Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ..
1/6ಕೂದಲು ಉದುರುವಿಕೆ ಎಲ್ಲ ವಯೋಮಿತಿ ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.. ಇಷ್ಟೇ ಅಲ್ಲ ಇದರೊಂದಿಗೆ ತಲೆ ಹೊಟ್ಟು ಬಿಳಿ ಕೂದಲು ಹೀಗೆ ಹಲವಾರು ಸಮಸ್ಯೆಗಳು ಉಧ್ಭವವಾಗುತ್ತವೆ.. ಇದಕ್ಕೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ..
2/6ನಾವು ಗಮನಿಸಿದಾಗ ನಮ್ಮ ಹಿರಿಯರ ಕೂದಲು ಹೆಚ್ಚು ಸುಂದರ ಹಾಗೂ ಉದ್ದವಾಗಿರುತ್ತದೆ.. ಅಷ್ಟೇ ಅಲ್ಲ ಅವರಿಗೆ ಯಾವುದೇ ಕೂದಲು ಸಂಭಂದಿ ಸಮಸ್ಯೆಗಳಿರುವುದಿಲ್ಲ.. ಅದಕ್ಕೆ ಕಾರಣ ಅವರು ಬಳಸುತ್ತಿದ್ದ ಸೀಗೆಕಾಯಿ..
3/6ಈ ಸೀಗೆ ಕಾಯಿಯನ್ನು ವಾರಕ್ಕೆ 2 ರಿಂದ 3 ಬಾರಿ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಬಿಳಿಯಾಗುವುದಿಲ್ಲ ಮತ್ತು ಬಿಳಿ ಕೂದಲಿದ್ದರೂ ಅವು ಕಪ್ಪು ಬಣ್ಣಕ್ಕೆ ತಿರುಗುತ್ತವೆ..
4/6ದುಬಾರಿ ಶಾಂಪೂ, ಹೇರ್ ಪ್ಯಾಕ್ ಬಳಸಿ ಕೂದಲಿಗೆ ಹಾನಿ ಮಾಡಿಕೊಳ್ಳುವುದಕ್ಕಿಂತ ಸೀಗೆಕಾಯಿ ಪುಡಿಯಿಂದ ತಲೆಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೇ ಹೊಳೆಯುವ ಕೂದಲು ನಿಮ್ಮದಾಗುತ್ತದೆ.
5/6ಇನ್ನು ತಲೆ ಹೊಟ್ಟಿನ ಸಮಸ್ಯೆ.. ಇದರಿಂದ ಬೇಸೋತ್ತಿರುವವರು ಸಾಕಷ್ಟು ಜನ ಇದ್ದಾರೆ.. ಆದರೆ ಶಾಶ್ವತವಾಗಿ ತಲೆಹೊಟ್ಟಿಗೆ ಪರಿಹಾರ ಬಯಸುವವರು ಸೀಗೆಕಾಯಿ ಪುಡಿಯಿಂದ ಮಾಡಿ.. ಇದು ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ..
6/6(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)