ಗ್ರೀನ್ ಟೀ ಸೇವನೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಮಾತ್ರವಲ್ಲ ಅಡ್ಡಪರಿಣಾಮವನ್ನೂ ಬೀರುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅತಿಯಾದ ಪ್ರಮಾಣದಲ್ಲಿ ಗ್ರೀನ್ ಟೀ ಸೇವನೆ ಕೂಡಾ ದೇಹಕ್ಕೆ ಹಾನಿಯನ್ನುಂಟು ಮಾಡಬಹುದು.
ನವದೆಹಲಿ : ಸಾಮಾನ್ಯವಾಗಿ ಗ್ರೀನ್ ಟೀ (Green Tea) ಸೇವನೆ ದೇಹಕ್ಕೆ ಉತ್ತಮ ಅನ್ನೋದನ್ನೇ ನಾವು ಕೇಳಿರುತ್ತೇವೆ. ಪ್ರತಿನಿತ್ಯ ಗ್ರೀನ್ ಟೀ ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ (Weight Loss) ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಎಲ್ಲರೂ ಗ್ರೀನ್ ಟೀ ಮೊರೆ ಹೀಗಿರುವುದನ್ನು ನಾವು ನೋಡಿದ್ದೇವೆ. ಆದರೆ ನೆನಪಿಡಿ ಅತಿಯಾದ ಗ್ರೀನ್ ಟೀ ಸೇವನೆ ನಿಮ್ಮ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು. ಗ್ರೀನ್ ಟೀಯ ಅತಿಯಾದ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಹೀಗಾದಾಗ ಸಾಮಾನ್ಯವಾಗಿಯೇ ಕಡಿಮೆ ಆಹಾರ ಸೇವಿಸುತ್ತೇವೆ. ಇದರಿಂದ ದೇಹ ಶಕ್ತಿಹೀನವಾಗುತ್ತದೆ. ಇದಾದ ನಂತರ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ಗ್ರೀನ್ ಟೀ ಸೇವಿಸಿದರೆ ಆಗುವ ದುಷ್ಪರಿಣಾಮಗಳ ಬಗ್ಗೆ ಇಲ್ಲಿ ನಾವು ಹೇಳುತ್ತೇವೆ.
ಗ್ರೀನ್ ಟೀಯಲ್ಲಿ ಕೆಫಿನ್ ಪ್ರಮಾಣವಿರುತ್ತದೆ. ಕಾಫಿಗೆ (Coffee) ಹೋಲಿಸಿದರೆ ಗ್ರೀನ್ ಟೀಯಲ್ಲಿರುವ ಕೆಫಿನ್ ಪ್ರಮಾಣ ಕಡಿಮೆಯೇ. ಆದರೂ ನವು ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್ ಟೀ ಸೇವಿಸುತ್ತಿದ್ದರೆ ಅದರ ಗಂಭೀರ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಬೀರಬಹುದು. ಅತಿಯಾದ ಗ್ರೀನ್ ಟೀ ಸೇವನೆಯಿಂದ ಉದರಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳಬಹುದು.
ಗ್ರೀನ್ ಟೀ ಹೆಚ್ಚಿನ ಪ್ರಮಾಣದಲ್ಲಿಸೇವಿಸುವುದರಿಂದ ದೇಹದಲ್ಲಿ ಐರನ್ ಅಂಶ ಕಡಿಮೆಯಾಗಬಹುದು. ಗ್ರೀನ್ ಟೀಯಲ್ಲಿರುವ ಟೆನಿನ್ ಅಂಶದಿಂದ ದೇಹದಲ್ಲಿ ಐರನ್ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ.
ಗ್ರೀನ್ ಟೀಯ ಅತಿಯಾದ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಹೀಗಾದಾಗ ಸಾಮಾನ್ಯವಾಗಿಯೇ ಕಡಿಮೆ ಆಹಾರ ಸೇವಿಸುತ್ತೇವೆ. ಇದರಿಂದ ದೇಹ ಶಕ್ತಿಹೀನವಾಗುತ್ತದೆ. ಇದಾದ ನಂತರ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ.
ಗರ್ಭವತಿಯಾದವಳು ಅತಿಯಾಗಿ ಗ್ರೀನ್ ಟೀ ಸೇವಿಸಿದರೆ ಗರ್ಭದಲ್ಲಿರುವ ಮಗುವಿಗೂ ಹಾನಿಯಾಗಬಹುದು. ಗರ್ಭಪಾತವಾಗುವ ಸಂಭವವೂ ಇರುತ್ತದೆ. ದಿನದಲ್ಲಿ 2 ಲೋಟಕ್ಕಿಂತ ಹೆಚ್ಚು ಗ್ರೀನ್ ಟೀ ಸೇವನೆ ಅಪಾಯಕಾರಿಯಾಗಿ ಮಾರ್ಪಡಾಗಬಹುದು.
ಗ್ರೀನ್ ಟೀಯಲ್ಲಿ ಆಕ್ಸಾಲಿಕ್ ಆಸಿಡ್ ಇರುತ್ತದೆ. ಆಕ್ಸಾಲಿಕ್ ಆಸಿಡ್ ಕಾರಣದಿಂದ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾಗಬಹುದು.