PHOTOS: ಮತ್ತೆ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ..!

ಟಗರು, ಡಾಲಿ ಮತ್ತು ಚಿಟ್ಟೆ ಕಾಂಬಿನೇಷನ್ ‘ಬೈರಾಗಿ’ಯಲ್ಲಿ ಮತ್ತೆ ಆರ್ಭಟಿಸಲಿದೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಿದೆ.

ಬೆಂಗಳೂರು: ‘ಟಗರು’ ಸಿನಿಮಾದಲ್ಲಿ ಮೋಡಿ ಮಾಡಿದ್ದ ಹ್ಯಾಟ್ರಿಕ್‍ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಮತ್ತು ವಶಿಷ್ಠ ಸಿಂಹ ಜೋಡಿ ‘ಬೈರಾಗಿ’ಯಲ್ಲಿ ಒಂದಾಗುತ್ತಿದೆ. ಹೀಗಾಗಿ ‘ಬೈರಾಗಿ’ ಸಿನಿಮಾ ‘ಟಗರು ಪಾರ್ಟ್ 2’? ಅನ್ನೋ ಪ್ರಶ್ನೆ ಮೂಡಿದೆ. ಟಗರು, ಡಾಲಿ ಮತ್ತು ಚಿಟ್ಟೆ ಕಾಂಬಿನೇಷನ್ ‘ಬೈರಾಗಿ’ಯಲ್ಲಿ ಮತ್ತೆ ಆರ್ಭಟಿಸಲಿದೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಿದೆ. ಬೈರಾಗಿ ಹಾಡಿಗೆ ವಸಿಷ್ಠ ಸಿಂಹ ಧ್ವನಿ ನೀಡಿದ್ದು, ಟಗರು, ಡಾಲಿಗೆ ಮತ್ತೆ ಚಿಟ್ಟೆ ಸಾಥ್ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

‘ಟಗರು’ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಏಟಿಗೆ ಡಾಲಿ-ಚಿಟ್ಟೆ ಜೋಡಿ ತರಗೆಲೆ ಥರಾ ಉದುರೋಗಿತ್ತು. ಶಿವಣ್ಣ-ಡಾಲಿ-ಚಿಟ್ಟೆ ಕಾಂಬಿನೇಷನ್‍ಗೆ ಭಯಂಕರ ಫ್ಯಾನ್ ಫಾಲೋಯಿಂಗ್ ಇದೆ. ಈ ತ್ರಿವಳಿ ಜೋಡಿ ಮತ್ತೆ ಒಂದಾಗ್ತಾ ಇದೆ.

2 /4

ಶಿವಣ್ಣ ಜೊತೆ ಡಾಲಿ ಧನಂಜಯ್ ಹಾಗೂ ಚಿಟ್ಟೆ ವಸಿಷ‍್ಟ ಸಿಂಹ ಮತ್ತೆ ಜೋಡಿಯಾಗ್ತಾ ಇದ್ದಾರೆ. ಆದರೆ, ಇಲ್ಲಿ ವಸಿಷ್ಠ ತೆರೆ ಮೇಲೆ ಜೋಡಿಯಾಗೋ ಬದಲು ಹಾಡು ಹಾಡಿ, ಧ್ವನಿಯಲ್ಲಿ ಒಂದಾಗ್ತಾ ಇದ್ದಾರೆ. ಇದೇ ಜು.1ಕ್ಕೆ ತೆರೆಗೆ ಬರ್ತಿರೋ ಡಾಲಿ ಧನಂಜಯ್-ಶಿವಣ್ಣ ಒಟ್ಟಾಗಿ ನಟಿಸಿರುವ ‘ಬೈರಾಗಿ’ ಸಿನಿಮಾದ ಒಂದು ಪವರ್ ಫುಲ್ ಹಾಡಿಗೆ ಚಿಟ್ಟೆ ವಸಿಷ್ಠ ದನಿಯಾಗಿದ್ದಾರೆ.

3 /4

ಈಗಾಗಲೇ ‘ಬೈರಾಗಿ’ ಸಿನಿಮಾದ ಹಾಡೊಂದಕ್ಕೆ ಶಿವಣ್ಣ ಜೊತೆ ಶರಣ್ ದನಿಯಾಗಿದ್ದು. ಈಗ ಮತ್ತೊಂದು ಹಾಡಿನಲ್ಲಿ ವಸಿಷ್ಠ ತಮ್ಮ ದನಿಯ ಮೂಲಕ ಶಿವಣ್ಣ & ಡಾಲಿಯ ಸಿನಿಮಾದಲ್ಲಿ ಮತ್ತೆ ಒಂದಾಗ್ತಾ ಇದ್ದಾರೆ. ಪ್ರೀತಿಯ ಶಿವಣ್ಣನಿಗಾಗಿ ಚಿಟ್ಟೆ ಹಾಡು ಹಾಡಿದ್ದಾರೆ.

4 /4

ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿನಲ್ಲಿ ವಶಿಷ್ಠ ಸಿಂಹರಿಗೆ ಕೆಜಿಎಫ್ ಅನನ್ಯ ಭಟ್ ಸಾಥ್ ಕೊಟ್ಟಿದ್ದಾರೆ.