Side Effects Of Aloe Vera On Health: ಲೋಳೆಸರದ ಲಾಭಗಳ ಕುರಿತು ನೀವು ಕೇಳಿರಬಹುದು... ಹಾನಿಗಳ ಕುರಿತು ಗೊತ್ತಿದೆಯಾ?

Health Tips - ಸೌಂದರ್ಯ ವರ್ಧನೆಯ ವಿಷಯವಾಗಲಿ ಅಥವಾ ಆರೋಗ್ಯದ ವಿಷಯವೇ ಆಗಿರಲಿ, ನೀವು ಇದುವರೆಗೆ ಅಲೋವೆರಾ ಜ್ಯೂಸ್‌ನ ಹಲವು ಪ್ರಯೋಜನಗಳನ್ನು ಕೇಳಿರಬೇಕು. ಆದರೆ ಈ ಅಲೋವೆರಾ ಜ್ಯೂಸ್ ಅನ್ನು ಅತಿಯಾಗಿ ಸೇವಿಸಿದರೆ ಅಥವಾ ವೈದ್ಯರನ್ನು ಕೇಳದೆ ಸೇವಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಲಾಭ ಮಾಡುವ ಬದಲು ಹಾನಿ ತರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?  ಹೌದು, ಇದನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು

Health Tips - ಸೌಂದರ್ಯ ವರ್ಧನೆಯ ವಿಷಯವಾಗಲಿ ಅಥವಾ ಆರೋಗ್ಯದ ವಿಷಯವೇ ಆಗಿರಲಿ, ನೀವು ಇದುವರೆಗೆ ಅಲೋವೆರಾ ಜ್ಯೂಸ್‌ನ ಹಲವು ಪ್ರಯೋಜನಗಳನ್ನು ಕೇಳಿರಬೇಕು. ಆದರೆ ಈ ಅಲೋವೆರಾ ಜ್ಯೂಸ್ ಅನ್ನು ಅತಿಯಾಗಿ ಸೇವಿಸಿದರೆ ಅಥವಾ ವೈದ್ಯರನ್ನು ಕೇಳದೆ ಸೇವಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಲಾಭ (Health Tips) ಮಾಡುವ ಬದಲು ಹಾನಿ ತರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?  ಹೌದು, ಇದನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು, ಆದರೆ ಅಲೋವೆರಾದ ಅತಿಯಾದ ಸೇವನೆಯು ವ್ಯಕ್ತಿಯನ್ನು ಚರ್ಮದ ಅಲರ್ಜಿಯಿಂದ ಹಿಡಿದು ಹೃದ್ರೋಗಿಯನ್ನಾಗಿಸುತ್ತದೆ.  ಅಷ್ಟೇ ಅಲ್ಲ ಇದರಲ್ಲಿರುವ ಲ್ಯಾಟೆಕ್ಸ್ ಕೊಲೈಟಿಸ್, ಕ್ರೋನ್ಸ್ ಕಾಯಿಲೆ, ಅಪೆಂಡಿಸೈಟಿಸ್, ಡೈವರ್ಟಿಕ್ಯುಲೋಸಿಸ್, ಕರುಳಿನ ಅಡಚಣೆ, ರಕ್ತಸ್ರಾವ, ಹೊಟ್ಟೆ ನೋವು ಮತ್ತು ಹುಣ್ಣುಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ- China ಹೊಸ ಕರಾಮತ್ತು, ಪ್ರತಿವಾರ 2 ಕೋಟಿ ಒಳ್ಳೆಯ ಸೊಳ್ಳೆಗಳ ಉತ್ಪಾದನೆ

ನ್ಯೂಟ್ರಿಶನಿಷ್ಟ್ ಹಾಗೂ ವೆಲ್ ನೆಸ್ ಎಕ್ಸ್ಪರ್ಟ್ ಹೇಳುವ ಪ್ರಕಾರ
ಅಲೋವೆರಾ ಜ್ಯೂಸ್ ಅನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರ ವಿರೇಚಕ ಪರಿಣಾಮವು ಮಧುಮೇಹಿಗಳಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇಂತಹ ಸನ್ನಿವೇಶದಲ್ಲಿ, ಒಬ್ಬ ವ್ಯಕ್ತಿಯು ವಿಶೇಷವಾಗಿ ಮಧುಮೇಹ ಹೊಂದಿದ್ದರೆ, ಅಲೋವೆರಾ ರಸವನ್ನು ಸೇವಿಸುವ ಮೊದಲು ಅವನು ತನ್ನ ವೈದ್ಯರನ್ನು ಸಂಪರ್ಕಿಸಬೇಕು.

