Skin care Tips : ತ್ವಚೆಯ ಕಾಂತಿ ಹೆಚ್ಚಿಸುತ್ತದೆ ಈ ಹಣ್ಣುಗಳ ಸಿಪ್ಪೆ

Fruit peel for face:ಉತ್ತಮ ತ್ವಚೆ ಪಡೆಯಲು ಹೊರಗಿನ ದುಬಾರಿ ಉತ್ಪನ್ನಗಳಷ್ಟೇ ಅಲ್ಲದೆ ಮನೆಯಲ್ಲಿಯೇ ಸುಲಭವಾಗಿ ಸಿಗುವ ಹಣ್ಣಿನ ಸಿಪ್ಪೆಯನ್ನು  ಕೂಡ ಬಳಸಬಹುದು.  ಈ ಲೇಖನದಲ್ಲಿ, ಚರ್ಮಕ್ಕೆ ಪ್ರಯೋಜನಕಾರಿಯಾದ 5 ಹಣ್ಣುಗಳ ಸಿಪ್ಪೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. 

Fruit peel for face: ಹೆಚ್ಚುತ್ತಿರುವ ಮಾಲಿನ್ಯ ಮತ್ತು ಹದಗೆಡುತ್ತಿರುವ ಜೀವನಶೈಲಿಯಿಂದ, ತ್ವಚೆಯ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ತ್ವಚೆಯ ಆರೈಕೆಗೆ ಸಿಗುವ ಎಲ್ಲಾ ರೀತಿಯ ಉತ್ಪನ್ನಗಳನ್ನು ಬಳಸುತ್ತಿದ್ದರೂ ಕೆಲವರಿಗೆ ಚರ್ಮದ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ರಾಸಾಯನಿಕ ಉತ್ಪನ್ನಗಳನ್ನು ಬಳಸಿದ ನಂತರ  ಸಮಸ್ಯೆ ಇನ್ನಷ್ಟು ಹದಗೆಡುತ್ತದೆ. ಹೀಗಿರುವಾಗ ಹಣ್ಣುಗಳನ್ನು ತಿಂದ ನಂತರ ಸಿಪ್ಪೆಯನ್ನು ಬಿಸಾಡುವ ಬದಲು ತ್ವಚೆಗೆ ಆ ಸಿಪ್ಪೆಗಳನ್ನು ಹಚ್ಚಿ ಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬದಲಾಗಿ ಮುಖದಲ್ಲಿ ಹೊಸ ಹೊಳಪು ಕಾಣಿಸಿಕೊಳ್ಳುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

 ಮಾವಿನ ಹಣ್ಣಿನ ಸಿಪ್ಪೆಯನ್ನು ಎಸೆಯುವ ಬದಲು, ಅದನ್ನು ಚರ್ಮದ ಮೇಲೆ ಹಚ್ಚಿದರೆ ಸುಕ್ಕುಗಳ ಸಮಸ್ಯೆ ನಿವಾರಣೆಯಾಗುತ್ತದೆ. ಮಾವಿನ ಹಣ್ಣಿನ ಸಿಪ್ಪೆಯನ್ನು ನೇರವಾಗಿ ಚರ್ಮದ ಮೇಲೆ ಹಚ್ಚಬಹುದು, ಅಥವಾ ಪುಡಿಮಾಡಿ ಫೇಸ್ ಪ್ಯಾಕ್ ತಯಾರಿಸಬಹುದು.  

2 /5

ಪಪ್ಪಾಯಿ ಸಿಪ್ಪೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಪಪ್ಪಾಯಿ ಸಿಪ್ಪೆಯು ಚರ್ಮದ ಶುಷ್ಕತೆಯನ್ನು ಹೋಗಲಾಡಿಸುತ್ತದೆ ಮತ್ತು  ಮೈಬಣ್ಣವನ್ನು ಸುಧಾರಿಸುತ್ತದೆ.   

3 /5

ಬಾಳೆಹಣ್ಣು ತಿಂದ ನಂತರ ಸಿಪ್ಪೆಯನ್ನು ಎಸೆಯಬೇಡಿ, ಬದಲಿಗೆ ಅದನ್ನು ಚರ್ಮದ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ಒಮ್ಮೆ ಅಥವಾ ಎರಡು ಬಾರಿ ಬಳಸಿದ ತಕ್ಷಣ ಚರ್ಮದ ಬಣ್ಣದಲ್ಲಿ ಆಗುವ ಪರಿಣಾಮ ತಿಳಿಯುತ್ತದೆ. 

4 /5

ಸೇಬು ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಅದರ ಸಿಪ್ಪೆಯು ನಿಮ್ಮ ತ್ವಚೆಗೂ ಅಷ್ಟೇ ಪ್ರಯೋಜನಕಾರಿ. ಸೇಬಿನ ಸಿಪ್ಪೆಯನ್ನು ಚೆನ್ನಾಗಿ ಅರೆದು ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

5 /5

ಕಿತ್ತಳೆ ಹಣ್ಣಿನಂತೆ, ಸಿಪ್ಪೆಯು ಅನೇಕ ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ, ಇದು ಚರ್ಮಕ್ಕೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಕಿತ್ತಳೆ ಸಿಪ್ಪೆಯನ್ನು ಚರ್ಮದ ಮೇಲೆ ಉಜ್ಜಬಹುದು ಅಥವಾ ಪೇಸ್ಟ್ ತಯಾರಿಸಿ ಹಚ್ಚಬಹುದು.