Dr Shivarajkumar: ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಶಿವಣ್ಣ ಕರುನಾಡ ಜನರ ಅಚ್ಚಮೆಚ್ಚು ಅಂತಲೇ ಹೇಳಬಹುದು. ಇದೀಗ ಶಿವಣ್ಣ ಅವರು ತಮ್ಮ ಕುಟುಂಬದ ಸಮೇತ ತಿರುಪತಿ ದೇವಸ್ಥಾನಕ್ಕೆ ಬೇಟಿ ನೀಡಿ ತಿಮ್ಮಪ್ಪಗೆ ಮುಡಿ ಅರ್ಪಿಸಿದ್ದಾರೆ.
Dr Shivarajkumar: ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಶಿವಣ್ಣ ಕರುನಾಡ ಜನರ ಅಚ್ಚಮೆಚ್ಚು ಅಂತಲೇ ಹೇಳಬಹುದು. ಇದೀಗ ಶಿವಣ್ಣ ಅವರು ತಮ್ಮ ಕುಟುಂಬದ ಸಮೇತ ತಿರುಪತಿ ದೇವಸ್ಥಾನಕ್ಕೆ ಬೇಟಿ ನೀಡಿ ತಿಮ್ಮನಿಗೆ ಮುಡಿ ಅರ್ಪಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಇತ್ತೀಚೆಗೆ ಕುಟುಂಬದ ಸಮೇತ ತಿರುಪತಿಗೆ ಬೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪತ್ನಿ ಹಾಗೂ ಶಿವಣ್ಣ ಇಬ್ಬರು ಕೂಡ ದೇವರಿಗೆ ಮುಡಿಯನ್ನು ಅರ್ಪಿಸಿ ಹರಕೆ ತೀರಿಸಿಕೊಂಡಿದ್ದಾರೆ.
ಇತ್ತೀಚೆಗೆ ಶಿವಣ್ಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಶಿವಣ್ಣ ಅವರ ಅನಾರೋಗ್ಯದ ಕುರಿತು ಅಭಿಮಾನಿಗಳು ಚಿಂತೆಗೀಡಾಗಿದ್ದರು. ಇದೀಗ ಇದರ ಬೆನ್ನಲ್ಲೆ ಶಿವಣ್ಣ ದಂಪತಿ ತಿರುಪತಿಗೆ ಬೇಟಿ ನೀಡಿದ್ದಾರೆ.
ಡಿ. 18 ರಂದು ಶಿವಣ್ಣ ಅವರು ಚಿಕಿತ್ಸೆಯ ಕಾರಣದಿಂದಾಗಿ ಅಮೇರಿಕಾಕ್ಕೆ ಹೋಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು, ಇದೀಗ ಇಡೀ ಕುಟುಂಬ ದೇವರ ದರ್ಶನ ಪಡೆದಿದ್ದಾರೆ, ಇದಕ್ಕೆ ಸಂಬಂಧ ಪಟ್ಟ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಶಿವಣ್ಣ ದಂಪತಿ ಅಷ್ಟೆ ಅಲ್ಲದೆ ಶಿವಣ್ಣ ಅವರ ಅಂಗರಕ್ಷಕ ಕೂಡ ತಮ್ಮ ಮುಡಿಯನ್ನು ಅರ್ಪಿಸಿರುವುದು ಎಲ್ಲರ ಗಮನ ಸೆಳೆದಿದೆ, ಇದು ಶಿವಣ್ಣನೆಡೆಗೆ ಅವರಿಗಿರುವ ಪ್ರೀತಿ ಗೌರವವನ್ನು ಎತ್ತಿ ತೋರುತ್ತಿದೆ.