(ಸೂಚನೆ-  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯ ನಿಖರತೆ, ಸಮಯ ಮತ್ತು ನೈಜತೆಯನ್ನು ಝೀ ಹಿಂದುಸ್ತಾನ್ ಕನ್ನಡ ಖಚಿತಪಡಿಸುವುದಿಲ್ಲ ಯಾವುದೇ ಸಲಹೆಯನ್ನು ಅನುಸರಿಸ್ಯ್ವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ನಿಮಗೆ ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ)

ಇದನ್ನೂ ಓದಿ-Weight Loss Foods : ಸಿಹಿ ಗೆಣಸಿನಿಂದ ಪಾಲಕ್ ವರೆಗೆ ತೂಕ ಇಳಿಸಿಕೊಳ್ಳುವ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

ಎಲೋವೆರಾ ಜ್ಯೂಸ್ ಹಾನಿಗಳು (Aloe Vera Side Effects On Health)

1 /6

1. ಗ್ಯಾಸ್ ಸಮಸ್ಯೆ - ನೀವು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅಲೋವೆರಾವನ್ನು ಸೇವಿಸಬೇಡಿ. ಇದು ಸಮಸ್ಯೆಯನ್ನು ಹೆಚ್ಚಿಸಬಹುದು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅದರ ಸೇವನೆಯನ್ನು ತಪ್ಪಿಸಬೇಕು.

2 /6

2. ಬ್ಲಡ್ ಪ್ರೆಶರ್ - ಅಲೋವೆರಾವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ರಕ್ತದೊತ್ತಡವು ಈಗಾಗಲೇ ತುಂಬಾ ಕಡಿಮೆಯಿರುವ ಜನರು, ತಮ್ಮ ವೈದ್ಯರನ್ನು ಕೇಳಿದ ನಂತರವೇ ಅದನ್ನು ಸೇವಿಸಬೇಕು.

3 /6

3. ಹೃದ್ರೋಗಿಗಳಿಗೆ ಸಮಸ್ಯೆ - ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಜನರು ಅಲೋವೆರಾ ಸೇವಿಸುವುದನ್ನು ತಪ್ಪಿಸಬೇಕು. ಅಲೋವೆರಾ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಪೊಟ್ಯಾಶಿಯಂ ಪ್ರಮಾಣ ಕಡಿಮೆಯಾಗುತ್ತದೆ, ಇದರಿಂದಾಗಿ ಅನಿಯಮಿತ ಹೃದಯ ಬಡಿತಗಳು ಮತ್ತು ದೌರ್ಬಲ್ಯವನ್ನು ಅನುಭವಿಸಬಹುದು.

4 /6

4. ಸ್ಕಿನ್ ಅಲರ್ಜಿ - ಅಲೋವೆರಾ ಜ್ಯೂಸ್ ಅನ್ನು ಜಾಗ್ರತೆಯಿಂದ ಸೇವಿಸದಿದ್ದರೆ, ಒಬ್ಬ ವ್ಯಕ್ತಿಯಲ್ಲಿ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಅವರು ಚರ್ಮದ ದದ್ದು ಅಥವಾ  ತುರಿಕೆ ಅಥವಾ ಚರ್ಮ ಉರಿತ, ಉಸಿರಾಟದ ತೊಂದರೆ, ಎದೆ ನೋವು ಮತ್ತು ಗಂಟಲಿನ ಕಿರಿಕಿರಿಯಂತಹ ಲಕ್ಷಣಗಳನ್ನು ಕಾಣಬಹುದು.

5 /6

5. ಡಿಹೈಡ್ರೇಶನ್ - ಹಲವು ಜನರು ಬೆಳಗ್ಗೆ ಎದ್ದಾಕ್ಷಣ ಆರೋಗ್ಯದಿಂದಿರಲು ಹಾಗೂ  ತೂಕ ಇಳಿಕೆಗಾಗಿ ಆಲೋವೆರಾ ಜ್ಯೂಸ್ ಕುಡಿಯುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಈ ಜ್ಯೂಸ್ ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗಬಹುದು.

6 /6

6. ಡಯೋರಿಯಾ -ನಿಮಗೆ ಮಲಬದ್ಧತೆ ಅಥವಾ ಅತಿಸಾರ ಸಮಸ್ಯೆ ಇದ್ದರೆ, ಅಲೋವೆರಾವನ್ನು ಸೇವಿಸಬೇಡಿ. ಏಕೆಂದರೆ ಇದರಲ್ಲಿರುವ ವಿರೇಚಕ ಗುಣಲಕ್ಷಣಗಳು ನಿಮ್ಮ IBS ತೊಂದರೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಇದರ ರಸವು ಆಂಥ್ರಾಕ್ವಿನೋನ್ ಎಂಬ ವಸ್ತುವನ್ನು ಹೊಂದಿರುತ್ತದೆ, ಇದು ವಿರೇಚಕವಾಗಿದೆ. ಅದರಿಂದಾಗಿ ಇದನ್ನು ಸೇವಿಸುವ ವ್ಯಕ್ತಿಯು ಅತಿಸಾರ, ಹೊಟ್ಟೆ ನೋವು ತೊಂದರೆಗೊಳಗಾಗಬಹುದು.