Shravan Masa 2021 - ಶ್ರಾವಣ ಮಾಸ (Shravan Masa 2021) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಶ್ರಾವಣ ಮಾಸದಲ್ಲಿ ಶಿವನ (Lord Shiva) ಆರಾಧನೆ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತದೆ. ಹೀಗಿರುವಾಗ ನೀವೂ ಕೂಡ ದುದ್ರಾಕ್ಷದ ಹೆಸರನ್ನು ಪದೇ ಪದೇ ಕೇಳುತ್ತಿರಬಹುದು. ರುದ್ರಾಕ್ಷವನ್ನು (Rudraksha) ಶಿವನ ರುದ್ರ ಸ್ವರೂಪಿ ಎಂದು ಭಾವಿಸಲಾಗುತ್ತದೆ.
ನವದೆಹಲಿ: Shravan Masa 2021 - ಶ್ರಾವಣ ಮಾಸ (Shravan Masa 2021) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಶ್ರಾವಣ ಮಾಸದಲ್ಲಿ ಶಿವನ (Lord Shiva) ಆರಾಧನೆ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತದೆ. ಹೀಗಿರುವಾಗ ನೀವೂ ಕೂಡ ದುದ್ರಾಕ್ಷದ ಹೆಸರನ್ನು ಪದೇ ಪದೇ ಕೇಳುತ್ತಿರಬಹುದು. ರುದ್ರಾಕ್ಷವನ್ನು (Rudraksha) ಶಿವನ ರುದ್ರ ಸ್ವರೂಪಿ ಎಂದು ಭಾವಿಸಲಾಗುತ್ತದೆ. ಶಿವ ಮಹಾಪುರಾಣದ (Shiva Mahapurana) ಪ್ರಕಾರ ರುದ್ರಾಕ್ಷ ಏಕಮುಖದಿಂದ (Ekamukhi Rudraksha) ಹಿಡಿದು 38 ಮುಖಗಳವರೆಗೆ ಇರುತ್ತವೆ ಎನ್ನಲಾಗಿದೆ. ಅಷ್ಟೇ ಅಲ್ಲ ಇವುಗಳ ಪ್ರಭಾವ ಕೂಡ ಭಿನ್ನ-ಭಿನ್ನವಾಗಿರುತ್ತವೆ ಎನ್ನಲಾಗುತ್ತದೆ. ಇದು ಹಲವು ಚಮತ್ಕಾರ ಗುಣಗಳನ್ನು ಹೊಂದಿದೆ. ಒಂದು ವೇಳೆ ಈ ರುದ್ರಾಕ್ಷ ಯಾರಿಗಾದರೂ ಸೂಟ್ ಆದರೆ, ಆ ವ್ಯಕ್ತಿ ಊಹಿಸದ ರೀತಿಯಲ್ಲಿ ಆತನ ಭಾಗ್ಯ ಬದಲಾವಣೆಯಾಗುತ್ತದೆ. ರುದ್ರಾಕ್ಷದಿಂದ ವ್ಯಕ್ತಿಗೆ ಜೀವನದಲ್ಲಿ ಅಪಾರ ಯಶಸ್ಸು ಸಿಗುವುದರ ಜೊತೆಗೆ ಆತನ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.
ಇದನ್ನೂ ಓದಿ-ಶಿವನ ಪ್ರಸಾದ ಎಂದೇ ಪರಿಗಣಿಸಲ್ಪಡುವ ಈ ಬೀಜದಲ್ಲಿವೆ ಚಮತ್ಕಾರಿಕ ಗುಣಗಳು
(ಸೂಚನೆ: ಈ ಲೇಖನದಲ್ಲಿ ಒದಗಿಸಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಿಸಿದ ನುರಿತ ತಜ್ಞರ ಸಲಹೆ ಪಡೆಯಲು ಮರೆಯಬೇಡಿ )
ಇದನ್ನೂ ಓದಿ-Rudraksh ಧರಿಸುವ ಮುನ್ನ ಈ ನಿಯಮಗಳು ನಿಮಗೆ ತಿಳಿದಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ಚಮತ್ಕಾರದಿಂದ ಕೂಡಿದೆ ಈ ಸಸ್ಯ - ರುದ್ರಾಕ್ಷ ಧರಿಸುವುದರಿಂದ ಮನಸ್ಸಿನಲ್ಲಿನ ಹಾಗೂ ಶರೀರದಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದನ್ನು ನಿಮ್ಮ ಬಳಿ ಇಡುವುದರಿಂದ ನಿಮ್ಮಲ್ಲಿನ ನಕಾರಾತ್ಮಕ ವಿಚಾರಗಳು ದೂರವಾಗುತ್ತವೆ. ಅನಾವಶ್ಯಕ ಭಯದಿಂದ ಮುಕ್ತಿ ಸಿಗುತ್ತದೆ. ನಿರಾಸೆ ಹಾಗೂ ಆಲಸ್ಯ ದೂರವಾಗುತ್ತದೆ ಹಾಗೂ ಮನಸ್ಸಿನಲ್ಲಿ ಕೆಲಸ ಮಾಡುವ ಶಕ್ತಿಯ ಸಂಚಾರವಾಗುತ್ತದೆ.
