ಪುಷ್ಪ 2 ʼಅಲ್ಲು ಅರ್ಜುನ್ ಮಗಳುʼ ಎಷ್ಟು ಕ್ಯೂಟ್‌ & ‌ಹಾಟ್‌ ಆಗಿದಾಳೆ ಅಲ್ವಾ..! ಫೋಟೋಸ್‌ ವೈರಲ್‌

Pushpa 2 Pavani Karanam : ಪುಷ್ಪ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವುದು ಗೊತ್ತೇ ಇದೆ. ಡಿ.5ರಂದು ಬಿಡುಗಡೆಯಾದ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಚಿತ್ರದಲ್ಲಿ ಅಲ್ಲು ಅರ್ಜುನ್‌ ಮಗಳಾಗಿ ನಟಿಸಿರುವ ನಟಿ ಪ್ರೇಕ್ಷಕರ ಗಮನಸೆಳೆಯುತ್ತಿದ್ದು, ಈಕೆ ಯಾರು ಅಂತ..? ಹುಡುಕಾಡುತ್ತಿದ್ದಾರೆ.

1 /9

ಭಾರತದಲ್ಲಿ ಪಷ್ಪ ಸಿನಿಮಾದ ಜ್ವರ ಜೋರಾಗಿದೆ. ಬಹುತೇಕ ಥಿಯೇಟರ್‌ಗಳು ಫುಲ್‌ ಆಗಿವೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.  

2 /9

3 ವರ್ಷಗಳ ನಂತರ ತೆರೆ ಮೇಲೆ ಅಲ್ಲು ಅರ್ಜುನ್‌ ಅವರನ್ನು ನೋಡಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ನಟನೆ ನೆಕ್ಸ್‌ ಲೆವೆಲ್‌ನಲ್ಲಿದೆ ಎಂದೇ ಹೇಳಬಹುದು.   

3 /9

ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್ ಮುಂತಾದವರು ಪುಷ್ಪಾ 2 ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.   

4 /9

ಈ ಚಿತ್ರದಲ್ಲಿ ನಾಯಕಿಯರ ಹೊರತಾಗಿ, ಕಥೆಗೆ ಟ್ವಿಸ್ಟ್‌ ನೀಡುವ ಅಜಯ್ ಮಗಳಾಗಿ, ಪುಷ್ಪರಾಜ್‌ ಅವರನ್ನು ಚಿಕ್ಕಪ್ಪ ಎಂದು ಕರೆಯುವ ನಟಿ ಪ್ರೇಕ್ಷಕರಿಗೆ ನೆನಪುಳಿಯುತ್ತಾಳೆ..  

5 /9

ಆ ಪಾತ್ರದಲ್ಲಿ ನಟಿಸಿದ್ದು ಯಾರೋ ಅಲ್ಲ.. ಪಾವನಿ ಕರಣಂ. ಈ ಹುಡುಗಿ ಪುಷ್ಪಾ 1 ರಲ್ಲಿ ಸಂಕ್ಷಿಪ್ತವಾಗಿ ಕಾಣಿಸಿಕೊಂಡಳು. ಪುಷ್ಪಾ 2ರಲ್ಲಿ ಅವರ ಪಾತ್ರವೇ ಹೆಚ್ಚು. ಕ್ಲೈಮ್ಯಾಕ್ಸ್ ಫೈಟ್ ಕೂಡ ಅವಳದ್ದೇ.  

6 /9

ಪಾವನಿ ತನ್ನ ವೃತ್ತಿಜೀವನವನ್ನು ಮೊದಲು ಕಿರುಚಿತ್ರಗಳೊಂದಿಗೆ ಪ್ರಾರಂಭಿಸಿದಳು. ನಂತರ ಸಿನಿಮಾಗೆ ಎಂಟ್ರಿ ಕೊಟ್ಟರು. ಪರೇಶನ್ ಮತ್ತು ಪಾಯಲಂ ಪಿಲಗದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  

7 /9

ಪರೇಶಾನ್ ಸಿನಿಮಾದಲ್ಲಿ "ಸಮೋಸಾ ತಿಂತಿಯಾ ಶಿರೀಶಾ" ಎಂಬ ಡೈಲಾಗ್ ಮೂಲಕ ಪಾವನಿ ಫೇಮಸ್ ಆಗಿದ್ದಳು.   

8 /9

ಇತ್ತೀಚೆಗಷ್ಟೇ ಗಾಡ್ಸ್ ಆಫ್ ಧರ್ಮಪುರಿ ಎಂಬ ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. ಇದೀಗ ಪುಷ್ಪ 2 ಚಿತ್ರದ ಈ ಹುಡುಗಿ ಎಲ್ಲರ ಗಮನಸೆಳೆಯುತ್ತಿದ್ದಾಳೆ.  

9 /9

ಪಾವನಿ ಕರಣಂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ..