ಅದ್ಭುತವಾಗಿರಲಿದೆ. ಕಲೆ, ಅಭಿನಯ, ರಂಗಭೂಮಿಗೆ ಸಂಬಂಧಿಸಿದ ಜನರಿಗೆ ಇದರಿಂದ ಸಾಕಷ್ಟು ಲಾಭ ಸಿಗಲಿದೆ. ರಚನಾತ್ಮಕ ರೀತಿಯಲ್ಲಿ ನೀವು ನಿಮ್ಮ ಕೆಲಸವನ್ನು ಪೂರೈಸುವಿರಿ. ವ್ಯಾಪಾರದಲ್ಲಿಯೂ ಕೂಡ ಭಾರಿ ಲಾಭ ಸಿಗಲಿದೆ. ಬಿಸ್ನೆಸ್ ಆರಂಭಿಸಲು ಬಯಸುವವರಿಗೆ ಈ ಅವಧಿ ಉತ್ತಮವಾಗಿರಲಿದೆ.
ಮಕರ ರಾಶಿ: ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದನ್ನು ಸಾಮಾನ್ಯುಯವಾಗಿ ಕಾರ್ಯಸ್ಥಳ, ವೃತ್ತಿ, ರಚನಾತ್ಮಕ ಮತ್ತು ಸಾಮಾಜಿಕ ಘನತೆ ಗೌರವದ ಭಾವವಾಗಿದ್ದು, ನಿಮ್ಮ ಜೀವನದಲ್ಲಿ ಇವೆಲ್ಲವೂಗಳು ಕೂಡ ಹೆಚ್ಚಾಗಲಿದೆ. ವೃತ್ತಿ ಜೀವನದ ಆರಂಭ ಉತ್ತಮವಾಗಿರಲಿದೆ. ಕೌಟುಂಬದ ಬಿಸ್ನೆಸ್ ಜವಾಬ್ದಾರಿ ನಿಮಗೆ ಸಿಗುವ ಸಾಧ್ಯತೆ ಇದೆ. ನಿಮ್ಮ ಪರಿಶ್ರಮದ ಸಂಪೂರ್ಣ ಫಲ ನಿಮಗೆ ಸಿಗಲಿದೆ ವೈವಾಹಿಕ ಜೀವನ ಕೂಡ ಸುಮಧುರವಾಗಿರಲಿದೆ ಹೊಸ ಮನೆ, ವಾಹನ ಅಥವಾ ಸಂಪತ್ತು ಖರೀದಿಸಲು ಪ್ಲಾನ್ ಮಾಡಬಹುದು. ಮನೆ ನವೀಕರಣ ಮಾಡಬಹುದು. ಇದರಲ್ಲಿ ನಿಮ್ಮ ಖರ್ಚು ಅಧಿಕವಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)