2. ದೇವಾದಿದೇವ ಶಿವನಿಗೆ ಪ್ರಿಯ ಈ ರುದ್ರಾಕ್ಷ - ಒಂದು ವೇಳೆ ಯಾರಾದರು ದೇವಾಧಿದೇವ ಶಿವನ ಜೊತೆಗೆ ಶ್ರೀಗಣೇಶನ ಕೃಪೆ ಬಯಸುತ್ತಿದ್ದರೆ, ಅವರು ಗಣೇಶ ರುದ್ರಾಕ್ಷ ಧರಿಸಬೇಕು. ಇದು ಗಣೇಶ ಸ್ವರೂಪಿ ರುದ್ರಾಕ್ಷವಾಗಿದೆ. ಇದನ್ನು ಧರಿಸುವುದರಿಂದ ಮನುಷ್ಯನ ಮಾನಸಿಕ ಸಂತುಲನ ಸರಿಯಾಗಿರುತ್ತದೆ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಆತ ಯಾವುದೇ ಹೆದರಿಕೆ ಇಲ್ಲದೆ ನಿರ್ಣಯಗಳನ್ನು ಕೈಗೊಳ್ಳುತ್ತಾನೆ. ಇದರಿಂದ ಆತನ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹರಿಸುತ್ತವೆ ಎನ್ನಲಾಗುತ್ತದೆ.
3. ಅದ್ಭುತ ಲಾಭಗಳಾಗುತ್ತವೆ - ದೇವಾದಿದೇವ ಮಹಾದೇವನಿಗೆ ಇಷ್ಟವಾಗಿರುವ ಈ ರುದ್ರಾಕ್ಷದಿಂದ ನಮ್ಮ ಜೀವನದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ರುದ್ರಾಕ್ಷ ಚಿಕ್ಕದಾದಷ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನಲಾಗುತ್ತದೆ. ಈ ರುದ್ರಾಕ್ಷ ಸಫಲತೆ, ಧನ-ಸಂಪತ್ತು, ಮಾನ-ಸನ್ಮಾನ ಹೆಚ್ಚಿಸುತ್ತದೆ.
4. ಪ್ರತಿಯೊಂದು ಸಮಸ್ಯೆಯ ಪರಿಹಾರ ರುದ್ರಾಕ್ಷ - ಶಿವ ಸಮಸ್ತ ಲೋಕ ಕಲ್ಯಾಣಕ್ಕಾಗಿ ತನ್ನ ಕಣ್ಣುಗಳಿಂದ ಕಣ್ಣಿರ ಹನಿಯ ರೂಪದಲ್ಲಿ ರುದ್ರಾಕ್ಷವನ್ನು ಉತ್ಪತ್ತಿಸಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಶಿವನ ಕಣ್ಣಿನಿಂದ ಬಂದ ಮೊದಮೊದಲ ಹನಿಗಳನ್ನು ಏಕಮುಖಿ ರುದ್ರಾಕ್ಷ ಎಂದು ಕರೆಯಲಾಗುತ್ತದೆ. ಏಕಮುಖಿ ರುದ್ರಾಕ್ಷವನ್ನು ತುಂಬಾ ಮಹತ್ವಪೂರ್ಣ ಹಾಗೂ ಕಲ್ಯಾಣಕಾರಿ ಎನ್ನಲಾಗುತ್ತದೆ. ಜೋತಿಷ್ಯ ಮಾನ್ಯತೆಗಳ ಅನುಸಾರ ಮನೆಯಂಗಳದಲ್ಲಿ ಅಥವಾ ಮನೆಯ ಅಕ್ಕಪಕ್ಕಕ್ಕೆ ಇರುವುದು ಶುಭಕರ ಎಂದು ಹೇಳಲಾಗುತ್ತದೆ.
5. ವಿಭಿನ್ನ ಲಾಭಗಳಿವೆ - ಹಲವು ರೀತಿಯ ರುದ್ರಾಕ್ಷಗಳಿರುತ್ತವೆ. ದ್ವಿಮುಖ ರುದ್ರಾಕ್ಷವನ್ನು ಶಿವ ಶಕ್ತಿಯ ಸ್ವರೂಪ ಎನ್ನಲಾಗುತ್ತದೆ. ಇದನ್ನು ಧರಿಸುವುದರಿಂದ ಪತಿ-ಪತ್ನಿ, ತಂದೆ-ಮಗನ ಸಂಬಂಧದಲ್ಲಿ ಸುಮಧುರ ಭಾವ ನಿರ್ಮಾಣಗೊಳ್ಳುತ್ತದೆ. ಜನ್ಮ ಜಾತಕದಲ್ಲಿ ಒಂದು ವೇಳೆ ಚಂದ್ರ ದುರ್ಬಲನಾಗಿದ್ದರೆ, ಎರಡು ಮುಖಗಳ ರುದ್ರಾಕ್ಷ ಧಾರಣೆಯಿಂದ ವ್ಯಕ್ತಿ ಮಾನಸಿಕವಾಗಿ ಬಲಶಾಲಿಯಾಗುತ್ತಾನೆ ಹಾಗೂ ಸರಿಯಾದ ನಿರ್ಣಯಗಳನ್ನು ಕೈಗೊಳ್ಳುತ್ತಾನೆ. ನಾಲ್ಕು ಮುಖಗಳ ನೇಪಾಳಿ ರುದ್ರಾಕ್ಷ ಧರಿಸುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುವುದರ ಜೊತೆಗೆ ಆತನ ಮಾತಿನಲ್ಲಿ ಮೃದುತ್ವ ಬರುತ್ತದೆ. ಮಕ್ಕಳಿಗೆ ಈ ರುಧ್ರಾಕ್ಷ ಧರಿಸುವುದರಿಂದ ಅವರ ಹಟಮಾರಿ ಸ್ವಭಾವ ದೂರವಾಗುತ್ತದೆ. ರುದ್ರಾಕ್ಷವನ್ನು ನುರಿತ ಜೋತಿಷ್ಯ ಪಂಡೀತರ ಅವಗಾಹನೆಯಲ್ಲಿ ಮಾತ್ರ ಧರಿಸಬೇಕು.